ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ ಈ ಬಾರಿಯ ಅಮೆರಿಕಾ ಪ್ರವಾಸ ಹಲವು ಇತಿಹಾಸಗಳನ್ನು ವಿಶ್ವದ ಪುಟಗಳಿಗೆ ಸೇರಿಸಿದ್ದು, ಇದರಲ್ಲಿ ನಮ್ಮ ಕರುನಾಡಿನ ಓರ್ವ ಬಾಲಕನೂ ಸಹ ಸೇರಿರುವುದು ವಿಶೇಷ.
ಹೌದು… ನಿನ್ನೆ ರಾತ್ರಿ ಹೌಡಿ…ಮೋದಿ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ನೆರೆದಿದ್ದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಅಚ್ಚರಿಗೊಂಡಿದ್ದಾರೆ. ಈ ಕಾರ್ಯಕ್ರಮ ಮುಗಿಸಿಕೊಂಡು ಹೊರಡುತ್ತಿದ್ದ ಟ್ರಂಪ್ ಹಾಗೂ ಮೋದಿಯವರಿಗೆ ಅಲ್ಲಿದ್ದ ಕಲಾವಿದರು ಕರಜೋಡಿಸಿ ದೂರದಿಂದಲೇ ನಮಸ್ಕಾರ ಮಾಡುತ್ತಿದ್ದರು. ಆದರೆ, ಅಲ್ಲಿ ನಿಂತಿದ್ದ ಓರ್ವ ಬಾಲಕ ಮಾತ್ರ ತೆರಳುತ್ತಿದ್ದ ಈ ಇಬ್ಬರು ಬಲಿಷ್ಠಾತಿಬಲಿಷ್ಠ ನಾಯಕರನ್ನು ತಡೆದು ನಿಲ್ಲಿಸಿ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆ ಬಾಲಕನೇ ನಮ್ಮ ಉತ್ತರ ಕನ್ನಡ ಜಿಲ್ಲೆಯ ಸಾತ್ವಿಕ್ ಹೆಗಡೆ.
Memorable moments from #HowdyModi when PM @narendramodi and @POTUS interacted with a group of youngsters. pic.twitter.com/8FFIqCDt41
— PMO India (@PMOIndia) September 23, 2019
ಟೆಕ್ಸಾಸ್’ನಲ್ಲಿ ನೆಲೆಸಿರುವ ಪ್ರಭಾಕರ್-ಮೇಧಾ ಹೆಗಡೆ ದಂಪತಿ ಪುತ್ರನಾದ ಸಾತ್ವಿಕ್ ಅಲ್ಲಿನ ಶಾಲೆಯೊಂದರಲ್ಲಿ 6ನೆಯ ತರಗತಿ ಕಲಿಯುತ್ತಿದ್ದಾನೆ.ಇಡಿಯ ವಿಶ್ವವೇ ತಲೆದೂಗುವ ಇಬ್ಬರು ಪ್ರಭಾವಿ ನಾಯಕರನ್ನೇ ತಡೆದು ನಿಲ್ಲಿಸಿ, ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಈ ಬಾಲಕ ಫೋಟೋಗಳನ್ನು ವೈಟ್ ಹೌಸ್ ಶೇರ್ ಮಾಡಿದ್ದು, ಇದರ ವೀಡಿಯೋವನ್ನು ಭಾರತದ ಪ್ರಧಾನಿ ಕಚೇರಿ ಹಂಚಿಕೊಂಡಿದೆ.
🇺🇸🇮🇳 pic.twitter.com/bveNOFZKEk
— The White House (@WhiteHouse) September 23, 2019
Discussion about this post