ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರಕ್ಕೆ ಶೀಘ್ರದಲ್ಲಿ ಮುಹೂರ್ತ ನೆರವೇರಲಿದೆ.
ಈ ಚಿತ್ರದ ಸ್ಕ್ರಿಪ್‌ಟ್ ಪೂಜೆಯನ್ನು ಚಂದ್ರಾ ಲೇಔಟ್‌ನಲ್ಲಿರುವ ಪಂಚಮುಖಿ ಆಂಜನೇಯ ದೇವಾಲಯದಲ್ಲಿ ಇಂದು ನೆರವೇರಿಸಲಾಯಿತು. ಈ ಹಿಂದಿನ ಬಹದ್ದೂರ್ ಮತ್ತು ಭರ್ಜರಿ ಚಿತ್ರಗಳ ಪೂಜೆ ಕೂಡ ಇಲ್ಲೇ ನಡೆದಿತ್ತು.
ಬಹದ್ದೂರ್ ಚೇತನ್ ಭರಾಟೆ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಕಿಸ್ ಚಿತ್ರ ಖ್ಯಾತಿಯ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಭುವನ್ ಗೌಡ ಸಿನಿಮಾಟೋಗ್ರಫಿಯಲ್ಲಿ ತಯಾರಾಗಲಿರೋ ಭರಾಟೆ ಚಿತ್ರಕ್ಕೆ, ಯಶ್ ಅಭಿನಯದ ಕೆಜಿಎಫ್ ಖ್ಯಾತಿಯ ಸಿನಿಮಾಟೋಗ್ರಫರ್ ಭುವನ್ ಗೌಡ ಇಲ್ಲೂ ತಮ್ಮ ಕೈಚಳಕ ತೋರಿಸಲಿದ್ದಾರೆ.
Discussion about this post