ಶಿವಮೊಗ್ಗ: ಹಿರಿಯರ ಅನುಭವ ನಮ್ಮ ಸಮಜಕ್ಕೆ ದಾರಿ ದೀಪ. ಅವರ ಜ್ಞಾನಸಂಪತ್ತನ್ನು ಇಂದಿನ ಪೀಳಿಗೆ ಯುಕ್ತವಾಗಿ ಬಳಸಿಕೊಳ್ಳಬೇಕು. ಅಮೃತಘಳಿಗೆಯಲ್ಲಿ ಸಿಹಿಮೊಗೆ ವಿಶ್ರಾಂತ ನೌಕರರ ಸಂಘ ಆರಂಭಗೊಂಡಿದೆ. ವರ್ಷಪೂರ್ತಿ ಚಟುವಟಿಕೆಯನ್ನು ಹಮ್ಮಿಕೊಂಡು ಇಡೀರಾಜ್ಯಕ್ಕೆ ಮಾದರಿಯಗುವ ಸಾಧನೆ ನಿಮ್ಮಿಂದಾಗಲಿ. ಶಿವಮೊಗ್ಗ ಜಿಲ್ಲೆ ಪ್ರಗತಿಶೀಲರಿಂದ ತುಂಬಿದ್ದು ಅಭಿವೃದ್ಧಿ ಮತ್ತು ಸಂಸ್ಕೃತಿಯ ಹಿನ್ನೆಲೆಯಿಂದ ಸಾಕಷ್ಟು ಹೆಸರು ಪಡೆದಿದೆ .ಈ ಸಂಘವು ಬಹಳಬೇಗ ಸಮಾಜದ ಒಳಿತಿಗೆ ಪೋಷಕವಾಗಿರುವ ಕಾರ್ಯಕ್ರಮ ಹಮ್ಮಿಕೊಳ್ಳಲಿಸಂಘದ ಪ್ರಗತಿಪರ ಚಟುವಟಿಕೆಗಳಿಗೆ ನನ್ನಸಹಕಾರವಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ನೂತನವಾಗಿ ಆರಂಭಗೊಂಡ ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘವನ್ನು ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿವಮೊಗ್ಗದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಸಸಿಗೆ ನೀರೆರೆಯುವುದರ ಮೂಲಕ ಸಂಘವನ್ನು ವಿಶೇಷವಾದ ರೀತಿಯಲ್ಲಿ ಉದ್ಘಾಟಿಸಿದರು.
ಪ್ರಸ್ತುತ ಶಿವಮೊಗ್ಗೆಯನ್ನು ಕೇಂದ್ರವಾಗಿಸಿ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳನ್ನು ಸೇರಿಸಿಕೊಂಡು ಒಂದು ಪ್ರವಾಸಿಯಾನ ಸೂಚಿ ಯೋಜನೆಯು ಕೇಂದ್ರ ಸರ್ಕಾರದಿಂದ ಮಂಜೂರಾಗಿದೆ. ಈ ಯೋಜನೆಯಲ್ಲಿ ಸುಮಾರು ಪ್ರಸ್ತುತ ಇಪ್ಪತ್ತು ಕೋಟಿ ರೂಪಾಯಿಗಳನ್ನ ಮೀಸಲಿರಿಸಲಾಗಿದೆ ಎಂದರು.
ಶಿವಮೊಗ್ಗದಲ್ಲಿ ಇಎಸ್‌ಐ ಆಸ್ಪತ್ರೆಯೂ ನಿರ್ಮಾಣಗೊಳ್ಳಲಿದೆ. ಈಗಾಗಲೇ ಜನಶತಾಬ್ದಿ ರೈಲು ಸಾರ್ವಜನಿಕರಿಗಾಗಿ ಓಡಾಟಸೇವೆ ಆರಂಭಗೊಂಡಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಸಂಘದ ಹಿರಿಯರೊಂದಿಗೆ ಚರ್ಚಿಸುತ್ತೇನೆ. ನಿಮ್ಮ ಸಲಹೆ ಮಾರ್ಗದರ್ಶನ ಅವಶ್ಯಬೇಕು ಎಂದು ಕೋರಿದರು.
ನಂತರ ಸಂಸದರು ವಿಶೇಷವಾಗಿ ಡಿಜಿಟಲ್ ತಂತ್ರಜ್ಞಾನ ಆಧರಿಸಿ ನಿರ್ಮಾಣಗೊಂಡ ಸಂಘದ ಅನಿಮೇಷನ್ ಚಿನ್ಹೆಯನ್ನು ಲ್ಯಾಪ್ ಟಾಪ್ ನ ಕೀ ಒತ್ತಿ ತೆರೆಯ ಮೇಲೆ ಪ್ರದರ್ಶಿಸುವ ಮೂಲಕ ಬಿಡುಗಡೆ ಮಾಡಿದರು.
ವಿಧಾನ ಪರಿಷತ್ ಸದಸ್ಯರುಗಳಾದ ಆರ್. ಪ್ರಸನ್ನಕುಮಾರ್. ಎಸ್. ರುದ್ರೇಗೌಡ, ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯ ವೀರಭದ್ರಪ್ಪ ಪೂಜಾರ್ , ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಭಿನವ ಖರೆ, ರಾಷ್ಟಿಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸಂಘದ ಗೌರವ ಅಧ್ಯಕ್ಷ ಟಿ.ಜೆ. ರವಿಕುಮಾರ್ ಉಪಸ್ಥಿತರಿದ್ದ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ.ಓ.ಶಿವಕುಮರ್ ವಹಿಸಿದ್ದರು.
ನಿವೃತ್ತಿ ಪಡೆದಾಕ್ಷಣ ತಮ್ಮ ವೇಳೆಯನ್ನ ಚಾಂಚಲ್ಯಗಳಲ್ಲಿ ಸಾಮಾನ್ಯವಾಗಿ ಕಳೆಯುವ ಪ್ರವೃತ್ತಿಯನ್ನು ಕಾಣುವ ಇಂದಿನ ಕಾಲದಲ್ಲಿ ಸಮಾಜಸೇವೆಯನ್ನ ಆದರ್ಶವಾಗಿರಿಸಿ ಮುಂದಡಿಯಿಟ್ಟರುವ ಈ ಸಂಘದ ಧ್ಯೇಯ ಶ್ಲಾಘನೀಯ. ನಿಮ್ಮ ಸಂಘದ ಸಾಮಾಜಿಕ ಕಾರ್ಯಗಳಿಗೆ ನಾನು ಸಹಾಯಹಸ್ತ ನೀಡುವೆ ಎಂದು ಶಾಸಕ ಪ್ರಸನ್ನ ಕುಮಾರ್ ಭರವಸೆ ನೀಡಿದರು.
ಅವರು ಸಂಘದ ಕೈಪಿಡಿ ” ಪ್ರಸ್ತುತಿ ” ಪ್ರತಿಯನ್ನ ಬಿಡುಗಡೆ ಮಾಡಿದರು.
ದೇಶ ಕಟ್ಟುವ ಕೆಲಸ ಒಬ್ಬರಿಂದ ಸಾಧ್ಯವಿಲ್ಲ.ಹಾಗೆಯೇ ಸಮಾಜದ ಉನ್ನತಿಗೆ ಶ್ರಮಿಸಲೂ ಒಬ್ಬರಿಂದ ಸಾಧ್ಯವಿಲ್ಲ. ಸಂಘಟವೆಯಿಂದ ಎಂತಹ ಅಸಾಮಾನ್ಯ ಸಾಧನೆ ಮಾqಲು ಸಾಧ್ಯ. ಈಗ ಉದ್ಘಾಟನೆಗೊಂಡಿರುವ ಸಂಘವು ಅಂತಹ ಸಾಧನೆ ಮಾಡುವಂತಾಗಲಿ ಎಂದು ನಾಗರಾಜ್ ಆಶಿಸಿದರು. ಅವರು ವಯೋಮಾನದಲ್ಲಿ ಅತ್ಯಂತ ಹಿರಿಯರಾದ ಆಯ್ದ ಐದು ಮಂದಿ ಸದಸ್ಯರಿಗೆ ಗೌರವಪೂರ್ವಕ ಸತ್ಕರಿಸಿದರು.
ಸಂಘದ ಚಟುವಟಿಕೆಗೆ ದೇಣಿಗೆ ನೀಡಿದ ದಾನಿಗಳಿಗೆ ಅಭಿನವ ಖರೆ ಸನ್ಮಾನಿಸಿದರು. ” ಸಂಘದ ಹಿರಿಯರು ತಮ್ಮ ಅನುಭವವನ್ನ ಇಂದಿನ ಪೀಳಿಗೆಯ ಸರ್ಕಾರಿ ಸಿಬ್ಬಂದಿಗಳಿಗೆ ಧಾರೆಯೆರೆದು ಮಾರ್ಗದರ್ಶನ ನೀಡುವ ಕೆಲಸವಾಗಬೇಕು. ಹಿರಿಯ ನಾಗರಿಕರಿಗೆ ಪೋಲಿಸ್ ಇಲಾಖೆಯು ” ಆಸರೆ ” ಎಂಬ ನೆರವಿನ ಯೋಜನೆಯನ್ನ ಶಿವಮೊಗ್ಗ ಜಿಲ್ಲೆಯಲ್ಲಿ ಜಾರಿಗೆ ತಂದಿದೆ. ಹಿರಿಯ ನಾಗರಿಕರು ಇದರ ಸೌಲಭ್ಯ ಬಳಸಿಕೊಳ್ಳಬೇಕು.” ಎಂದು ಅಭಿನವ್ ಖರೆ ಕೋರಿದರು. ಸಂಘದ ಚಟುವಟಿಕೆಗೆ ತಾವು ಹತ್ತುಸಾವಿರ ರೂಪಾಯಿಗಳ ದೇಣಿಗೆ ನೀಡುವುದಾಗಿ ಘೋಷಿಸಿದರು.
ರುದ್ರೆÃಗೌಡರು ಆಯ್ದ ಹಿರಿಯ ಸದಸ್ಯರಿಗೆ ಗುರುತಿನ ಪತ್ರಗಳನ್ನ ವಿತರಿಸಿ ಸಂಘದ ಸ್ಥಾಪನೆಯ ಹಿನ್ನೆಲೆಯನ್ನ ಸ್ಮರಿಸಿಕೊಂಡರು. ಅತ್ಯಂತ ದೀರ್ಘ ಸಮಾಲೋಚನೆಯಿಂದ ಈ ಸಂಘವು ರೂಪುಗೊಂಡಿದೆ. ತಾವು ಸ್ವತಃ ಕೈಗಾರಿಕೋದ್ಯಮಿಯಾಗಿದ್ದು ಸಂಕಷ್ಟ ಸಮಸ್ಯೆಗಳಿಗೆ ಸಿಕ್ಕಾಗ ಅನುಭವಿ ಹಿರಿಯರ ಸೂಕ್ತ ಮಾರ್ಗದರ್ಶನ ದೊರೆತು ಮತ್ತೆ ಉದ್ಯಮ ಬೆಳೆಯುವಂತಾಯಿತು. ಹೀಗಾಗಿ ನಿವೃತ್ತಹಿರಿಯರು ಆಪತ್ಕಾಲೀನವಾಗಿ ಆಪತ್ಭಾಂಧವರಂತೆ ಸಹಾಯಮಾಡುತ್ತಾರೆ . ಅಂತಹ ಹಿರಿಯರಿಂದಾಗಿ ನಮ್ಮಂತಹವರಿಗೆ ಯಾವತ್ತೂ ಏಕಾಂಗಿಗಳೆಂಬ ಭಾವನೆ ಬರುವುದಿಲ್ಲ. ಅಂತಹ ಶಕ್ತಿ ಹಿರಿಯರಲ್ಲಿದೆ ಎಂದರು.
ಸಂಘದ ಅಧ್ಯಕ್ಷ ಪಿ.ಓ. ಶಿವಕುಮಾರ್ ಪವರ್ ಪಾಯಿಂಟ್ ಮೂಲಕ ಸಂಘದ ಹಿನ್ನೆಲೆ ಮತ್ತು ಮುಂದಿನ ಚಟುವಟಿಕೆಗಳಬಗ್ಗೆ ಮಾಹಿತಿ ನೀಡಿದರು.ಗೌರವ ಅಧ್ಯಕ್ಷ ಟಿ.ಜೆ. ರವಿಕುಮಾರ್ .ಜಂಟಿ ಕಾರ್ಯದರ್ಶಿಗಳಾದ ಎಚ್.ಆರ್. ರವಿಕುಮಾರ್, ಜಿ.ವಿ.ಲೋಕೇಶ್ವರಪ್ಪ ಕೋಶಾಧಿಕಾರಿ ಪಿ.ಎಂ.ರುದ್ರಮುನಿ, ಉಪಾಧ್ಯಕ್ಷ ಕೆ.ಜಿ. ಮಂಉನಾಥ ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ. ಶ್ರೀನಿವಾಸರಾವ್ ಸ್ವಾಗತ ಕೋರಿದರು.
ಸಮಾರಂಭದ ಮೊದಲಿಗೆ ಪುಲ್ವಾಮದಲ್ಲಿ ಹತರಾದ ವೀರಯೋಧರಾದ ದಿ.ಗುರು ಮತ್ತಿತರರಿಗೆ ಒಂದು ನಿಮಿಷ ಮೌನವಾಚರಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ವಿಶೇಚ ಚೇತನರಾದ ಕು.ದಿವ್ಯಾ ಪಾಲಾಕ್ಷ ಅವರು ಪ್ರಾರ್ಥಿಸಿದರು. ಕೊನೆಯಲ್ಲಿ ಕಾರ್ಯಕಾರಿ ಸಮಿತಿಯ ಡಾ.ಎನ್. ಸುಧೀಂದ್ರ ಸಮಾರಂಭದ ಯಶಸ್ಸಿಗೆ ಸಹಕರಿಸಿದವರಿಗೆ ವಂದಿಸಿದರು. ನಂದಿನಿ ಶೆಟ್ಟಿ ಸೊಗಸಾಗಿ ಕಾರ್ಯಕ್ರಮ ನಿರೂಪಿಸಿದರು.
Discussion about this post