ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಆ ಖ್ಯಾತ ಚಿತ್ರ ನಟನ ಹೆಸರು ಗೊತ್ತಿಲ್ಲದೇ ಇರಬಹುದು. ಆದರೆ, ಅವರ ಮುಖ ಪರಿಚಯ ಇಲ್ಲದವರು ರಾಜ್ಯದಲ್ಲಿ ಬಹುತೇಕ ಯಾರೂ ಇಲ್ಲದಿರಲು ಸಾಧ್ಯವಿಲ್ಲ. ಕಾರಣ ಅವರು ನಟಿಸಿರುವ ಚಿತ್ರಗಳ ಸಂಖ್ಯೆ ಬರೋಬ್ಬರಿ 250. ಆದರೆ, ಇಂತಹ ಹಿರಿಯ ನಟ ಈಗ ಎಂತಹ ಸ್ಥಿತಿಯಲ್ಲಿದ್ದಾರೆ ಗೊತ್ತಾ?
ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಕಿಲ್ಲರ್ ವೆಂಕಟೇಶ್ ಅವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೂ ಸಹ ಹಣವಿಲ್ಲದೆ ಪರದಾಡುವ ಪರಿಸ್ಥಿತಿಯಲ್ಲಿದ್ದರು. ಈ ವಿಚಾರವನ್ನು ಅರಿತ ಅವರ ಸ್ನೇಹಿತ ನಟ ಜಗ್ಗೇಶ್, ನಿನ್ನೆ ಆಸ್ಪತ್ರೆ ಭೇಟಿ ನೀಡಿ, ಈ ವಿಚಾರವನ್ನು ಟ್ವೀಟ್ ಮಾಡಿದ್ದರು.
250 ಕನ್ನಡ ಚಿತ್ರ ನಟಿಸಿದ ಮಿತ್ರ
ಕಿಲ್ಲರ್ ವೆಂಕಟೇಶ ಇಂದು ಲಿವರ್ ವೈಫಲ್ಯದಿಂದ ಸಾವು ಬದುಕಿನ ಹೋರಾಟ!ಇವನ ವಿಷಯವೆ ನಾನು ಚಂದನವನ ಅವಾರ್ಡ್ ವೇದಿಕೆಲ್ಲಿ ಮಾತಾಡಿದ್ದು!
ನನ್ನ ಕೈಲಾದ ಸಹಾಯಮಾಡಿ ಇವನ ಉಳಿಸಿಕೊಳ್ಳುಲು ಯತ್ನಿಸುತ್ತಿರುವೆ!
ತುಂಬಾ ದುಃಖವಾಯಿತು ಹಿರಿಯಕಲಾವಿದರ ಸ್ಥಿತಿಕಂಡು!
ರಾಯರೆ ಕಾಪಾಡಬೇಕು ಇಂಥ ಕಲಾವಿದರ..ಹರಿಓಂ pic.twitter.com/i7qg9ZQ6Vk— ನವರಸನಾಯಕ ಜಗ್ಗೇಶ್ (@Jaggesh2) February 18, 2020
250 ಕನ್ನಡ ಚಿತ್ರ ನಟಿಸಿದ ಮಿತ್ರ. ಕಿಲ್ಲರ್ ವೆಂಕಟೇಶ ಇಂದು ಲಿವರ್ ವೈಫಲ್ಯದಿಂದ ಸಾವು ಬದುಕಿನ ಹೋರಾಟ! ಇವನ ವಿಷಯವೆ ನಾನು ಚಂದನವನ ಅವಾರ್ಡ್ ವೇದಿಕೆಯಲ್ಲಿ ಮಾತಾಡಿದ್ದು! ನನ್ನ ಕೈಲಾದ ಸಹಾಯಮಾಡಿ ಇವನ ಉಳಿಸಿಕೊಳ್ಳುಲು ಯತ್ನಿಸುತ್ತಿರುವೆ! ತುಂಬಾ ದುಃಖವಾಯಿತು ಹಿರಿಯ ಕಲಾವಿದರ ಸ್ಥಿತಿಕಂಡು! ರಾಯರೆ ಕಾಪಾಡಬೇಕು ಇಂಥ ಕಲಾವಿದರ.. ಹರಿಓಂ ಎಂದು ಬರೆದುಕೊಂಡಿದ್ದರು.
#victoria #hospital #Dr #Giresh
Spl off Victoria hospital
And team ಅದ್ಭುತವಾಗಿ ಸ್ಪಂದಿಸಿ ಚಿಕಿತ್ಸೆ
ನೀಡುತ್ತಿದ್ದಾರೆ..ಧನ್ಯವಾದಗಳು #ಶ್ರೀರಾಮುಲು #ಕರ್ನಾಟಕಸರ್ಕಾರ #ಮಂತ್ರಿಗಳು ಹಾಗು ಇಲಾಖೆ ಸಹಾಯಕ ಅಧಿಕಾರಿಗಳಿಗೆ..
ನನ್ನಕರೆಗೆ ಸ್ಪಂಧಿಸಿದ ಕಲಾಬಂಧು #ದರ್ಶನ ರವರಿಗೆ #ಸಾ.ರಾ #ಬಾಮಾ ಹರೀಶ್ #ಮಾಧ್ಯಮಮಿತ್ರರಿಗೆ pic.twitter.com/YerSM5QBl1— ನವರಸನಾಯಕ ಜಗ್ಗೇಶ್ (@Jaggesh2) February 19, 2020
ಜಗ್ಗೇಶ್ ಅವರ ಮಾಹಿತಿಯ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಅವರುಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ, ವೆಂಕಟೇಶ್ ಅವರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉನ್ನತ ಮಟ್ಟದ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಿದ್ದಾರೆ.
ಧನ್ಯವಾದಗಳು ಮಂತ್ರಿ ಶ್ರೀರಾಮುಲು pa jagadish ಹಾಗು Ramesh ಗೆ..ವಿಕ್ಟೋರಿಯಾ ಆಸ್ಪತ್ರೆ dr.girish ಹಾಗು ಉ.ಮುಖ್ಯಮಂತ್ರಿ ಅಶ್ವಥ್ನಾರಾಯಣ್ ರವರಿಗೆ..
ನನ್ನ ಕರೆಗೆ ಸ್ಪಂಧಿಸಿ ಸರಿರಾತ್ರಿಯಲ್ಲಿ #victoria #superspeciality #hospital ನಲ್ಲಿ ತಪಾಸಣೆ ಶುಶೃಷೆಮಾಡುತ್ತಿದ್ದಾರೆ..!
ಸ್ನೇಹಕಕ್ಕಾಗಿ ನನ್ನ ಅಳಿಲು ಪ್ರಯತ್ನ..ಹರಿಓಂ https://t.co/dQWuvchD5o— ನವರಸನಾಯಕ ಜಗ್ಗೇಶ್ (@Jaggesh2) February 18, 2020
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ಧನ್ಯವಾದ ಅರ್ಪಿಸಿರುವ ಜಗ್ಗೇಶ್, ಧನ್ಯವಾದಗಳು ಮಂತ್ರಿ ಶ್ರೀರಾಮುಲು ಪಿಎ ಜಗದೀಶ್ ಹಾಗೂ ರಮೇಶ್ ಗೆ. ವಿಕ್ಟೋರಿಯಾ ಆಸ್ಪತ್ರೆ ಡಾ ಗಿರೀಶ್ ಹಾಗೂ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ರವರಿಗೆ. ನನ್ನ ಕರೆಗೆ ಸ್ಪಂದಿಸಿ ಸರಿ ರಾತ್ರಿಯಲ್ಲಿ ವಿಕ್ಟೋರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಪಾಸಣೆ ಶುಶ್ರೂಷೆ ಮಾಡುತ್ತಿದ್ದಾರೆ. ಸ್ನೇಹಕ್ಕಾಗಿ ನನ್ನ ಅಳಿಲು ಪ್ರಯತ್ನ. ಹರಿ ಓಂ ಎಂದು ಬರೆದಿದ್ದಾರೆ.
ವೈಯಕ್ತಿಕವಾಗಿ ಅವನ ಹಾರೈಕೆಗೆ ವಿನಂತಿಸಲು ವಿಕ್ಟೋರಿಯಾ ಆಸ್ಪತ್ರೆಗೆ ಡಾ: ಕಾಣಲು 1.30 ನಾನೆ ಹೋಗುತ್ತಿರುವೆ..ಕಷ್ಟದಲ್ಲಿ ಇರುವ ಚಿತ್ರರಂಗದ ಹಿರಿಯರಿಗೆ ಭುಜಕೊಡುವ ಗುಣ ಇಂದಿನವರು ಅಳವಡಿಸಿಕೊಳ್ಳಲು ನಾಂದಿಹಾಡುವೆ!
ವಾ.ಮಂಡಳಿ ಹಾಗು ನಿರ್ಮಾಪಕರ ಸಂಘಕ್ಕೆ ಕೈಜೋಡಿಸಲು ಹೇಳಿರುವೆ!
ವಿಶೇಷ ಕಾಳಜಿ ತೋರಿದರು ಧನ್ಯವಾದಗಳು ಸಾ.ರಾ.ಗೋ..ಭಾ.ಮಾ. https://t.co/m6pLoC7aoC pic.twitter.com/hjHoaPqfXJ— ನವರಸನಾಯಕ ಜಗ್ಗೇಶ್ (@Jaggesh2) February 19, 2020
ಇನ್ನು, 1987ರಲ್ಲಿ ಬಿಡುಗಡೆಗೊಂಡು ಸೂಪರ್ ಹಿಟ್ ಆಗಿದ್ದ ರಣಧೀರ ಚಿತ್ರದಲ್ಲಿ ಜಗ್ಗೇಶ್, ಕಿಲ್ಲರ್ ವೆಂಕಟೇಶ್, ಅರವಿಂದ್, ಎಚ್’ಎಂಟಿ ನಂದಾ, ಯೋಗೇಶ್ವರ್ ಒಟ್ಟಾಗಿ ನಟಿಸಿದ್ದರು. ವೆಂಕಟೇಶ್ ಅವರ ಈ ಪರಿಸ್ಥಿತಿ ವಿಚಾರ ತಿಳಿದು ಜಗ್ಗೇಶ್ ಅವರೊಂದಿಗೆ ನಟ ಅರವಿಂದ್ ಸಹ ಆಸ್ಪತ್ರೆಗೆ ಭೇಟಿ ನೀಡಿದ್ದರು.
#ರಣಧೀರ ಗ್ಯಾಂಗ್ ಮತ್ತೆ ಸೇರಿದಾಗ…#ರಥಸಪ್ತಮಿ #ಅರವಿಂದ..
ಇದರಲ್ಲಿ HMTನಂದ ತೀರಿಹೋದ..#ಯೋಗೇಶ್ವರ್ ನಮ್ಮ ಭಾಜಪ ನಾಯಕ.. pic.twitter.com/9eB8Y9Mreo— ನವರಸನಾಯಕ ಜಗ್ಗೇಶ್ (@Jaggesh2) February 19, 2020
ರಣಧೀರ ಚಿತ್ರದ ತಮ್ಮ ತಂಡದ ಕುರಿತು ನೆನಪಿಸಿಕೊಂಡಿರುವ ಜಗ್ಗೇಶ್, ರಣಧೀರ ಗ್ಯಾಂಗ್ ಮತ್ತೆ ಸೇರಿದಾಗ…ರಥಸಪ್ತಮಿ ಅರವಿಂದ.. ಇದರಲ್ಲಿ ಎಚ್’ಎಂಟಿನಂದ ತೀರಿಹೋದ.. ಯೋಗೇಶ್ವರ್ ನಮ್ಮ ಭಾಜಪ ನಾಯಕ.. ಎಂದು ಒಂದು ಟ್ವೀಟ್’ನಲ್ಲಿ ಬರೆದುಕೊಂಡಿದ್ದಾರೆ.
ಇನ್ನೊಂದು ಟ್ವೀಟ್’ನಲ್ಲಿ 1987 ರಣಧೀರ ಗ್ಯಾಂಗ್… ಯೋಗೇಶ್ವರ್ ಏನಂದ ರಥಸಪ್ತಮಿ ಅರವಿಂದ ಕಿಲ್ಲರ್ ವೆಂಕಟೇಶ.. ರವಿಚಂದ್ರನ್ ಸಂಸ್ಥೆಯಲ್ಲಿ ವರ್ಷಕ್ಕೆ 5,000 ಸಂಬಳ ಪಡೆದ ಸಂತೋಷವಾಗಿ ನಗುತ್ತಾ ಸ್ವಾಭಿಮಾನದಿಂದ ಬಾಳಿದ ದಿನಗಳು….ಅಮರ ಹಳೆ ನೆನಪು.. ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
1987 #ರಣಧೀರ ಗ್ಯಾಂಗ್…#ಯೋಗೇಶ್ವರ್ #HMTನಂದ #ರಥಸಪ್ತಮಿ ಅರವಿಂದ #ಕಿಲ್ಲರ್ ವೆಂಕಟೇಶ..
ರವಿಚಂದ್ರನ್ ಸಂಸ್ಥೆಯಲ್ಲಿ ವರ್ಷಕ್ಕೆ 5,000 ಸಂಬಳ ಪಡೆದ ಸಂತೋಷವಾಗಿ
ನಗುತ್ತಾ ಸ್ವಾಭಿಮಾನದಿಂದ ಬಾಳಿದ
ದಿನಗಳು….ಅಮರಹಳೆನೆನಪು.. pic.twitter.com/ycq8J2uVU6— ನವರಸನಾಯಕ ಜಗ್ಗೇಶ್ (@Jaggesh2) February 19, 2020
ಇನ್ನು, ಇದು ಕಿಲ್ಲರ್ ವೆಂಕಟೇಶ್ ಅವರ ಒಬ್ಬರ ವ್ಯಥೆಯಲ್ಲ. ಕನ್ನಡ ಚಿತ್ರರಂಗದ ಬಹಳಷ್ಟು ಪೋಷಕ ನಟರು ನೂರಾರು ಚಿತ್ರದಲ್ಲಿ ನಟಿಸಿದ್ದರೂ, ಅವರ ಜೀವನದ ಸ್ಥಿತಿ ಮಾತ್ರ ಉತ್ತಮವಾಗಿಯೇನೂ ಇಲ್ಲ. ದಶಕಗಳ ಕಾಲ ಕಲಾ ಸರಸ್ವತಿಯ ಸೇವೆ ಮಾಡಿದ್ದರೂ, ಕೊನೆಯ ಕಾಲಕ್ಕೆ ಚಿಕಿತ್ಸೆಗೂ ಸಹ ಹಣವಿಲ್ಲದೇ ಪರದಾಡಿದ ಹಲವು ಕಲಾವಿದರ ನಮ್ಮಲ್ಲಿದ್ದಾರೆ. ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಪ್ರಸ್ತುತ ಸರ್ಕಾರ ಕಲಾವಿದರ ಇಂತಹ ಬೆಂಬಲಕ್ಕೆ ನಿಲ್ಲಲು ಆರೋಗ್ಯ ವಿಮೆ, ಜೀವನ ಭದ್ರತೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸುವ ತುರ್ತು ಅಗತ್ಯವಿದೆ. ಈ ವಿಚಾರದಲ್ಲಿ ಇಡಿಯ ಚಿತ್ರರಂಗ ಹಾಗೂ ಮಂಡಳಿ ಒಟ್ಟಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುವ ಕಾರ್ಯ ಮಾಡಬೇಕಿದೆ.
Get in Touch With Us info@kalpa.news Whatsapp: 9481252093
Discussion about this post