ಕಲ್ಪ ಮೀಡಿಯಾ ಹೌಸ್ | ತವಾಂಗ್ ಸೆಕ್ಟರ್(ಅರುಣಾಚಲ ಪ್ರದೇಶ) |
ಇಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಗಡಿ ಪ್ರವೇಶಿಸಲು ಯತ್ನಿಸಿದ ಚೀನಾ ಸೇನಾ ಯೋಧರು ಭಾರತೀಯ ಸೇನೆಯ ಅಬ್ಬರಕ್ಕೆ ಹಿಂದಕ್ಕೆ ಕಾಲ್ಕೀಳುತ್ತಿದೆ.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿನ ಗಡಿ ನಿಯಂತ್ರಣ ರೇಖೆ ಬಳಿ ಚೀನಾ ಸೇನೆಯನ್ನು ಗಡಿಯೊಳಕ್ಕೆ ಪ್ರವೇಶಿಸಲು ಭಾರತೀಯ ಸೇನೆ ಅನುವು ಮಾಡಿಕೊಟ್ಟಿಲ್ಲ. ಇದರ ಬೆನ್ನಲ್ಲೇ ಘರ್ಷಣೆ ಹೆಚ್ಚಾಗಿದೆ. ಗಡಿ ನಿಯಂತ್ರಣ ರೇಖೆ ಮೂಲಕ ಭಾರತದ ಗಡಿಯೊಳಕ್ಕೆ ಪ್ರವೇಶಿಸಲು ಚೀನಾ ಯತ್ನಿಸಿದೆ. ಈ ವೇಳೆ ಚೀನಾ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ಭಾರತೀಯ ಸೇನೆ ಕೂಡ ಗುಂಡಿನ ದಾಳಿ ನಡೆಸಿ ಚೀನಾ ಸೇನೆಯನ್ನು ಹಿಮ್ಮೆಟ್ಟಿಸಿದೆ.

ನಮ್ಮ ಗಡಿಯೊಳಗೆ ಚೀನೀ ಸೈನಿಕರ ಉಲ್ಲಂಘನೆಯ ಪ್ರಯತ್ನವನ್ನು ನಿಲ್ಲಿಸಲು ನಮ್ಮ ಸಶಸ್ತç ಪಡೆಗಳು ಯಾವಾಗಲೂ ಸಿದ್ಧವಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ Minister Rajnath Singh ತಿಳಿಸಿದ್ದಾರೆ.
Also read: ಕೃಷಿ ಆಧುನೀಕರಣದ ಭರಾಟೆಯಲ್ಲಿ ಪುಷ್ಟಿ ದಾಯಕ ಆಹಾರದ ಕೊರತೆ: ಡಾ. ಕೇಶವಕೊರ್ಸೆ ವಿಷಾಧ
ಘಟನೆ ಕುರಿತಂತೆ ಲೋಕಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಶಸ್ತç ಪಡೆಗಳು ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿವೆ, ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯ, ಶೌರ್ಯ ಮತ್ತು ಬದ್ಧತೆಯನ್ನು ದೇಶದ ನಾಗರಿಕರು ಮತ್ತು ಸರ್ಕಾರ ಗೌರವಿಸುತ್ತದೆ ಎಂಬ ವಿಶ್ವಾಸವಿದೆ ಎಂದರು.

ಈ ಮುಖಾಮುಖಿ ಘರ್ಷಣೆಯಲ್ಲಿ ಎರಡೂ ಕಡೆಯ ಕೆಲವು ಸೈನಿಕರು ಗಾಯಗೊಂಡರು. ನಮ್ಮ ಸೈನಿಕರಲ್ಲಿ ಯಾರೂ ಹುತಾತ್ಮರಾಗಿಲ್ಲ ಮತ್ತು ಗಂಭೀರ ಗಾಯವನ್ನು ಅನುಭವಿಸಿಲ್ಲ. ಭಾರತೀಯ ಸೇನಾ ಕಮಾಂಡರ್’ಗಳ ಸಮಯೋಚಿತ ಮಧ್ಯಸ್ಥಿಕೆಯೊಂದಿಗೆ ಗಡಿ ವಾಸ್ತವ ರೇಖೆಯಿಂದ ಸದ್ಯ ಸೈನಿಕರು ಹಿಂದಕ್ಕೆ ಹೋಗಿದ್ದು, ಘರ್ಷಣೆಯಲ್ಲಿ ಎರಡೂ ಕಡೆಯ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದರು.












Discussion about this post