No Result
View All Result
Minister Somanna Inspects & Inaugurates Road Under Bridges in Tumkur District eliminating level Crossing gates
English Articles

Minister Somanna Inspects & Inaugurates Road Under Bridges in Tumkur District eliminating level Crossing gates

by ಕಲ್ಪ ನ್ಯೂಸ್
February 26, 2026
0

Kalpa Media House  |  Bengaluru  | Union Minister of State for Railways and Jal Shakti, V. Somanna, today inaugurated three...

Read moreDetails
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
  • Advertise With Us
  • Grievances
  • About Us
  • Contact Us
Thursday, February 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಪಕ್ಷಮಾಸದ ಮಹತ್ವ: ಗಯಾ ಶ್ರಾದ್ಧ ಮಹಿಮಾ, ತರ್ಪಣದಲ್ಲಿ ದರ್ಭೆಯ ಪವಿತ್ರ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 22, 2019
in Special Articles
0
ಪಕ್ಷಮಾಸದ ಮಹತ್ವ: ಗಯಾ ಶ್ರಾದ್ಧ ಮಹಿಮಾ, ತರ್ಪಣದಲ್ಲಿ ದರ್ಭೆಯ ಪವಿತ್ರ
Share on FacebookShare on TwitterShare on WhatsApp

ಗಯಾ ಎಂಬುವನು ಒಬ್ಬ ರಾಕ್ಷಸ. ಇವನು ಶ್ರೀ ಮಹಾವಿಷ್ಣುವಿನ ಭಕ್ತ. ವಿಶೇಷವಾಗಿ ಶ್ರೀಮಹಾವಿಷ್ಣುವನ್ನು ಕುರಿತು ತಪಸ್ಸು ಮಾಡಿ ಬೇರಾರಿಂದಲೂ ಜಯಿಸಲಶಕ್ಯವಾದ ಶಕ್ತಿಯನ್ನು ಪಡೆದಿದ್ದನು.

ರಾಕ್ಷಸತ್ವ ಗುಣದಿಂದ ಕೊಡಿದ್ದುದರಿಂದ ತಪಃಶಕ್ತಿಯನ್ನು ಪಡೆದಿದ್ದರೂ ರಜೋ ಗುಣ ಭೂಯಿಷ್ಠನಾಗಿ, ಅಹಂಕಾರದಿಂದ ಮೆರೆಯುವ ದೇವತೆಗಳನ್ನೂ ಬಿಡದೇ ಬಿಡದಂತೆ ಎಲ್ಲರಿಗೂ ನಾನಾ ರೀತಿಯಾದ ತೊಂದರೆಯನ್ನು ಉಂಟು ಮಾಡುತ್ತಿದ್ದನು. ಇವನ ಹಿಂಸೆಯನ್ನು ಸಹಿಸಲಾರದೇ ದೇವತೆಗಳು ಶ್ರೀಚತುರ್ಮುಖ ಬ್ರಹ್ಮದೇವರಲ್ಲಿ ಏನಾದರೂ ಮಾಡಿ ನಾಶಪಿಡಿಸಬೇಕೆಂದು ಮೊರೆಯಿಟ್ಟರು.

ಆಗ ಶ್ರೀ ಚತುರ್ಮುಖ ಬ್ರಹ್ಮದೇವರು ಶ್ರೀ ಮಹಾವಿಷ್ಣುವಿನ ಅನುಗ್ರಹಕ್ಕೆ ಪಾತ್ರನಾದ ಇವನನ್ನು ತಾನು ಏನೂ ಮಾಡಲಾರನೆಂದರಿತು ಶ್ರೀಮಹಾವಿಷ್ಣುವಿನಲ್ಲೇ ಮೊರೆ ಹೋಗಿ. ಇದಕ್ಕೆ ಒಂದು ಉಪಾಯವನ್ನು ತಿಳಿಸಬೇಕೆಂದು ಪ್ರಾರ್ಥಿಸುತ್ತೇನೆ.

ಆಗ ಶ್ರೀ ಮಹಾವಿಷ್ಣುವು ತನ್ನ ಭಕ್ತನಾದ ಗಯಾಸುರನ ವಿಷಯದಲ್ಲಿ ವಿಶೇಷವಾದ ಕೃಪೆಯಿಂದ ಕೂಡಿದವನಾನಿ, ತನ್ನಲ್ಲಿ ಶರಣು ಹೋದ ಶ್ರೀ ಚತುರ್ಮುಖ ಬ್ರಹ್ಮಾದಿಗಳಿಗೂ ಅನುಗ್ರಹ ಮಾಡುವ ಸಲುವಾಗಿ ಶ್ರೀ ಮಹಾವಿಷ್ಣುವು ಒಬ್ಬ ಬ್ರಾಹ್ಮಣನ ವೇಷವನ್ನು ಧರಿಸಿ, ಗಯಾಸುರನ ಬಳಿ ಹೋಗಿ ತಾನು ಒಂದು ಮಹತ್ತರವಾದ ವೈಷ್ಣವ ಯಜ್ಞವನ್ನು ಮಾಡಬೇಕೆಂದು ಅದಕ್ಕೆ ಸ್ಥಳವಾವುದೂ ಸಿಗದಿರುವುದರಿಂದ, ಎಲೈ ಗಯನೇ ನೀನೆ ಅಂಥಹ ಸ್ಥಳವೊಂದನ್ನು ತೋರಿಸಿ ಕೊಡಬೇಕೆಂದು ಹೇಳಿದನು!

ಆಗ ಶ್ರೀಮಹಾವಿಷ್ಣು ಭಕ್ತನಾದ ಗಯನು ವೈಷ್ಣವ ಯಾಗಕ್ಕೆ ತನ್ನ ದೇಹವನ್ನೇ ಅರ್ಪಿಸುವುದಾಗಿ ತೀರ್ಮಾನಿಸಿ ತನ್ನ ಎದೆಯ ಮೇಲೆ ಯಜ್ಞ ಕುಂಡವನ್ನು ನಿರ್ಮಿಸಿ ಅಲ್ಲಿಯೇ ಶ್ರೀಮಹಾವಿಷ್ಣು ಪ್ರೀತಿಗಾಗಿ ಈ ವೈಷ್ಣವ ಯಜ್ಞವನ್ನು ಮಾಡಬಹುದೆಂದು ಹೇಳಿ ಮಲಗಿದನು.

ಆ ಕೂಡಲೇ ಶ್ರೀ ಚತುರ್ಮುಖ ಬ್ರಹ್ಮದೇವರು ಅವನ ಎದೆಯ ಮೇಲೆ ಹಾಸುಗಲ್ಲನ್ನೊಂದು ಇಟ್ಟು ಅದರ ಮೇಲೆ ಯಜ್ಞ ಕುಂಡವನ್ನು ನಿರ್ಮಿಸಿದರು. ಆಗ ಗಯನ ಉಸಿರಾಟದ ಕಾರಣ ಯಜ್ಞ ಕುಂಡವು ಅಲಗಾಡಿತು. ಅದನ್ನು ಕಂಡ ಶ್ರೀ ಬ್ರಹ್ಮದೇವರು, ಕುಂಡವನ್ನು ಸ್ಥಿರಗೊಳಿಸಬೇಕೆಂದು ಶ್ರೀ ಹರಿಯಲ್ಲಿ ಪ್ರಾರ್ಥಿಸಿದನು.

ಅದೇ ಸಮಯದಲ್ಲಿ ತನ್ನ ಮೇಲಿನ ಭಕ್ತಿಯಿಂದ ದುಷ್ಟವಾದ ರಾಕ್ಷಸ ಜನ್ಮದಲ್ಲಿ ಹುಟ್ಟಿದ್ದರೂ ತನ್ನ ಮರಣವನ್ನೇ ಲಕ್ಷ್ಯ ಮಾಡದೇ ಯಜ್ಞಾರ್ಥವಾಗಿ ತನ್ನ ದೇಹವನ್ನೇ ಅರ್ಪಿಸಿದ ತನ್ನ ಭಕ್ತನಿಗೆ ಶಾಶ್ವತವಾದ ವೈಕುಂಠ ಲೋಕವನ್ನೇ ಅನುಗ್ರಹಿಸಿ ಕೊಡಬೇಕೆಂದು ತೀರ್ಮಾನಿಸಿ ತನ್ನ ಬಲ ಪಾದವನ್ನು ಅವನ ಎದೆಯ ಮೇಲಿರುವ ಯಜ್ಞ ಕುಂಡದಲ್ಲಿಟ್ಟು ನಿಂತು ಕೊಂಡನು.

ತನ್ನ ನಿಜ ಸ್ವರೂಪವನ್ನು ತೋರಿಕೊಂಡನು. ಆ ಕೂಡಲೇ ಶ್ರೀ ಪರಮಾತ್ಮನ ಸಂಸರ್ಗದಿಂದ ಸತ್ವ ಗುಣ ಭೂಯಿಷ್ಠನಾದ ಗಯಾಸುರನು ಶ್ರೀ ಹರಿಯನ್ನು ಕಂಡು ಅವನಲ್ಲಿ ಬೇಡುತ್ತಾನೆ.

ಸ್ವಾಮಿ! ನಾನು ಇಷ್ಟುದಿನ ಮಾಡಿದ ತಪಸ್ಸಿನ ಫಲವು ಇಂದು ಲಭಿಸಿತು. ನನಗೆ ಇಂದು ನೀವು ಮುಕ್ತೈಶ್ವರ್ಯವನ್ನು ಕರುಣಿಸಿ ಕೊಡಿ. ನಿಮ್ಮ ಪಾದದಿಂದ ಅಂಕಿತವಾಗಿರುವ ಸ್ಥಳವು ಗಯಾ ಕ್ಷೇತ್ರ ವೆಂದು ಪ್ರಸಿದ್ಧಿಗೆ ಬರಲಿ! ನಿಮ್ಮ ಪಾದದ ಅಂಕನವು ಎಂದೆಂದಿಗೂ ಅಳಿಯದಂತೆ ನಿಮ್ಮ ಸಂಪೂರ್ಣ ಸನ್ನಿಧಾನದಿಂದ ಇಲ್ಲಿರಲಿ. ನನಗೆ ಮಾತ್ರವಲ್ಲದೆ ಯಾವುದೇ ಚೇತನವನ್ನು ಉದ್ಧೇಶಿಸಿ ಯಾರೇ ಪಿಂಡ ದಾನ ಮಾಡಿದರೂ ಅವರೆಲ್ಲರಿಗೂ ನೀವು ಮುಕ್ತಿಯನ್ನು ಅನುಗ್ರಹಿಸಿರಿ.

ಇಲ್ಲಿ ವಾಸಿಯುವ ನನ್ನ ವಂಶದ ಬ್ರಾಹ್ಮಣರನ್ನು ಅಸುರನ ವಂಶದವರೆಂದು ಯಾರೊಬ್ಬರೂ ತಿರಸ್ಕರಿಸದೇ ಅವರಿಗೆ ಮನ್ನಣೆ ನೀಡಿ ಅವರನ್ನೇ ಶ್ರಾದ್ಧದಲ್ಲಿ ನಿಮಂತ್ರಿತರಾಗಿ ವರಿಸಿ ಪಿತೃಗಳ ಉದ್ಧೇಶ್ಯವಾಗಿ ಶ್ರಾದ್ಧ ಮಾಡಲಿ. ಇದರಿಂದ ಪಿತೃಗಳು ಸಂತುಷ್ಟರಾಗಲಿ. ಉದ್ಧಿಷ್ಟರಾದ ಚೇತನರು ಮುಕ್ತಿಯನ್ನು ಪಡೆಯಲಿ. ಈ ನನ್ನ ವಂಶದ ಬ್ರಾಹ್ಮಣರಿಗೆ ಶ್ರಾದ್ಧಾನ್ನ ಭೋಜನ ಮಾಡಿದ ದೋಷವು ತಟ್ಟದಿರಲಿ.

ನಾನು ತಲೆಯಿಟ್ಟಿರುವ ಸ್ಥಳವು ಗಯಾ ಶಿರಸ್ ಎಂದು ಪ್ರಸಿದ್ಧವಾದ ಪುಣ್ಯಕ್ಷೇತ್ರವಾಗಲಿ. ಇಲ್ಲಿ ಪಿತೃಗಳನ್ನು ಉದ್ಧೇಶಿಸಿ ಮಾಡಿದ ಪಿಂಡ ದಾನಗಳು ಪಿತೃಗಳಿಗೆ ಸಂತೋಷವನ್ನುಂಟು ಮಾಡಲಿ ಎಂದು ವರವನ್ನು ಬೇಡಿದನು. ಆ ಕೂಡಲೇ ಶ್ರೀ ಮಹಾವಿಷ್ಣುವು ತಥಾಸ್ತು (ಹಾಗೆ ಆಗಲಿ) ಎಂದು ಅನುಗ್ರಹಿಸಿ ತಕ್ಷಣದಲ್ಲಿ ಮುಕ್ತಿಯನ್ನೂ ಅನುಗ್ರಹಿಸಿದನು.

ಆದುದರಿಂದ ಈ ಕ್ಷೇತ್ರದಲ್ಲಿ ಮೃತಿ ಹೊಂದಿರುವ ಯಾವುದೇ ಚೇತನರನ್ನು ಉದ್ಧೇಶಿಸಿ ಶ್ರಾದ್ಧ, ಪಿಂಡ ದಾನಗಳನ್ನು ಮಾಡಿದರೂ ಅವರಿಗೆ ಮುಕ್ತಿ ಸಿದ್ಧ ಅಂತೆಯೇ ಪಿತೃಗಳೂ ವಿಶೇಷವಾದ ಸಂತೋಷವನ್ನು ಹೊಂದುತ್ತಾರೆ.

ಜೀವಂತವಾಗಿರುವ ಚೇತನರು ಪೂರ್ವದಲ್ಲಿ ತಾವು ಅನೇಕ ಜನ ಗಂಡು ಮಕ್ಕಳನ್ನು ಪಡೆದುಕೊಳ್ಳಬೇಕೆಂದು ಇಚ್ಛಿಸುತ್ತಿದ್ದರು. ಏಕೆಂದರೆ ಅವರಲ್ಲಿ ಒಬ್ಬರಾದರೂ ತನ್ನ ಮರಣಾ ನಂತರ ಗಯಾ ಕ್ಷೇತ್ರಕ್ಕೆ ಹೋಗಿ ತನಗೆ ಮುಕ್ತಿ ಸಿಗಲೆಂದು ಪಿಂಡದಾನ ಮಾಡುವಂತಾಗಲಿ ಎಂದು…ಶ್ರೀ ವಾಲ್ಮಿಕೀ ರಾಮಾಯಣದ ಆಯೋಧ್ಯ ಕಾಂಡದಲ್ಲಿ.. ಏಷ್ಟವ್ಯಾಃ ಬಹವಃ ಪುತ್ರಾಃ ಯದ್ಯೇಕೋಖಪಿ ಗಯಾಂ ವ್ರಜೇತ್ ॥ಶ್ರೀಮನ್ಮಹಾಭಾರತಡಾ ಆದಿ ಪರ್ವದಲ್ಲಿ 235, ವನ ಪರ್ವದಲ್ಲಿ 83, ವಾಯು ಪುರಾಣದಲ್ಲಿ 106 ಶ್ಲೋಕಗಳಲ್ಲಿ ಗಯಾ ಶ್ರಾದ್ಧದ ಮಹಿಮೆಯ ವಿಷಯ ಹೇಳಲ್ಪಟ್ಟಿದೆ.

ಗಯಾ ಎಂಬ ಹೆಸರಿನಿಂದ ಪ್ರಸಿದ್ಧವಾದ ಕ್ಷೇತ್ರವಾದರೋ ಶ್ರೀಬ್ರಹ್ಮಾದಿ ದೇವತೆಗಳಿಂದ ಇಚ್ಛಿಸಲ್ಪಟ್ಟುದಾಗಿದೆ. (ತಾವು ಮಾಡಿರುವ ಕೆಟ್ಟ ಕರ್ಮಗಳ ಫಲವಾಗಿ ತಮಗೆ ಸಂಭವಿಸಬಹುದಾದ ನರಕಾದಿ ಲೋಕಗಳಿಂದ ಭಯಕ್ಕೆ ಒಳಗಾದ ಮೃತಿ ಹೊಂದಿದ ಪಿತೃಗಳಾದರೋ ತನ್ನ ಮಕ್ಕಳು ಗಯೆಗೆ ಹೋಗಿ ಅಲ್ಲಿ ತನಗೆ ಪಿಂಡ ದಾನವನ್ನು ಮಾಡಬೇಕೆಂದು ಇಚ್ಛಿಸುತ್ತಾರೆ.

ಯಾವ ಮಗನು ಗಯೆಗೆ ಹೋಗಿ ನಮ್ಮನ್ನುದ್ಧೇಶಿಸಿ ಪಿಂಡ ದಾನವನ್ನು ಮಾಡುತ್ತಾನೆಯೋ ಅವನೇ ನಮಗೆ ರಕ್ಷಕನಾಗಿರುತ್ತಾನೆ ಎಂಬ ಅಭಿಪ್ರಾಯದಿಂದ ಗಯೆಗೆ ಹೋದ ಮಗನನ್ನು ಕಂಡು ಪಿತೃಗಳು ಹರ್ಷ ಚಿತ್ತರಾಗುತ್ತಾರೆ.

ಕಾಲಿಂದಲಾದರೂ (ಗಯೆಯಲ್ಲಿರುವ ಫಲ್ಗು ನದಿಯ) ತೀರ್ಥವನ್ನು ಸ್ಪರ್ಶಿಸಿದವನು ನಮಗೆ ಏನನ್ನೂ ತಾನೇ ಕೊಡಲಾರ. ಗಯೆಗೆ ಹೋಗಿ ಮೃತರಾದ ಪಿತೃಗಳನ್ನುದ್ಧೇಶಿಸಿ ಅನ್ನ ದಾನವನ್ನು ಮಾಡುತ್ತಾರೆಯೋ, ಆ ಪುತ್ರನಿಂದಲೇ ಮೃತರಾದವರು ಪುತ್ರನನ್ನು ಹೊಂದಿದ ಭಾಗ್ಯವನ್ನು ಪಡೆದವರಾಗಿ ಪುತ್ರೀ ಎಂಬ ಶಬ್ದಕ್ಕೆ ಅರ್ಹರಾಗುತ್ತಾರೆ.

ಗಯಾ ಕ್ಷೇತ್ರದಲ್ಲಿ ಮೂರು ಪಕ್ಷಗಳು ವಾಸವಾಗಿದ್ದು – ಅನ್ನ ಶ್ರಾದ್ಧ, ಹಿರಣ್ಯ ಶ್ರಾದ್ಧ ಅಥವಾ ಆಮ ಶ್ರಾದ್ಧ ಅಥವಾ ತರ್ಪಣ ರೂಪದಲ್ಲಿ ತೀರ್ಥ ಶ್ರಾದ್ಧವನ್ನಾದರೂ ಮಾಡುವವನು ತನ್ನ ಹಿಂದಿನ ಏಳು ತಲೆಮಾರಿನ ಪಿತೃಗಳನ್ನು – ಅವರ ಪಾಪ ಕರ್ಮಗಳಿಂದ ಬಿಡಿಸಿ ಶುದ್ಧಿಗೊಳಿಸುತ್ತಾನೆ! ಗಯಾ ಶ್ರಾದ್ಧ ಮಾಡುವವನಿಗೂ ಮತ್ತು ಅವನ ವಂಶದಲ್ಲಿ ಜನಿಸಿ ಮೃತಿ ಹೊಂದಿದವರಿಗೂ ಸಂಭವಿಸಿದ ಬಹಳ ಘೋರವಾದ ಬ್ರಹ್ಮಹತ್ಯಾ, ಸುರಾಪಾನ, ಸ್ವರ್ಣಸ್ತೇಯ, ತಾಯಿಯೇ ಮೊದಲಾದ ಹಿರಿಯ ಸ್ತ್ರೀಯರೊಡನೆ ಲೈಂಗಿಕ ಸಂಬಂಧ ಇವೇ ಮೊದಲಾದ ಪಾಪಗಳು ಗಯಾ ಶ್ರಾದ್ಧ ಮಾಡುವುದರಿಂದ ನಾಶವಾಗುತ್ತದೆ.

ತನ್ನ ಸ್ವಂತ ಮಗನೇ ಆಗಲೀ ಅಥವಾ ಬೇರಾರ ಮಗನೇ ಆಗಲೀ ಮೃತಿ ಹೊಂದಿದ ಯಾವ ಚೇತನನ ಗೋತ್ರ, ಹೆಸರನ್ನು ಹೇಳಿ ಯಾವಾಗ ಗಯಾ ಕ್ಷೇತ್ರದಲ್ಲಿ ಪಿಂಡ ದಾನ ಮಾಡುತ್ತಾನೆಯೋ ಆ ಕ್ಷಣದಲ್ಲಿಯೇ ಅವನು ಕೊಟ್ಟ ಪಿಂಡಕ್ಕೆ ಪಾತ್ರನಾದ ಚೇತನನು ಬ್ರಹ್ಮ ಸಾಯುಜ್ಯವನ್ನು ಪಡೆಯುತ್ತಾನೆ.

ತರ್ಪಣ – ಒಂದು ಚಿಂತನೆ
ಬಂಗಾರ – ಬೆಳ್ಳಿ – ತಾಮ್ರ ಮತ್ತು ಕಂಚು ಪಾತ್ರೆಗಳಲ್ಲಿ ತರ್ಪಣವನ್ನು ಕೊಡುವುದು. ಪಿತೃಗಳಿಗೆ ತರ್ಪಣವನ್ನು ಕೊಡುವಾಗ ಮಣ್ಣಿನ ಪಾತ್ರೆಯಲ್ಲಿ ಯಾವ ಕಾರಣದಿಂದಲೂ ಕೊಡಬಾರದು. ಬಂಗಾರ, ಬೆಳ್ಳಿ, ತಾಮ್ರ ಮಾತು ಕಂಚು ಪಾತ್ರೆಗಳಲ್ಲಿ ಕೊಡಬಹುದು.

ಉಪನೀತನಾದ ಪ್ರತಿಯೊಬ್ಬ ಬ್ರಾಹ್ಮಣನೂ ದೇವ – ಋಷಿ – ಆಚಾರ್ಯ ಮತ್ತು ಪಿತೃ ತರ್ಪಣಗಳನ್ನು ಕೊಡಬೇಕು. ತರ್ಪಣ ಎರಡು ವಿಧ .
1. ಜಲ ತರ್ಪಣ
2. ತಿಲ ತರ್ಪಣ
ಜಲ ತರ್ಪಣವನ್ನು ಪ್ರತಿನಿತ್ಯ ಬ್ರಹ್ಮಯಜ್ಞದಲ್ಲಿ ಕೊಡಬೇಕು.

ದರ್ಶ (ಅಮಾವಾಸ್ಯೆ) ಪರ್ವಕಾಲ, ಸೂರ್ಯ – ಚಂದ್ರ ಗ್ರಹಣ, ಉತ್ತರ – ದಕ್ಷಿಣಾಯನ – ಮಾತಾ ಪಿತೃಗಳ ಶ್ರಾದ್ಧಗಳಲ್ಲಿ – ಮಹಾಲಯ ಇತ್ಯಾದಿ ಷಣ್ಣವತಿ ಅಂದರೆ 96 ಪರ್ವ ಕಾಲಗಳಲ್ಲಿ ಪಿತೃಗಳಿಗೆ ತಿಲ ತರ್ಪಣ ಗಳನ್ನು ಕೊಡಬೇಕು. ಹೀಗೆ ತರ್ಪಣ ಕೊಡುವುದರಿಂದ ದೇವ – ಋಷಿ – ಗುರು – ಪಿತೃಗಳು ಸಂತೃಪ್ತರಾಗಿ ಆಶೀರ್ವದಿಸುವರು. ಅದರಿಂದ ಸಮಸ್ತ ಮಂಗಲವಾಗುವುದು!

ಪುಣ್ಯಕ್ಷೇತ್ರ, ಪುಣ್ಯನದಿ, ಸಮುದ್ರ ಅಥವಾ ತೀರ್ಥಗಳಲ್ಲಿ ಸ್ನಾನ ಮಾಡಿದ ನಂತರ ತರ್ಪಣವನ್ನು ಕೊಡಬೇಕು. ತಿಲ ತರ್ಪಣ (ಎಳ್ಳು – ನೀರು ಸಮೇತ) ಕೊಡದ ಸಾಧ್ಯವಿಲ್ಲದ ಪಕ್ಷದಲ್ಲಿ ಜಲ ತರ್ಪಣವನ್ನಾದರೂ (ಬರೀ ನೀರಿನಿಂದ) ಕೊಡಲೇಬೇಕು.

ಮೂರು ದರ್ಭೆಗಳಿಂದ ಮಾಡಿದ ಪವಿತ್ರವನ್ನು ಬಲಗೈ ಅನಾಮಿಕ ಬೆರಳಿಗೆ (ಕಿರು ಬೆರಳಿನ ಪಕ್ಕದ ಬೆರಳು – ಉಂಗರದ ಬೆರಳು) ತರ್ಪಣ ಕೊಡುವ ಕಾಲದಲ್ಲಿ ಹಾಕಿಕೊಳ್ಳಬೇಕು. ಅದು ಸಾಧ್ಯವಿಲ್ಲದ ಪಕ್ಷದಲ್ಲಿ ಅಂದರೆ ದರ್ಭೆ ದೊರೆಯದೇ ಇದ್ದಾಗ ಚಿನ್ನದ ಅಥವಾ ಬೆಳ್ಳಿಯ ಪವಿತ್ರದ ಉಂಗುರವನ್ನು ಧರಿಸಿಕೊಂಡು ಅಂಗೈಯಲ್ಲಿ ತುಳಸೀದಳವನ್ನಿಟ್ಟುಕೊಂಡು ತರ್ಪಣವನ್ನು ಕೊಡಬೇಕು.

ತರ್ಪಣದಲ್ಲಿ ದರ್ಭೆಯ ಪವಿತ್ರ
ದರ್ಭೆಯಿಂದ ಮಾಡಿದ ಪವಿತ್ರವನ್ನು ಧರಿಸುವುದೇ ಸರಿಯಾದ ಕ್ರಮ. ಉಳಿದಿದ್ದು ಅಪಧರ್ಮ. ಹಾಗೆಂದು ದರ್ಭೆಯಿಂದ ಮಾಡಿದ ಪವಿತ್ರ ಇರುವಾಗ ಅದನ್ನು ಬಿಟ್ಟು ಬೇರೇ ಪ್ರಯತ್ನ ಮಾಡುವುದು ಸೂಕ್ತವಲ್ಲ.

ದರ್ಭೆಯ ಪವಿತ್ರ ಇಲ್ಲದ ಪಕ್ಷದಲ್ಲಿ ಮೂರು ದರ್ಭೆಗಳನ್ನು ಅನಾಮಿಕಾ ಬೆರಳಿಗೆ ಸುತ್ತಿಕೊಂಡು ತರ್ಪಣ ಕೊಡುವ ಸಂಪ್ರದಾಯವೂ ಉಂಟು. ದರ್ಭೆಯು ಸಿಕ್ಕದಿದ್ದರೆ ಬೆರಳುಗಳ ಮಧ್ಯದಲ್ಲಿ ತುಳಸೀದಳ ವನ್ನು ಸಿಕ್ಕಿಸಿ ಕೊಂದಾದರೂ ತರ್ಪಣವನ್ನು ಕೊಡಬಹುದು.

ತರ್ಪಣಕ್ಕಾಗಿ ಪ್ರತ್ಯೇಕ ಕಲಶೋದಕಕವನ್ನು ಉಪಯೋಗಿಸಬೇಕು. ಅಂದರೆ ಆಚಮನಕ್ಕೆ ಪ್ರತ್ಯೇಕ ನೀರು ಇಟ್ಟುಕೊಳ್ಳಬೇಕು. ತರ್ಪಣದ ಕಲಶಕ್ಕೆ ಸಾಲಗ್ರಾಮ ನಿರ್ಮಾಲ್ಯ ತೀರ್ಥವನ್ನು ಸೇರಿಸಬೇಕು.

1. ತರ್ಪಣ ಕೊಡುವಾಗ ಋಗ್ವೇದಿಗಳು ಮೊದಲು ಹೆಸರು ಹೇಳಿ ನಂತರ ಗೋತ್ರವನ್ನು ಹೇಳಬೇಕು.
2. ಯಜುರ್ವೇದಿಗಳು ಮೊದಲು ಗೋತ್ರವನ್ನೂ ನಂತರ ಹೆಸರನ್ನೂ ಹೇಳಬೇಕು.
3. ತರ್ಪಣಕ್ಕೆ ಬಾಧ್ಯಸ್ತರಾಗಿದ್ದು ಗತಿಸಿದವರ ಗೊತ್ತಿಲ್ಲದ ಪಕ್ಷದಲ್ಲಿ ಯಜ್ಞಪ್ಪ ಎಂದು ಗಂಡಸರಿಗೂ; ಯಜ್ಞಮ್ಮ ಎಂದು ಹೆಂಗಸರಿಗೂ ಹೇಳಬೇಕು.
4. ಗೋತ್ರ ಗೊತ್ತಿಲ್ಲದ ಪಕ್ಷದಲ್ಲಿ ಕಾಶ್ಯಪ ಗೋತ್ರ ಎಂದು ಹೇಳಬೇಕು.
5. ಪಿತೃಗಳಿಗೆ ತರ್ಪಣವನ್ನು ಬಲ ಅಂಗೈಯಲ್ಲಿ ತಿಲವನ್ನಿಟ್ಟುಕೊಂಡು ಕಲಶದ ನೀರನ್ನು ಹಾಕಿಕೊಂಡು ಬಲಗೈ ಅಂಗುಷ್ಠದ (ಹೆಬ್ಬಟ್ಟಿನ) ಮತ್ತು ತೋರು        ಬೆರಳಿನ ಬುಡಗಳ ಮಧ್ಯದಿಂದ ಮೂಸಲಾ ತಾಮ್ರದ ಪಾತ್ರೆಯಲ್ಲಿ ಕೊಡತಕ್ಕದ್ದು.
6. ನೆಲದ ಮೇಲೆ ತರ್ಪಣದ ನೀರು ಬೀಳಬಾರದು.

ನಾಳಿನ ಲೇಖನ: ಸೆಪ್ಟೆಂಬರ್ 23ರ ಸೋಮವಾರ ಅವಿಧವಾ ನವಮೀ: ಮಾತೃ ವಂದನಮ್ – ಒಂದು ಚಿಂತನೆ

Tags: DarbeDr. Gururaja PoshettihalliKannada ArticleMahalaya AmavasyePaksha MasaPitru PakshaShraddaಗಯಾ ಶ್ರಾದ್ಧಡಾ. ಗುರುರಾಜ ಪೋಶೆಟ್ಟಿಹಳ್ಳಿತಿಲ ತರ್ಪಣದರ್ಬೆಪಕ್ಷ ಮಾಸಪಿತೃ ಪಕ್ಷಮಹಾಲಯ ಅಮಾವಾಸ್ಯೆಶ್ರಾದ್ಧಶ್ರೀ ಚತುರ್ಮುಖ ಬ್ರಹ್ಮದೇವರುಶ್ರೀ ಮಹಾವಿಷ್ಣು
Share203Tweet123Send
Previous Post

ಡಿಕೆಶಿ ಸಿಂಹ ಎಂಬುದಕ್ಕೆ ಎರಡು ಮಾತಿಲ್ಲ, ಆದರೆ ಎಂತಹ ಸಿಂಹ?

Next Post

‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರಕ್ಕೆ ಬ್ಯಾಂಕಾಕ್’ನಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರಕ್ಕೆ ಬ್ಯಾಂಕಾಕ್’ನಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣ

‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರಕ್ಕೆ ಬ್ಯಾಂಕಾಕ್’ನಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಸಂಚಾರ ದಟ್ಟಣೆ ನಿಯಂತ್ರಿಸಲು ರೈಲ್ವೆ ಕೆಳ ಸೇತುವೆಗಳು ಸಹಕಾರಿ: ಸಚಿವ ಸೋಮಣ್ಣ

ಸಂಚಾರ ದಟ್ಟಣೆ ನಿಯಂತ್ರಿಸಲು ರೈಲ್ವೆ ಕೆಳ ಸೇತುವೆಗಳು ಸಹಕಾರಿ: ಸಚಿವ ಸೋಮಣ್ಣ

February 26, 2026
ಪತ್ರಕರ್ತರ ಹಿತ ಕಾಯಲು ಬದ್ಧ: ಕೇಂದ್ರ ಸಚಿವರ ಭರವಸೆ

ಪತ್ರಕರ್ತರ ಹಿತ ಕಾಯಲು ಬದ್ಧ: ಕೇಂದ್ರ ಸಚಿವರ ಭರವಸೆ

February 26, 2026
ಮನೆ ನಿರ್ಮಾಣ ಸಾಮಗ್ರಿ ಕಳ್ಳತನ | ಓರ್ವನ ಬಂಧನ

ಮನೆ ನಿರ್ಮಾಣ ಸಾಮಗ್ರಿ ಕಳ್ಳತನ | ಓರ್ವನ ಬಂಧನ

February 26, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
ಟಿಕೆಟ್ ಟು ಹಾಲಿವುಡ್ | ಬೆಂಗಳೂರಿನ 2026ರ ಅತಿದೊಡ್ಡ ಹೋಳಿ ಸಂಭ್ರಮದ ಟಿಕೆಟ್‌ಗಳು ಈಗ ಬುಕ್‌ಮೈಶೋನಲ್ಲಿ!

ಟಿಕೆಟ್ ಟು ಹಾಲಿವುಡ್ | ಬೆಂಗಳೂರಿನ 2026ರ ಅತಿದೊಡ್ಡ ಹೋಳಿ ಸಂಭ್ರಮದ ಟಿಕೆಟ್‌ಗಳು ಈಗ ಬುಕ್‌ಮೈಶೋನಲ್ಲಿ!

February 26, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL