ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಹು ದಿನ ಸುತ್ತಾಟ, ಕೆಲವೊಂದು ದಿನ ಮಾತ್ರ ಕ್ಲಾಸಿನ ಪಾಠ, ಇದು ನಮ್ಮ ಡಿಗ್ರಿ ಲೈಫ್ ಸ್ಟೈಲ್. ಡಿಗ್ರಿ ಲೈಫ್ ಹಾಗೇ ಅಲ್ವಾ.. ಕ್ಲಾಸ್’ನಲ್ಲಿ ಕೂತಿದ್ದಕ್ಕಿಂತ ಹೊರಗಡೆ ಸುತ್ತಾಡಿದ್ದೇ ಹೆಚ್ಚು.
ಹೀಗೆ ಕಾಲ ಕಳೆಯುತ್ತಲೇ ಡಿಗ್ರಿ ಲೈಫ್ ಮುಗಿದು ಪಿಜಿ ಲೈಫ್ ಗೆ ಕಾಲಿಟ್ಟ ಕ್ಷಣಗಳು ಮಾತ್ರ ಮರೆಯದ ನೆನಪುಗಳು. ಜೀವನದ ಕೊನೆಯ ಓದಿನ ಘಟ್ಟ ಹೇಗೋ ತಲುಪುತ್ತಾ ಬಂದೆವು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಡಿ.ಎಸ್.ಪೂರ್ಣಾನಂದ ಸರ್ ಎಂದರೆ ಎಲ್ಲರಿಗೂ ಭಯ. ಅವರ ಶಿಸ್ತಿನ ಪಾಠ, ಸಮಯ ಪಾಲನೆಯ ಭೋದನೆಗಳು ಈಗಲೂ ಕಿವಿಯಲ್ಲಿ ಗುಂಯ್…! ಗುಟ್ಟುತ್ತವೆ.
ಎರಡನೆಯ ವರ್ಷದಲ್ಲಿ ನಾಲ್ಕನೆಯ ಸೆಮಿಸ್ಟರ್’ಗೆ ಬಂದಾಗ ಪ್ರಾಜೆಕ್ಟ್ ವರ್ಕ್ ಎಂಬುವುದು ಶುರುವಾಗುತ್ತದೆ. ಎಲ್ಲರೂ ನೋಟೀಸ್ ಬೋರ್ಡ್ ನೋಡಿ ಖುಷಿಯಿಂದ ನಾನು ಈ ಸರ್ ಕೈಯಲ್ಲಿ ಎಂದುಕೊಳ್ಳುತ್ತಿದ್ದರು. ನನಗೆ ಯಾವ ಸರ್ ಗೈಡ್ ಆಗುವರು ಎಂಬುದನ್ನು ನನ್ನ ಗೆಳತಿಯರೇ ಹೇಳಿದರು. ಹಾಗೇ ನಾನು ಊಹೆ, ಯೋಚನೆ ಮಾಡದ ಸರ್ ಮಾರ್ಗದರ್ಶನದಲ್ಲಿ ಸಿಕ್ಕಿಬಿದ್ದೆ. ಒಂದು ಕಡೆ ಭಯ, ಇನ್ನೊಂದು ಕಡೆ ಚೆನ್ನಾಗಿ ಕಲಿಯುತ್ತೇನೆ ಎಂಬ ಆಶಾಭಾವನೆ ಮೂಡಿತ್ತು.
ಆದರೂ ಮನದಲ್ಲಿ ಇಂದಿನ ವರ್ಷ ನನ್ನ ಸೀನಿಯರ್ ಹೇಳಿದರೂ ಎಚ್’ಒಡಿ ತುಂಬಾ ಸ್ಟ್ರಿಕ್ಟ್. ನಾವು ಏನೇ ಮಾಡಿದರು ಅಷ್ಟು ಬೇಗ ಒಪ್ಪುವುದಿಲ್ಲ, ಸ್ವಲ್ಪ ಕಷ್ಟವಾಗುತ್ತದೆ ಎಂದು ಗಾಬರಿ ಪಡಿಸಿದರೂ ನೀನು ಬೇಕಾದರೆ ಯಾರ ಮಾರ್ಗದರ್ಶನದಲ್ಲಿ ವರ್ಕ್ ಮಾಡಿದರು ಅಷ್ಟೊಂದು ತೊಂದರೆಯಾಗುವುದಿಲ್ಲ ಎಂಬ ಮಾತು ಮರುಕಳಿಸುತ್ತಿದ್ದವು.
ಹೇ….ನಾನು ಅವರು ಒಪ್ಪಿಕೊಳ್ಳವಂತೆ ವರ್ಕ್ ಮಾಡಿ ತೋರಿಸುವೆ ಎಂಬ ಗಟ್ಟಿ ನಿರ್ಧಾರ, ಆತ್ಮವಿಶ್ವಾಸ ಇಟ್ಟುಕೊಂಡಿದ್ದೆ.
ಕೆಲವು ದಿನಗಳಲ್ಲಿಯೇ ವರ್ಕ್ ಶುರುವಾದವು. ಪ್ರತಿ ಶುಕ್ರವಾರ ಎಂದರೆ ನಮ್ಮ ಬ್ಯಾಚ್ ಕಂಡು ನನ್ನೆಲ್ಲಾ ಗೆಳೆಯರು ಗೇಲಿ ಮಾಡುತ್ತಿದ್ದರು. ಹೋಗಿ-ಹೋಗಿ ಆ ಸರ್ ಮಾರ್ಗದರ್ಶನದಲ್ಲಿ ಸಿಕ್ಕಿ ಹಾಕಿಕೊಂಡೆ. ನಿನಗೆ ಇನ್ನು ಮುಂದೆ ಕಾದಿವೇ ಹೋಗು ಎನ್ನುತ್ತಿದ್ದರು. ಮಂಗಳಾರತಿ ಗ್ಯಾರಂಟಿ ಅಂತ ಹೆದರಿಸುತ್ತಿದ್ದರು. ಅವರ ಮಾತುಗಳಿಗೆ ತಲೆ ಕೆಡಸಿಕೊಳ್ಳದೆ ನಾವೆಲ್ಲರೂ ಒಟ್ಟಿಗೆ ಹೋಗಿ ಮಾಡಿದ, ಸಂಗ್ರಹಿಸಿದ ಮಾಹಿತಿಯನ್ನು ತೋರಿಸಿಕೊಂಡು ಬರುತ್ತಿದ್ದೆವು.
ಹೀಗೆ ದಿನಗಳು ಉರುಳಿದವು. ಆದ್ರೂ ಪ್ರತಿ ಶುಕ್ರವಾರ ಸರ್ ಕೈಯಲ್ಲಿ ಬೈಯಿಸಿಕೊಳ್ಳದ ದಿನವೇ ಇಲ್ಲವೇನೋ. ಕೊನೆ ಕೊನೆಗೆ ನನ್ನ ಕೆಲವು ಗೆಳೆಯರು ಶುಕ್ರವಾರ ಬರುವುದನ್ನೇ ಕಡಿಮೆ ಮಾಡಿಬಿಟ್ಟರು. ನಾನು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ನಾನು ಮಾಡಿರುವುದನ್ನು ತೋರಿಸಿ, ಬೈದರೆ ಬೈಯಿಸಿಕೊಂಡು ಬರುತ್ತಿದೆ. ಅವರು ಹೇಳಿದ್ದನ್ನು ಸರಿಪಡಿಸಿಕೊಳ್ಳುತ್ತಿದೆ.
ಈ ರೀತಿ ಹಲವಾರು ಬಾರಿ ಸರ್ ಬಳಿ ಹೋಗುವುದರಿಂದ ನನ್ನಲ್ಲಿದ್ದ ಭಯದ ಭಾವನೆಗಳು ಓಡಿ ಹೋದವು ಎನ್ನುವುದು ನಿಜ. ಹೀಗೆ ದಿನಗಳು ಉರುಳಿ ಪ್ರಾಜೆಕ್ಟ್’ನ ಕೊನೆಯ ಹಂತ ತಲುಪಿ ಇನ್ನೇನು ಹದಿನೈದು ದಿನಗಳಲ್ಲಿ ಸಲ್ಲಿಸಬೇಕಾದ ಸಂದರ್ಭವು ಬಂದಿತ್ತು.
ಆದರೆ ನನ್ನದು ಮೂರು ಅಧ್ಯಾಯಗಳು ಮುಗಿದಿತ್ತು. ಅದನ್ನು ತೋರಿಸಲು ಹೋದಾಗ ನೀವು ಮಾಡಿ ಸರ್ವೆ ಪ್ರಶ್ನಾವಳಿಗಳನ್ನು ತಂದು ತೋರಿಸಿ ನೋಡೋಣ ಎಂದು ಸರ್ ಹೇಳಿದರು. ಮನಸ್ಸಿನಲ್ಲಿ ಏನೋ ಒಂದು ರೀತಿಯ ಕಳವಳ. ಯಾಕೇಂದ್ರೇ ಸರ್ ಅದನ್ನೇನು ಕೇಳುವುದಿಲ್ಲವೆಂದು, 250 ಜನರ ಸಂದರ್ಶನ ಮಾಡಬೇಕಿದ್ದನ್ನು ನಾವೆಲ್ಲರೂ ಸರಿಯಾಗಿ 160 ಜನರನ್ನು ಸಂದರ್ಶಿಸಿದ್ದೆವು. ಆದರಿಂದ ನಾವುಗಳು ನಮ್ಮ ನಮ್ಮ ಹಾಸ್ಟೆಲ್’ನ ಹುಡುಗಿಯರ ಬಳಿ ಸರ್ವೆ ಮಾಡಿಕೊಂಡು ಒಂದು ವಾರದ ಬಳಿಕ ಸರ್ ಹತ್ತಿರ ಹೋದೆವು. ಅದುವೇ ನಮ್ಮ ಪ್ರಾಜೆಕ್ಟ್’ನ ಕೊನೆಯ ಶುಕ್ರವಾರವಾಗಿತ್ತು ಮತ್ತು ವಿಭಾಗಕ್ಕೆ ನಾವು ಮಾಡಿದ ಪ್ರಾಜೆಕ್ಟ್ ಪ್ರತಿಯನ್ನು ಸಲ್ಲಿಸಲು ಇನ್ನೂ ಮೂರು ದಿನಗಳು ಬಾಕಿ ಉಳಿದಿತ್ತು ಅಷ್ಟೇ.
ನಮ್ಮ ಸಂದರ್ಶನದ ಪ್ರತಿಗಳನ್ನು ನೋಡಿದ ಸರ್ ಬೈಯಾಲಾರಂಬಿಸಿಯೇ ಬಿಟ್ಟರು. ನಿಮ್ಮಂತಹ ವಿದ್ಯಾರ್ಥಿಗಳನ್ನು ನನ್ನ ಶಿಕ್ಷಕನ ವೃತ್ತಿಯಲ್ಲಿಯೇ ನೋಡಿಲ್ಲ, ಬೇರೆ ದೇಶದಲ್ಲಿ ಆಗಿದ್ರೇ ನಿಮ್ಮನ್ನ ಜೈಲಿಗೆ ಹಾಕುತ್ತಿದ್ರು ಎಂದು ಬೈಯ್ಯತೊಡಗಿದರು. ಆ ಸಂದರ್ಭದಲ್ಲಿ ನನ್ನ ಗೆಳೆಯನಾದ ಕಿರಣ್ ಹೇ ನೀನೂ ಹೇಗೂ ಅಳುತ್ತಿರುತ್ತಾ ಈಗ ಜೋರಾಗಿ ಅಳು ಎಂದ.
ಅವನಿಗೆ ಸುಮ್ಮನಿರೋ ಎಂದು ನಾನು ಸರ್ ಹೇಳುವುದರ ಕಡೆ ಗಮನ ಹರಿಸಿದೆ. ಅವರು ನೀವೆಲ್ಲ ಮುಂದಿನ ವರ್ಷ ಸಬ್ಮಿಟ್ ಮಾಡಿ ಹೋಗಿ ಎಂದರು. ಅವರು ಹೇಳುತ್ತಿದ್ದ ಮಾತುಗಳು ನಮ್ಮ ವಿದ್ಯಾರ್ಥಿ ಜೀವನದಲ್ಲಿ ಯಾವ ಗುರುಗಳು ನಾವು ಎಷ್ಟೇ ತಪ್ಪು ಮಾಡಿದರು ಹೇಳೇ ಇರಲಿಲ್ಲ.
ನಾವು ಮಾಡಿದ ಆ ತಪ್ಪಿಗೆ ಅವರು ನುಡಿದ ಮಾತುಗಳು ಹೃದಯ ತಟ್ಟುವಂತಿದ್ದವು. ನಮ್ಮ ತಪ್ಪುಗಳನ್ನು ಅಲ್ಲಿಯೇ ನೆನಪಿಸಿಕೊಳ್ಳುವಂತಿದ್ದವು. ಆಗ ನನಗೆ ತಿಳಿಯದೇ ನನ್ನ ಕಣ್ಣುಗಳಿಂದ ನೀರು ಬರತೊಡಗಿತ್ತು. ಬಿಕ್ಕಿ ಬಿಕ್ಕಿ ಅಳಲಾರಂಭಿಸಿದೆ. ಸರ್ ಹತ್ತಿರ ಕ್ಷಮೆ ಕೇಳಿದೆವು. ಅವರ ಮಾತುಗಳು ಅಷ್ಟೊಂದು ಕಠಿಣವಾಗಿದ್ದರೂ ಅದೆಲ್ಲ ಬೈಗುಳ ನಮ್ಮ ತಪ್ಪಿಗೆ ತಕ್ಕಂತೆ ಇತ್ತು. ನಂತರ ಹೇಗೂ ಸರ್ 3 ಗಂಟೆಗಳವರೆಗೂ ತಿಳಿ ಹೇಳಿ ನಮ್ಮ ತಪ್ಪುಗಳನ್ನು ಸಮರ್ಥಿಸಿ, ಕೊನೆಗೆ ನೀವೆಲ್ಲ ಹೋಗಿ ನನ್ನ ಒಬ್ಬ ಗೆಳೆಯನಾದ ಅಮರನ ಅಲ್ಲಿ ಇರುವಂತೆ ಸೂಚಿಸಿದರು.
ನಾವೆಲ್ಲರೂ ಹೊರಗೆ ಬಂದಾಗ ಆಗ ಅಳು ಎಂದು ಹೇಳಿದ ಗೆಳೆಯ ನೀನು ಅಳುತ್ತಿದ್ದು ವೆಸ್ಟ್ ಆಯಿತಲ್ಲ ಎಂದು ಗೇಲಿ ಮಾಡಿ ನಗಾಡಿದ. ಅದರೆ ಆ ಅಳು ನನ್ನ ತಪ್ಪುಗಳನ್ನಲ್ಲ ಪುನಃ ಮೆಲುಕಿಸುತ್ತಿದ್ದು, ಅಂತರಾಳದಿಂದ ಬಂದತಹ ಅಳುವಾಗಿತ್ತು.
ನಂತರ ಒಬ್ಬರಾಗಿ ಹೋಗಿ ಕ್ಷಮೆಯಾಚಿಸಿ ಪ್ರಾಜೆಕ್ಟ್ ಬೈಡಿಂಗ್ ಮಾಡುವುದಕ್ಕೆ ಅನುಮತಿ ಪಡೆದುಕೊಂಡು ಬರುತ್ತಿದ್ದರು. ನಂತರ ನಾನು ಹೋಗಿ ನನ್ನ ಪ್ರಾಬ್ಲಂ ಹೇಳಿಕೊಂಡು ಅದನ್ನು ಬಗೆಹರಿಸಿಕೊಟ್ಟು ನೀನು ಏನು ಬೈಂಡಿಂಗ್ ಮಾಡಿಸೋದೇನು ಬೇಡ, ಸ್ಪೈರಲ್ ಬೈಡಿಂಗ್ ಮಾಡಿಸಿಕೊಟ್ಟರೆ ಸಾಕು ಎಂದು ಧೈರ್ಯ ತುಂಬಿ ಕಳುಹಿಸಿಕೊಟ್ಟರು.
ಆ ಸರ್ ಮನಸ್ಸು ಕಲ್ಲಿನಂತೆ ಅಷ್ಟು ಕಠಿಣ ಎನ್ನುತ್ತಿದ್ದರು ಕೆಲವರು. ಆದರೆ ಹಾಗೇ ಕಂಡರು ಅವರ ಮನಸ್ಸು ಮಾತ್ರ ಹೂವಿನಂತೆ ಎಂಬುವುದು ಯಾರಿಗೂ ಗೊತ್ತಿಲ್ಲ. ಅವರು ಕಲಿಕೆಯಲ್ಲಿ ಯಾವ ಕಾರಣಕ್ಕೂ ಕಮಿಟ್’ಮೆಂಟ್ ಬಿಡುತ್ತಿರಲಿಲ್ಲ. ಆ ಸರ್ ಯಾವಾಗಲೂ ಹೇಳುತ್ತಿದ್ದರು; ವಿದ್ಯಾರ್ಥಿಯಾದವರು ರ್ಯಾಂಕ್ ತೆಗೆದುಕೊಳ್ಳಬೇಕು ಅಂತನೇ ಏನು ಇಲ್ಲ. ವಿದ್ಯಾರ್ಥಿ ಜೀವನದಲ್ಲಿ ಕಲಿಕೆ ಜೊತೆಗೆ ಶಿಸ್ತು, ಸಮಯ ಪಾಲನೆ, ಗೌರವ ಮನೋಭಾವನೆ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಇಂತಹ ಗುರುಗಳಿಂದ ನನ್ನ ಜೀವನದಲ್ಲಿ ಅವರಿಂದ ಕಲಿತ ಜೀವನದ ಪಾಠಗಳು ಬದುಕಿನುದ್ದಕ್ಕೂ ನೆನಪುವಂತಿವೆ.
ಅಂದೇ ಅಂದುಕೊಂಡೆ ಇನ್ನು ಮುಂದೆ ಈಗಾಗಲೇ ನಾನು ಮಾಡಿದಂತಹ ನಿರ್ಲಕ್ಷ ಮನೋಭಾನೆಯನ್ನು ಬಿಟ್ಟು ಸರಿಯಾದ ಸಮಯಕ್ಕೆ ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು, ಕೆಲಸ ಬಾಕಿ ಇಟ್ಟುಕೊಳ್ಳುವುದು ಹಲವಾರು ಒತ್ತಡ, ನೋವುಗಳಿಗೆ ಕಾರಣರಾಗುತ್ತವೆ ಎಂಬುವುದನ್ನು ಮನಗಂಡೆ.
ಅಪ್ಪ! ಆ ಕೊನೆಯ ಶುಕ್ರವಾರ ನಮ್ಮೆಲ್ಲ ಐದು ಜನರ ಜೀವನದಲ್ಲಿ ಮರೆಯಾಲಾಗದ ಗಳಿಗೆಗಳು… ಅಬ್ಬಾ! ಆ ನೆನಪುಗಳು ಈಗಲೂ ಮರುಕಳಿಸುತ್ತಿವೆ. ಅವೆಲ್ಲವೂ ಒಂದು ಒಳ್ಳೆಯ ಅನುಭವ, ಜೀವನದ ಪಾಠ ಕಲಿಸಿಕೊಟ್ಟವು…
Get in Touch With Us info@kalpa.news Whatsapp: 9481252093
Discussion about this post