ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ಸಮೀಪದ ಬೇವಿನಹಳ್ಳಿಯ ಕಿರ್ಲೋಸ್ಕರ್ ಕಾರ್ಖಾನೆಯು ‘‘ದಿ ಎಕನಾಮಿಕ್ ಟೈಮ್ಸ್’’ ಪತ್ರಿಕೆಯ ಸಮಾಜಸೇವಾ ಕ್ಷೇತ್ರದಲ್ಲಿ ನೀಡುವ ಕಾಪೋರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಾಯಕತ್ವ ಪ್ರಶಸ್ತಿಗೆ ಭಾಜನವಾಗಿದೆ.
ಮುಂಬೈನ ಹೋಟಲ್ ತಾಜ್ ಲ್ಯಾಂಡ್ಸ್ ಎಂಡ್‌ನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ‘‘ ವರ್ಲ್ಡ ಸಿಎಸ್‌ಆರ್ ಡೇ’’ ಸಮಾರಂಭದಲ್ಲಿ ಸಮುದಾಯದ ಅಭಿವೃದ್ದಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಂಪನಿಯ ಅದಿಕಾರಿಗಳಾದ ಕಿರಣ್ ಶೇಜೆಕರ್, ಹೃಷಿಕೇಶ್ ಕುಲಕರ್ಣಿ ಮತ್ತು ಉಧವ್ ಕುಲಕರ್ಣಿ ಇವರುಗಳು ಪ್ರಶಸ್ತಿ ಸ್ವೀಕರಿಸಿದರು.
ಪತ್ರಿಕೆಯು ಪ್ರತಿ ವರ್ಷ ಸಾಂಸ್ಥಿಕ ವಿಭಾಗದಲ್ಲಿ 20 ವೈಯಕ್ತಿಕ ವಿಭಾಗದಲ್ಲಿ 8 ಪ್ರಶಸ್ತಿಗಳನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಕಿರ್ಲೋಸ್ಕರ್ ಕಾರ್ಖಾನೆಗೆ ಸಮುದಾಯದ ಅಭಿವೃದ್ದಿ ಮತ್ತು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಪ್ರಶಸ್ತಿ ಲಭಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಕಂಪನಿಯ ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗದ ಹಿರಿಯ ಉಪಾದ್ಯಾಕ್ಷರಾದ ಪಿ. ನಾರಾಯಣ, ಕಂಪನಿಯು ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ದಿ ಟ್ರಸ್ಟ್ ರಚಿಸಿಕೊಂಡು ಸಮಾಜ ಸೇವೆ ಮಾಡುತ್ತಿದೆ. ಗ್ರಾಮೀಣಾಭಿವೃದ್ದಿ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ ಎಂದರು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಆರ್.ವಿ. ಗುಮಾಸ್ತೆಯವರು ಪ್ರಶಸ್ತಿ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
(ವರದಿ: ಮುರಳೀಧರ ನಾಡಿಗೇರ್, ಕೊಪ್ಪಳ)
Get in Touch With Us info@kalpa.news Whatsapp: 9481252093
Discussion about this post