No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Thursday, March 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಪ್ರಕೃತಿ ಮೇಲೆ ಮನುಷ್ಯನೆಂಬ ಕ್ಷುದ್ರ ಜೀವಿಯ ನಿರಂತರ ಅತ್ಯಾಚಾರವೇ ನೆರೆ-ಬರಕ್ಕೆ ಕಾರಣ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 9, 2019
in Army
0
ಪ್ರಕೃತಿ ಮೇಲೆ ಮನುಷ್ಯನೆಂಬ ಕ್ಷುದ್ರ ಜೀವಿಯ ನಿರಂತರ ಅತ್ಯಾಚಾರವೇ ನೆರೆ-ಬರಕ್ಕೆ ಕಾರಣ
Share on FacebookShare on TwitterShare on WhatsApp

ಕಳೆದ 5 ದಿನಗಳಿಂದ ಕೆಲಸದ ನಿಮಿತ್ತ ದೆಹೆಲಿಯಲ್ಲಿದ್ದೇನೆ. ಇಲ್ಲಿಗೆ ಬಂದ ದಿನದಿಂದ ನನ್ನೂರಿನಲ್ಲಿ ಮಹಾ ಮಳೆ!!! ಅಮ್ಮನಿಗೆ ಫೋನಾಯಿಸಿದಾಗಲೆಲ್ಲ ಬರೀ ನೀರಿನದೇ ಚರ್ಚೆ. ತುಂಗೆ ತುಂಬಿ ಹರಿಯುತ್ತಿದ್ದಾಳೆ, ಮಂಟಪ ಮುಳುಗಿದೆ, ಕೆಲವು ಕೆಳ ಪ್ರದೇಶಗಳಿಗೆ ನೀರು ನುಗ್ಗಿದೆ ….ಇನ್ನೂ ಏನೇನೋ.

ಇಲ್ಲಿನ ಹೋಟೆಲ್ಲಿನ್ನಲ್ಲಿ ಕಷ್ಟುಪಟ್ಟು ಹುಡುಕಿದ ಒಂದೆರಡು ಕನ್ನಡ ಚಾನಲ್ಗಳನ್ನು ನೋಡಿದ ನಂತರ ಸುಮ್ಮನೆ ಇರಲಾಗದ-ಏನೂ ಮಾಡಲಾಗದ ಚಡಪಡಿಕೆ…..ಯಾವ ಯಾವ ನೆಲದಲ್ಲಿ ನೀರೆಂದರೆ ಜನ ಪ್ರಾಣ ಬಿಡುತ್ತಿದ್ದರೋ ಅಲ್ಲೇ ಆ ಜನರು ನೀರಿನಿಂದಲೇ ಪ್ರಾಣ ಬಿಡುವಂತಾಗಿದೆ!!! ಎಂದೂ ಹೆಸರು ಸಹಾ ಕೇಳದ ಯಾವುದೋ ಹೊಸ ನದಿಗಳೆಲ್ಲ ತುಂಬಿ ಹರಿಯುತ್ತಿದೆ!! ನೀರಿಗಾಗಿ ಆ ಬಯಲುಸೀಮೆ ಜನರು ವರ್ಷಾನುಗಟ್ಟಲೆ ಮಾಡಿದ ತಪ್ಪಸ್ಸನ್ನು ಮೆಚ್ಚಿ ಒಮ್ಮೆಲೆ ಆಕಾಶದ ನಲ್ಲಿಯನ್ನು ತಿರುಗಿಸಿ ಆ ದೇವರು ನೀರು ಬಿಟ್ಟಂತಾಗಿದೆ.!

ಅಲ್ಲಿ ಕೆಲವು ಜಾಗಗಳಲ್ಲಿ ಮಳೆ ಇಲ್ಲವೇ ಇಲ್ಲ! ಆದರೆ ಪ್ರವಾಹವಿದೆ…. ಎಲ್ಲೋ ಹನಿಯಾಗಿ ಬಿದ್ದ ನೀರು ಇಲ್ಲಿ ಬಂದು ಈ ಜನರನ್ನು ಒದ್ದೆ ಮಾಡಿದೆ!!!! ಎಂದೂ ಕಂಡು ಕೇಳಿರದ ಹೊಸ ರೌದ್ರಾನುಭವಕ್ಕೆ ಇವರು ಸಾಕ್ಷಿಯಾಗಿದ್ದಾರೆ. ಹತ್ತಾರು ವರ್ಷಗಳಿಂದ ನೀರಿನ ನಾಮಾವಷೇವೂ ಇಲ್ಲದ ಕೆರೆ-ಕೊಳ್ಳಗಳು ಕೋಡಿ ಬಿದ್ದಿವೆ….. ಬಯಸಿ ಬಯಸಿ ಬರೆ ಎಳೆದುಕೊಂಡಂತಾಗಿದೆ.

ಬಾಗಲಕೋಟೆ, ಬೆಳಗಾಮ್, ಬೀದರ್, ಬಿಜಾಪುರದ ಕಥೆ ಇದಾದರೆ…..ಮಳೆ ಸಹಜವಾಗಿಯೇ ಹೆಚ್ಚಿರುವ ಮಲೆನಾಡಿನಲ್ಲೂ ಅದೇ ಕುಂಭದ್ರೋಣದ ಅವಸ್ಥೆ!!!! ವರ್ಷಾನು ವರ್ಷ ಮಳೆ ಇಲ್ಲದೇ ಪರಿತಪಿಸುವ ಹಾಸನದ ಬಯಲುಸೀಮೆ ಭಾಗಗಳಾದ ಬೆಳವಾಡಿ, ಅರಸೀಕೆರೆ, ಹಾರನಹಳ್ಳಿಗಳಲ್ಲಿ ಮಳೆ ಇಲ್ಲದೇ ಜನ ಆಕಾಶದತ್ತ ಮುಖಮಾಡಿ ಕಾಯುತ್ತಿದ್ದಾರೆ….. ಇತ್ತ ಬಳ್ಳಾರಿ-ಕೊಪ್ಪಳ ಭಾಗದಲ್ಲೂ ಬರದ ಕರಿ ನೆರಳು. ಇದರ ಮಧ್ಯೆ ಅಲ್ಲಿ ಮೈಸೂರು ಕೊಡಗು ಮುಳು ಮುಳುಗಿ ಎಳುತ್ತಿವೆ….ಉತ್ತರ ಕನ್ನಡ-ದಕ್ಷಿಣ ಕನ್ನಡವಂತೂ ಅಕ್ಷರಷಃ ಕೊಚ್ಚಿ ಹೋಗಿವೆ!!!!!

ಇದೇನು ವಿಪರ್ಯಸ ಒಂದು ರಾಜ್ಯದಲ್ಲಿ ಒಂದೇ ಸಮಯದಲ್ಲಿ ಬರ ಮತ್ತು ನೆರೆ ಒಟ್ಟೊಟ್ಟಿಗೆ!!!!! ಒಮ್ಮೆ ಅತಿವೃಷ್ಠಿ ಒಮ್ಮೆ ಅನಾವೃಷ್ಠಿ ನೋಡಿದ್ದ ನಮಗೆ ಈ ಎರಡೂ ವಿಪರೀತಗಳೂ ಕೈ ಕೈ ಹಿಡಿದು ಜೊತೆಯಾಗಿ ಬಂದಿರುವುದು ಜೀರ್ಣಿಸಿಕೊಳ್ಳಲಾಗುತ್ತಿಲ್ಲ!!!

ಒಮ್ಮೆ ಯೋಚಿಸಿ ನೋಡಿ…. ಏಕೆ ಹೀಗೆ ?!! ನಮ್ಮ ಕಾಲ ಮೇಲೆ ನಾವೇ ಚಪ್ಪಡಿ ಎಳೆದುಕೊಂಡವೇ? ಇದ್ದರೂ ಇರಬಹುದು!!! ಗೊತ್ತಿಲ್ಲ …..ಕವಿ ಜಿ.ಎಸ್.ಎಸ್ ಈ ನಿರ್ವಾತ ಸ್ಥಿತಿಯನ್ನು ಈ ರೀತಿ ಬಣ್ಣಿಸುತ್ತಾರೆ. “ನಾಗರಿಕತೆಯಲ್ಲಿ ನಾವು ಮುಂದುವರಿದಂತೆ ನಮಗೂ ನಿಸರ್ಗಕ್ಕೂ ನಡುವಣ ಅಂತರ ಹೆಚ್ಚಾಗುತ್ತಿದೆ. ಅಭಿವೃದ್ಧಿಶೀಲತೆಯ ಹೆಸರಿನಲ್ಲಿ ನಮ್ಮ ಕಣ್ಣೆದುರಿಗೆ ನಾವು ಪರಿಸರ ನಾಶದ ಮಹಾದುರಂತಗಳನ್ನು ಕಾಣುತ್ತಿದ್ದೇವೆ. ನಮ್ಮ ಜೀವಧಾತುವಾದ ಹಸಿರು ಕಣ್ಮರೆಯಾಗುತ್ತಿದೆ; ಯಂತ್ರೋದ್ಯಮಗಳ ಆಧಿಕ್ಯದಿಂದ ನಮ್ಮ ನದೀಜಲಗಳು ಕಲ್ಮಶಗೊಳ್ಳುತ್ತಿವೆ; ಉಸಿರಾಡುವ ಗಾಳಿ, ತಿನ್ನುವ ಅನ್ನ – ಎಲ್ಲವೂ ಮಲಿನಗೊಳ್ಳುತ್ತಿವೆ. ನಗರೀಕರಣದ, ಯಾಂತ್ರೀಕರಣದ ಭರಾಟೆಗಳಲ್ಲಿ ನಾವು ಸುತ್ತಣ ನಿಸರ್ಗದ ಯಾವ ಚೆಲುವನ್ನೂ ಕಾಣಲಾರದ ಪ್ರಾಯೋಜನಿಕ ಬುದ್ಧಿಯ ಬಂದಿಗಳಾಗಿದ್ದೇವೆ. ಯಾವುದೂ ತನ್ನ ಮೊದಲಿನ ಶುದ್ಧ ರೂಪದಲ್ಲಿ ದೊರೆಯಲಾಗದ ಒಂದು ‘ಮಾಲಿನ್ಯ ಯುಗ’ವನ್ನು ನಾವು ಪ್ರವೇಶಿಸುತ್ತಿದ್ದೇವೆ. ಈ ಮಾಲಿನ್ಯ ಕೇವಲ ಹೊರಗಿನದು ಮಾತ್ರವಲ್ಲ, ಒಳಗಿನದೂ ಕೂಡ!”……. ಎಷ್ಟು ನಿಜ ಅಲ್ವಾ?!

ಎರಡು ತಿಂಗಳ ಹಿಂದೆ ಮುಂಗಾರು ಆರಂಭವಾದಾಗ ಬರಬೇಕಾದ ಮಳೆ ಬಂದಿರಲಿಲ್ಲ…..ಧರ್ಮಸ್ಥಳದಂತಹ ನಿತ್ಯ ಹರಿದ್ವರ್ಣದ ಜಾಗದಲ್ಲಿ ನೀರು ಇರಲಿಲ್ಲ.. ಬಿಸಿಲ ಝಳ ತಾಳದೇ ಮಲೆನಾಡಿನ ಅಡಿಕೆ ಮರಗಳು ಒಣಗಿ ಹೋಗಿದ್ಹವು. ಮಲೆನಾಡಿನ ಜೀವ ನದಿಗಳಾದ ತುಂಗಾ, ಭಧ್ರ, ಶರಾವತಿಯ ಆಣೆಕಟ್ಟಿನ ಹಿನ್ನೀರು ಬತ್ತಿ ನೆಲ ಕಾಣುವ ಹಂತಕ್ಕೆ ಬಂದು ತಲುಪಿದ್ದವು!!! ಮುಂದಿನ ದಿನಗಳು ಹೇಗೋ ಅನ್ನುವಷ್ಟರಲ್ಲಿ ಈಗ ಈ ಮಳೆ. ಬರೀ ಮಳೆಯಲ್ಲಿ ಮಹಾಮಾರಿಯ ಮಳೆ!!

ಪ್ರತಿ ನೈಸರ್ಗಿಕ ಪ್ರಕೋಪವು ನಮಗೆ ಸುತ್ತಿ ಬಳಸಿ ಹೇಳುವುದೊಂದೆ…. ಹೇ ಮನುಜ ಪ್ರಕೃತಿಯ ಮುಂದೆ ನಿನ್ನ ಅಸ್ತಿತ್ವಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ…. ನೆಲ- ನೀರು, ಗಾಳಿ, ಪರಿಸರಕ್ಕೆ ಕೊಡಬೇಕಾದ ಮರ್ಯದೆಯನ್ನು ನೀನು ಕೊಡುತ್ತಿಲ್ಲ… ಇಗೋ ಇದು ನನ್ನ ಎಚ್ಚರಿಕೆಯ ಕರೆಗಂಟೆ!!

ಮನುಷ್ಯನೆಂಬ ಅತಿ ಕ್ಷುದ್ರ ಜೀವಿ ನಿರಂತರವಾಗಿ ಪ್ರಕೃತಿಯ ಮೇಲೆ ಅತ್ಯಾಚಾರ ಮಾಡುತ್ತಿದ್ದಾನೆ. ಅವಳು ಅಸಹಾಯಕಳಾಗಿ ರೋಧಿಸುತ್ತಿದ್ದಾಳೆ. ಕಣ್ಣೀರು ಕೋಡಿಯಾಗಿದೆ…. ಕೋಡಿಯಿಂದ ಕಟ್ಟೆಯೊಡೆದಿದೆ……. ಕಟ್ಟೆಯೊಡೆದು ಕೊಚ್ಚಿ ಹೋಗಿದೆ!! ಆಧುನಿಕರಾದ ನಾವು ಚಂದ್ರ-ಮಂಗಳ ಗ್ರಹಗಳನ್ನು ತಲುಪಬಹುದು ಆದರೆ ಸುರಿವ ಮಳೆಯನ್ನು ನಿಲ್ಲಿಸಲಾರೆವು….. ಪ್ರಾರ್ಥನೆಯೊಂದೆ ನಮಗಿರುವ ದಾರಿ…

“ಬೆಟ್ಟವೂ ನಿನ್ನದೇ ಬಯಲೂ ನಿನ್ನದೇ….ಹಬ್ಬಿ ನಗಲಿ ಪ್ರೀತಿ ನೆರಳೋ-ಬಿಸಿಲೋ ಎಲ್ಲವೂ ನಿನ್ನದೇ….ಇರಲಿ ಏಕರೀತಿ”

ಮುಳುಗದಿರಲಿ_ಬದುಕು

ಲೇಖನ: ವಿನಯ್ ಶಿವಮೊಗ್ಗ

Tags: droughtFloods in KarnatakaHuman BeingKannada ArticleNatural disasterRivers in KarnatakaVinay Shimogaನೈಸರ್ಗಿಕ ವಿಕೋಪಪ್ರವಾಹಮನುಷ್ಯ
Share196Tweet123Send
Previous Post

ಪ್ರವಾಹ ಸಂಕಷ್ಟಕ್ಕೆ ಸ್ಪಂದಿಸಲು ಶಿಷ್ಯಕೋಟಿಗೆ ರಾಘವೇಶ್ವರ ಶ್ರೀ ಕರೆ

Next Post

ಶಿವಮೊಗ್ಗ: ತುಂಗಾ ಹಳೇ ಸೇತುವೆ ಅಂಚಿನಲ್ಲಿ ಬಿರುಕು, ಸಂಚಾರ ಸಂಪೂರ್ಣ ಸ್ಥಗಿತ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿವಮೊಗ್ಗ: ತುಂಗಾ ಹಳೇ ಸೇತುವೆ ಅಂಚಿನಲ್ಲಿ ಬಿರುಕು, ಸಂಚಾರ ಸಂಪೂರ್ಣ ಸ್ಥಗಿತ

ಶಿವಮೊಗ್ಗ: ತುಂಗಾ ಹಳೇ ಸೇತುವೆ ಅಂಚಿನಲ್ಲಿ ಬಿರುಕು, ಸಂಚಾರ ಸಂಪೂರ್ಣ ಸ್ಥಗಿತ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
National Safety Week 2026 Observed at Carriage Repair Workshop, Hubballi

National Safety Week 2026 Observed at Carriage Repair Workshop, Hubballi

March 18, 2026
7 ತಿಂಗಳಲ್ಲಿ 355 ವಿಶೇಷ ರೈಲುಗಳ ಸಂಚಾರದಿಂದ ನೈಋತ್ಯ ರೈಲ್ವೆ ಗಳಿಸಿದ್ದು ಎಷ್ಟು ಕೋಟಿ ಆದಾಯ?

ಹುಬ್ಬಳ್ಳಿ | ರೈಲ್ವೆ ಇಲಾಖೆ ಪರೀಕ್ಷೆ ಮುಂದೂಡಿಕೆ

March 18, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಯುಗಾದಿ ಹಬ್ಬ ಹಿನ್ನೆಲೆ: ಯಶವಂತಪುರ ಮತ್ತು ಹೊಸಪೇಟೆ ನಡುವೆ ವಿಶೇಷ ರೈಲು ಸೇವೆ

March 18, 2026
ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

March 18, 2026
ಬಡವರ ಆರೋಗ್ಯದ ಜೊತೆ ಸರ್ಕಾರದ ಚೆಲ್ಲಾಟ | ಉಗ್ರಾಣಗಳಲ್ಲಿ 7 ತಿಂಗಳಾದರೂ ಔಷಧಿ ಪೂರೈಕೆಯಿಲ್ಲ: ಶಾಸಕ ಡಾ. ಧನಂಜಯ ಸರ್ಜಿ

ಬಡವರ ಆರೋಗ್ಯದ ಜೊತೆ ಸರ್ಕಾರದ ಚೆಲ್ಲಾಟ | ಉಗ್ರಾಣಗಳಲ್ಲಿ 7 ತಿಂಗಳಾದರೂ ಔಷಧಿ ಪೂರೈಕೆಯಿಲ್ಲ: ಶಾಸಕ ಡಾ. ಧನಂಜಯ ಸರ್ಜಿ

March 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL