ಕೊಡಗು: ಜಿಲ್ಲೆಯಲ್ಲಿ ಸಂಭವಿಸಿರುವ ಭೀಕರ ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸುವ ವೇಳೆಯೇ ಬೃಹತ್ ಗುಡ್ಡ ಕುಸಿದಿದ್ದು, ಸ್ವಲ್ಪದರಲ್ಲೇ ಅದೃಷ್ಟವಶಾತ್ ಭಾರೀ ಅನಾಹುತ ಸಂಭವಿಸಿದೆ.
ಈ ಕುರಿತಂತೆ ಮುಖ್ಯಮಂತ್ರಿಗಳ ಅಧಿಕೃತ ಟ್ವೀಟರ್‌ನಲ್ಲಿ ವೀಡಿಯೋ ಶೇರ್ ಮಾಡಿದ್ದು, ಗುಡ್ಡ ಕುಸಿತದ ಭೀಕರತೆ ಇದರಲ್ಲಿ ದಾಖಲಾಗಿದೆ.
ಪ್ರಮುಖ ರಸ್ತೆಯಲ್ಲಿ ಈಗಾಗಲೇ ಕುಸಿದು ಅಡಚಣೆಯಾಗಿದ್ದ ಮಣ್ಣನ್ನು ತೆರವು ಮಾಡುವ ಕಾರ್ಯ ನಡೆಯುತ್ತಿತ್ತು. ಆದರೆ, ಈ ವೇಳೆಯೇ ಹಿಂಬದಿಯ ಬೃಹತ್ ಗುಡ್ಡ ಕುಸಿದಿದ್ದು, ಕೂದಲೆಳೆ ಅಂತರದಲ್ಲಿ ಸಿಬ್ಬಂದಿಗಳು ಪಾರಾಗಿದ್ದಾರೆ.
ವೀಡಿಯೋ ನೋಡಿ:
ಅತಿವೃಷ್ಟಿ ಪೀಡಿತ ಕೊಡಗು ಜಿಲ್ಲೆಯಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಗೆ ಹೆಚ್ಚುವರಿ ಸೇನಾ ಸಿಬ್ಬಂದಿ ಯನ್ನು ನಿಯೋಜಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಡಿದ ಮನವಿಗೆ ಸ್ಪಂದಿಸಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.#KarnatakaRains #Kodagu pic.twitter.com/YeRtPb1a4A
— CM of Karnataka (@CMofKarnataka) August 17, 2018
Discussion about this post