ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಎಲ್ಲ ಕಾಲಘಟ್ಟಕ್ಕೂ ಸಹ ಸಲ್ಲುವಂತಹದ್ದು ಎಂದು ಸಂಸ್ಕೃತಿ ಚಿಂತಕ, ಲೇಖನ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅಭಿಪ್ರಾಯಪಟ್ಟರು.
ರಾಷ್ಟ್ರಕವಿ ಕುವೆಂಪು ರವರಿಗೆ ಕನ್ನಡದ ಮೊದಲನೇ ಜ್ಞಾನಪೀಠ ಪ್ರಶಸ್ತಿ ದೊರೆತು 50 ವರ್ಷಗಳಾದ ಸವಿನೆನೆಪಿಗೆ ಡಾ. ಸುರೇಶ್ ಪಾಟೀಲ ಮತ್ತು ಡಾ.ಆರ್. ವಾದಿರಾಜು ಸಂಪಾದಿಸಿರುವ ‘ಕುವೆಂಪು: ಒಂದು ಚಿಂತನೆ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಈ ವೇಳೆ ಮಾತನಾಡಿದ ಕೃತಿಯ ಪ್ರಧಾನ ಸಂಪಾದಕ ಡಾ.ಸುರೇಶ್ ಪಾಟೀಲ್, ಹೊಸಗನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪುರವರು ಶಕ್ತಿ ಸಾಧನೆಗಳು ಅಸಾಧಾರಣ. ಅವರು ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡದ ಪ್ರಕಾರವಿಲ್ಲ ಎನ್ನುವುದು ಬರೀ ಕ್ಲೀಷೆಯಲ್ಲ. ಸಣ್ಣಕತೆ, ಕಾದಂಬರಿ, ಕವಿತೆ, ನಾಟಕ, ವಿಮರ್ಶೆ, ಪ್ರಬಂಧ, ಜೀವನ ಚರಿತ್ರೆ, ಲಿಲಿತ ಪ್ರಬಂಧ, ಆತ್ಮ ಚರಿತ್ರೆ ಈ ಒಂದೊಂದರಲ್ಲೂ ಅವರು ಶ್ರೇಷ್ಠವಾದುದನ್ನು ನೀಡಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು ಎಂದರು.
ಅವರ ಸಾಹಿತ್ಯದ ಬಗ್ಗೆ ಬೇರೆ ಬೇರೆ ಕಾಲಘಟ್ಟ, ವಯೋಮಾನ, ಸ್ವಭಾವ, ಸಂಸ್ಕಾರಗಳ ಸಹೃದಯರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಮತ್ತೆ ಮತ್ತೆ ಓದಿಸಿಕೊಳ್ಳುವ ಮತ್ತು ವಿಶ್ಲೇಷಣೆಗೆ ಒಳಪಡುವ ಗುಣದ ಅವರ ಸಾಹಿತ್ಯಕ್ಕೆ ಈ ಕಾಲಘಟ್ಟದ ಒಂದು ಚಿಂತನ ಮಂಥನ ಇಲ್ಲಿನ ಲೇಖನಗಳು ಎಂದರು.
ಕೆಕೆ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್’ನ ಶಿವರಾಂ ಶ್ರೀಲಕ್ಷ್ಮೀ ಬಿ. ರಾವ್, ಅಧ್ಯಕ್ಷರು, ಚಿನ್ಮಯಿ ಸಂಗೀತ ಶಾಲೆ ಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
Discussion about this post