ನವದೆಹಲಿ: ಮುಂಬೈ ದಾಳಿ ಮಾಸ್ಟರ್ ಮೈಂಡ್ ಭಾರತದ ವಿರುದ್ಧ ಮತ್ತೆ ವಿಷ ಉಗುಳಲು ಆರಂಭಿಸಿದ್ದು, 2018ರ ವರ್ಷ ಭಾರತೀಯ ಸೇನೆ ಹಾಗೂ ಕಾಶ್ಮೀರದಲ್ಲಿ ಸುತ್ತುವರೆದಿರುವ ಭಾರತೀಯ ಯೋಧರಿಗೆ ಕಷ್ಟದ ವರ್ಷ ಎಂದು ಹೇಳುವ ಮೂಲಕ ಬೆದರಿಕೆ ಹಾಕಿದ್ದಾನೆ.
ವೈತ್ ಎಂಬ ಆನ್‌ಲೈನ್ ಮ್ಯಾಗಜೀನನ್ನು ಹಫೀಜ್ ಆರಂಭಿಸಿದ್ದು, ಇದರ ಮೊದಲ ಸಂಚಿಕೆಯಲ್ಲಿಯೇ ಬೆದರಿಕೆ ಹಾಕಿದ್ದಾನೆ.
ಕಾಶ್ಮೀರವನ್ನು ಗುರಿಯಾಗಿಸಿಕೊಂಡು ಮೊದಲ ಪ್ರತಿಯನ್ನು ಹೊರತಂದಿದ್ದು, 2017ರಲ್ಲಿ ಎಲ್‌ಇಟಿ ನಡೆಸಿದ ದಾಳಿಗಳ ವಿಚಾರವನ್ನು ಪ್ರಸ್ತಾಪಿಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಪ್ರಮುಖವಾಗಿ ಉಗ್ರರ ಪರವಾಗಿ ವಕಾಲತ್ತು ವಹಿಸುವ ಅಬ್ದುಲ್ಲಾ ಗಜ್ನವಾಯಿಯ ಸಂದರ್ಶನವನ್ನೂ ಸಹ ಪ್ರಕಟಿಸಲಾಗಿದೆ.
ವೈತ್ ಜೊತೆಯಲ್ಲಿ ಮಾತನಾಡಿರುವ ಅಬ್ದುಲ್ಲಾ, ಉಗ್ರವಾದದಿಂದ ಜನಸಾಮಾನ್ಯರಿಗೆ ತೊಂದರೆಯಾತ್ತದೆ. ಆದರೆ, ಜಮ್ಮು ಕಾಶ್ಮೀರದ ಜನರ ಆಶೋತ್ತರವನ್ನು ಈಡೇರಿಸುವಲ್ಲಿ ಎಲ್‌ಇಟಿ ಶ್ರಮಿಸುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾನೆ.
Discussion about this post