ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಂಡ್ಯ: ರಾಜಾಸ್ಥಾನ ಮೂಲಕ ಮಾರ್ವಾಡಿ ವ್ಯಕ್ತಿಯೋರ್ವನನ್ನು ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ವಿದ್ಯಾನಗರದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಬುಂಡಾರಾಮ್(27) ಎಂದು ಗುರುತಿಸಲಾಗಿದ್ದು, ಈತ ಮಂಡ್ಯದ ಗುತ್ತಲು ರಸ್ತೆಯಲ್ಲಿ ಹಾರ್ಡ್’ವೇರ್ ಅಂಗಡಿ ವ್ಯವಹಾರ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ವಿದ್ಯಾನಗರ ಎರಡನೇ ಕ್ರಾಸ್’ನಲ್ಲಿರುವ ನಿವಾಸದ ಮೂರು ಅಂತಸ್ತಿನ ಮನೆಯಲ್ಲಿ ಹೆಂಡತಿ-ಮಕ್ಕಳನ್ನು ಕಟ್ಟಿ ಹಾಕಿ ದುಷ್ಕೃತ್ಯ ಎಸಗಲಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.
Get in Touch With Us info@kalpa.news Whatsapp: 9481252093















