ಶ್ರೀನಗರ: ಉಗ್ರವಾದವನ್ನು ಬಿಟ್ಟು ಭಾರತೀಯ ಸೇನೆ ಸೇರಿ, ದೇಶ ಸೇವೆ ಮಾಡುತ್ತಿದ್ದ ಯೋಧ ಔರಂಗಜೇಬ್’ನನ್ನು ಹತ್ಯೆ ಮಾಡಿದ್ದ ಉಗ್ರ ಶೌಕತ್ ದಾರ್ ಎಂಬುವವನನ್ನು ಭದ್ರತಾ ಪಡೆಗಳು ಬೇಟೆಯಾಡಿವೆ.
ಭದ್ರತಾ ಪಡೆಗಳು ನಿನ್ನೆ ಎರಡು ಪ್ರತ್ಯೇಕ ಎನ್’ಕೌಂಟರ್ ಕಾರ್ಯಾಚರಣೆಯನ್ನು ನಡೆಸಿ ಒಟ್ಟು ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಈ ಪೈಕಿ ಆವಂತಿಪೋರದಲ್ಲಿ ನಡೆದ ಎನ್’ಕೌಂಟರ್’ನಲ್ಲಿ ಶೌಕತ್ ಜೊತೆಯಲ್ಲಿ ಆತನ ಸಹಚರರಾದ ಇರ್ಫಾನ್ ವಾರ್ ಹಾಗೂ ಮುಜಫರ್ ಶೇಖ್ ಎನ್ನುವವರೂ ಸಹ ಬಲಿಯಾಗಿದ್ದಾರೆ.
ಇನ್ನು, ಪುಲ್ವಾಮಾದಲ್ಲೂ ಸಹ ನಿನ್ನೆ ರಾತ್ರಿ ಎನ್’ಕೌಂಟರ್ ನಡೆದಿದ್ದು, ಒಬ್ಬ ಉಗ್ರನನ್ನು ಯೋಧರು ಹೊಸಕಿ ಹಾಕಿದ್ದಾರೆ.
Discussion about this post