ಯಾವುದೇ ವಿಷಯವನ್ನು ಓದುವುದಕ್ಕೆ ಮುನ್ನ ಓದಲಿರುವ ವಿಷಯದ ಬಗೆಗೆ ಒಂದು ನಿರೀಕ್ಷಾ ಸ್ವಾರಸ್ಯವನ್ನು ಇಟ್ಟುಕೊಂಡಿರುತ್ತೇವೆ.
- ಕಥೆಯೆಂದರೆ – ಸಮಾಜದ ನೈಜ ಘಟನೆಗಳು
- ನಾಟಕವೆಂದರೆ – ಹಲವಾರು ಪಾತ್ರಗಳಿಂದ ರಸಸೃಷ್ಟಿ
- ಹಾಡೆಂದರೆ – ರಾಗ ಮಿಶ್ರಿತ ಲಯ-ತಾಳಗಳಿಂದ ಕೂಡಿದ ರಸದೌತಣ
- ಚರಿತ್ರೆ ಎಂದರೆ- ದೇಶ-ವಿದೇಶಗಳಲ್ಲಿನ ಪ್ರಯಾಣವಾದ ಅಂಶಗಳು ಹೀಗೆ
ಗೀತೆ ಎಂದರೆ ನಮಗೆ ಮೊದಲು ಮೂಡುವಚಿತ್ರಣ ಯಾವುದು?
ಗೀತೆಯನ್ನು ಹಲವಾರು ಪಂಡಿತರು, ಮತಾಚಾರ್ಯರುಗಳೂ, ಭಾರತ್ಯೇತರ ತತ್ವವಿಧ್ಯಾ ವಿಚಾರವಾದಿಗಳೂ ಎಲ್ಲರೂ ಒಪ್ಪಿದ್ದಾರೆ. ನಾವೂ ಎಲ್ಲೋ ಇದರ ಲೋಕ ಪ್ರಸಿದ್ಧಿಯ ಆಕರ್ಷಣೆಯಿಂದ ಪ್ರೇರೆಪಿತರೆ?
ಈ ಪ್ರಶ್ನೆಗೆ ಸದ್ಯ ನಮ್ಮಲ್ಲಿ ಉತ್ತರವಿಲ್ಲಾ!
ನಮ್ಮ ಪೂರ್ವಕರು, ಗೀತೆಯನ್ನು ಮೋಕ್ಷಶಾಸ್ತ್ರವಾಗಿ ಕಂಡರು. ಅವರ ವಸ್ತು- ಸ್ಥಿತಿ ಗಮನಿಸೋಣ – ಈ ಹಿಂದೆ ನೂರಿನ್ನೂರು ವರ್ಷಗಳ ಹಿಂದೆ ಮುಖ್ಯ ಜೀವಿಕಾ ವೃತ್ತಿ ವ್ಯವಸಾಯ, ಪಶುಪಾಲನೆಗಳು, ಮಳೆ ಕಾಲಕ್ಕೆ ಸರಿಯಾಗದಿದ್ದರೂ ಪಶು ಸಾಕಾಣಿಕೆಯಿಂದ ಒಂದೆರಡು ವರುಷಗಳನ್ನು ತಳ್ಳಿಬಿಡುತ್ತಿದ್ದರು, ಮೇಲಾಗಿ ಅವರು ದಿನದಗೂಲಿಗೆ ಬೇರೆ ರಾಷ್ಟ್ರಗಳೊಂದಿಗೆ ಸಾಧಿಸಬೇಕಾಗಿರಲಿಲ್ಲ!
ಅವರ ಜೀವನ ಸೊಗಸಿನಿಂದ ಕೂಡಿತ್ತು. ಇಹವು ಭಾರವೆನಿಸದೆ ಸಹ್ಯವಾಗಿತ್ತು. ಇಹದ ಹಂಗು ತೊರೆದವರಿಗೆಲ್ಲವೆ ಮೋಕ್ಷ! ಇದು ಪೂರ್ಣ ಮೋಕ್ಷದ ವಿಷಯವಲ್ಲವೇ?
ನಾವಾದರೂ ಇನ್ನೂ ತರುಣರು, ಜಗವನ್ನೇ ಅರಿಯದವರು. ನಮಗೆ ಹೇಗೆ ಉಪಯುಕ್ತವಾದೀತು? ಕ್ಲಿಷ್ಟ ಸಂಧರ್ಭಗಳು ಬಂದರೆ ಚದುರದ ಮನಹೊತ್ತ ವ್ಯಕ್ತಿಯಿಲ್ಲ. ನಮ್ಮ ಮನಸ್ಸುಗಳು ತಲ್ಲಣದಲ್ಲದ್ದರೆ; ನಮಗೆ ಒಂದು ಧೈರ್ಯವಿರಬೇಕು!
ನಮ್ಮ ನಂಬಿಕೆಗಳೇ ಚದುರಿ ಅಲುಗಾಡುತ್ತಿದೆ, ಮನಸ್ಸು ಒಂದುಕಡೆಯಿರದೆ ನೆಲೆರಹಿತವಾಗಿದೆ. ನಮ್ಮ ಭವಿಷ್ಯವು ಸಂದೇಹಗಳಿಂದ ಕೂಡಿದೆ. ನಾಳೆ ಹೇಗೆ ಎಂದರೆ ನಾಳೆ ಹೇಗೋ ಹಾಗೆ’ ಎಂದು ನುಡಿಯುವ ವಾಕ್ಚಿತ್ತತೆಯೂ ಇಲ್ಲ.
ಹೀಗಿರುವಾಗ ಸಂದೇಹದಿಂದ ಕೂಡಿದ ಮನಕೆ ಒಂದು ಭರವಸೆ ಬೇಕು. ಹಾಗಿದ್ದರೆ ಭಗವದ್ಗೀತೆ ನಮ್ಮ ಭರವಸೆಯಾದೀತೆ? ಹೌದು ನಮ್ಮ ಜೀವನಕ್ಕೆ ಇಂಥ ಎರವಲನ್ನು ಅದರಿಂದ ಪಡೆಯಬಹುದು ಎಂದು ಅದರ ವಾಕ್ಯಗಳಿಂದಲೇ ಸ್ಪಷ್ಟ ಪ್ರಮಾಣವಾಗುತ್ತದೆ.
(ಮುಂದುವರೆಯುವುದು)
Discussion about this post