ನವದೆಹಲಿ: 2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶಾಂತಿಯುತವಾಗಿ ನಡೆದಿದ್ದು, ತ್ರಿಪುರಾದಲ್ಲಿ ಅತಿ ಹೆಚ್ಚು ಅಂದರೆ ಶೇ.81.8ರಷ್ಟು ಮತದಾನವಾಗಿದೆ.
ಈ ಕುರಿತಂತೆ ಚುನಾವಣಾ ಆಯೋಗ ಮಾಹಿತಿ ಪ್ರಕಟಿಸಿದ್ದು, ಕೆಲವೊಂದು ಅಹಿತಕರ ಘಟನೆಯ ಹೊರತಾಗಿ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ ಎಂದು ತಿಳಿಸಿದೆ.
ಒಟ್ಟು 18 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 91 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆದಿದ್ದು, ನಕ್ಸಲರ ಭಯದಿಂದಾಗಿ ಒಡಿಶಾದ 15 ಮತಗಟ್ಟೆಗಳಲ್ಲಿ ಶೂನ್ಯ ಮತದಾನವಾಗಿದೆ.
ಆಂಧ್ರಪ್ರದೇಶದ ಅನಂತಪುರದ ತಾಡಪತ್ರಿಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಮತ್ತು ಟಿಡಿಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಟಿಡಿಪಿಯ ಒಬ್ಬ ಹಾಗೂ ವೈಎಸ್ ಆರ್ ಕಾಂಗ್ರೆಸ್ ನ ಒಬ್ಬ ಕಾರ್ಯಕರ್ತ ಮೃತಪಟ್ಟಿದ್ದು, ಇಂದಿನ ಮುಖ್ಯ ವಿದ್ಯಮಾನ ಎನಿಸಿಕೊಂಡಿತು. ಇದಕ್ಕೆ ವೈಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದು ಟಿಡಿಪಿ ಆರೋಪಿಸಿದೆ.
ಮೊದಲ ಹಂತದಲ್ಲಿ ಎಲ್ಲೆಲ್ಲಿ ಎಷ್ಟು ಮತದಾನವಾಗಿದೆ?
ಉತ್ತರ ಪ್ರದೇಶ: ಶೇ.59
ಬಿಹಾರ: ಶೇ.50
ಮೇಘಾಲಯ: ಶೇ.62
ಅಂಡಮಾನ್ ಮತ್ತು ನಿಕೋಬಾರ್: ಶೇ.70
ಆಂಧ್ರ ಪ್ರದೇಶ: ಶೇ.66
ಛತ್ತೀಸ್’ಗಢ: ಶೇ.56
ತೆಲಂಗಾಣ: ಶೇ.57
ಜಮ್ಮು ಮತ್ತು ಕಾಶ್ಮೀರ: ಶೇ.54
ಮಿಜೋರಾಂ: ಶೇ.60
ನಾಗಾಲ್ಯಾಂಡ್: ಶೇ.73
ಮಣಿಪುರ: ಶೇ.78
ಸಿಕ್ಕಿಂ: ಶೇ.75
ಅಸ್ಸಾಂ: ಶೇ.67
ಅರುಣಾಚಲ ಪ್ರದೇಶ: ಶೇ.58
Discussion about this post