ಕಲ್ಪ ಮೀಡಿಯಾ ಹೌಸ್ | ಥಾಣೆ |
ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವಾಸೈ ರಸ್ತೆ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲೊಂದರ ಮುಂಭಾಗ ಪತ್ನಿಯನ್ನು ತಳ್ಳಿ ಕೊಲೆಗೈದ ಆರೋಪದ ಮೇರೆಗೆ ಠಾಣೆ ಪೊಲೀಸರು ವ್ಯಕ್ತಿಯೊರ್ವನನ್ನು ಬಂಧಿಸಿದ್ದಾರೆ.
ಈ ಕುರಿತು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಸೋಮವಾರ ಸಂಜೆ 4 ಗಂಟೆ ಸುಮಾರಿನಲ್ಲಿ ರೈಲ್ವೆ ಪ್ಲಾಟ್‍ಫಾರ್ಮ್ ಬೆಂಚ್‍ನಲ್ಲಿ ಮಲಗಿದ್ದ ಮಹಿಳೆಯನ್ನು ವ್ಯಕ್ತಿ ಎಬ್ಬಿಸಿದ್ದಾನೆ. ನಂತರ ಕೆಲವು ಸೆಕೆಂಡುಗಳ ಕಾಲ ಇಬ್ಬರು ಮಾತನಾಡುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದ್ದಂತೆ ಮಹಿಳೆಯನ್ನು ಹಳಿಗಳ ಕಡೆಗೆ ಎಳೆದುಕೊಂಡು ಹೋಗಿ ರೈಲು ಬರುತ್ತಿದ್ದಂತೆ ಅವಳನ್ನು ಏಕಾಏಕಿ ತಳ್ಳಿದ್ದಾನೆ. ಬಳಿಕ ಮಹಿಳೆ ಮೇಲೆ ಅವಧ್ ಎಕ್ಸ್‍ಪ್ರೆಸ್ ರೈಲು ಹರಿದು ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.

Also read: ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ: ಸಂಸದ ವೈ. ದೇವೇಂದ್ರಪ್ಪ
ಘಟನೆ ನಂತರ ಕೂಡಲೇ ವ್ಯಕ್ತಿ ಪಕ್ಕದಲ್ಲಿಯೇ ಮಲಗಿದ್ದ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಪರಾರಿಯಾಗುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಸೋಮವಾರ ತಡರಾತ್ರಿ ಥಾಣೆಯ ಬಿವಾಂಡಿ ಪಟ್ಟಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.
ಪತ್ನಿಯ ನಡತೆ ಬಗ್ಗೆ ಪತಿಗೆ ಅನುಮಾನವಿತ್ತು. ಇದೇ ಈ ಘಟನೆಗೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.










Discussion about this post