ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರೀಯ ಮಂಡಳಿಗೆ ಅರೆಕಾಲಿಕ ನಿರ್ದೇಶಕರಾಗಿ ತಮಿಳು ನಿಯತಕಾಲಕೆ ತುಘಲಕ್ ಸಂಪಾದಕ ಎಸ್. ಗುರುಮೂರ್ತಿ ಹಾಗೂ ಸತೀಶ್ ಮರಾಠೆ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತಂತೆ ನೇಮಕಕ್ಕೆ ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮತಿ ನೀಡಿದೆ.
ಗುರುಮೂರ್ತಿಯವರು ಸಿಎ ಆಗಿದ್ದು, ಆರ್ಥಿಕ ಹಾಗೂ ರಾಜಕೀಯ ಅಂಕಣಕಾರರೂ ಆಗಿರುವುದು ವಿಶೇಷ.
15 ಸದಸ್ಯರನ್ನು ಒಳಗೊಂಡಿರುವ ಈ ಉನ್ನತ ನಿರ್ದೇಶಕರ ಸಮಿತಿಗೆ ಈಗ ನೇಮಕವಾಗಿರುವ ಇಬ್ಬರೂ ಮುಂದಿನ ನಾಲ್ಕು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದಾರೆ.
Discussion about this post