ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದ ಅತ್ಯಂತ ಪ್ರತಿಷ್ಠಿತ 134ನೇ ಇಂಡಿಯನ್ ಆಯಿಲ್ ದುರಂದ್ ಕಪ್ ಫುಟ್ಬಾಲ್ ಪಂದ್ಯಾವಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಿದರು.
ರಾಷ್ಟ್ರಪತಿಗಳ ಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅವರು ಪಂದ್ಯಾವಳಿಗೆ ಚಾಲನೆ ನೀಡಿದರು.
ಇದು ಏಷ್ಯಾದ ಅತ್ಯಂತ ಹಳೆಯ ಮತ್ತು ವಿಶ್ವದ ಮೂರನೇ ಅತಿ ಹಳೆಯ ಫುಟ್ಬಾಲ್ ಪಂದ್ಯಾವಳಿಯಾಗಿದೆ. ರಾಷ್ಟ್ರಪತಿ ಭವನ ಸಾಂಸ್ಕೃತಿಕ ಕೇಂದ್ರದಿಂದ ಮೂರು ಐಕಾನಿಕ್ ಟ್ರೋಪಿಗಳನ್ನು ಅನಾವರಣ ಮಾಡಿದ್ದಾರೆ.
ಅರ್ಜುನ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ಭಾರತೀಯ ಫುಟ್ಬಾಲ್ ಆಟಗಾರ ಸಂದೇಶ್ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ದುರಂದ್ ಕಪ್ ಭಾರತ ಫುಟ್ಬಾಲ್ ಪರಂಪರೆಯಾಗಿದೆ. ಫುಟ್ಬಾಲ್ ಲಕ್ಷಾಂತರ ಜನರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಇದು ಕೇವಲ ಕ್ರೀಡೆಯಲ್ಲ, ಬದಲಾಗಿ ಇದೊಂದು ಉತ್ಸಾಹವಾಗಿದೆ. ದುರಂದ್ ಕಪ್’ನಂತಹ ಕಾರ್ಯಕ್ರಮಗಳು ಆಟದ ಉತ್ಸಾಹವನ್ನು ಬೆಳೆಸುವುದಲ್ಲದೇ, ಮುಂದಿನ ಪೀಳಿಗೆಯ ಫುಟ್ಬಾಲ್ ಆಟಗಾರನನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದರು.
ಲೆಫ್ಟಿನೆಂಟ್ ಜನರಲ್ ಆರ್.ಸಿ. ತಿವಾರಿ ಮಾತನಾಡಿ `ಭಾರತೀಯ ಸೇನೆಯು ಸಶಸ್ತ್ರ ಪಡೆಗಳ ಪರವಾಗಿ ನಡೆಸುವ ದುರಂದ್ ಕಪ್ ಫುಟ್ಬಾಲ್ ಪಂದ್ಯಾವಳಿಗಿಂತ ಹೆಚ್ಚಿನದಾಗಿದೆ ಎಂದರು.
ರಾಷ್ಟ್ರೀಯ ತಂಡವನ್ನು ಹಲವಾರು ಬಾರಿ ಮುನ್ನಡೆಸಿರುವ ಸಂದೇಶ್ ಮಾತನಾಡಿ, ದುರಂದ್ ಕಪ್’ನೊಂದಿಗಿನ ತಮ್ಮ ನಿರಂತರ ಅನುಭವಗಳನ್ನು ಹಂಚಿಕೊಂಡರು. ನಾವು ಇಂದು ಇಲ್ಲಿ ಒಟ್ಟು ಗೂಡಿದ್ದು ಕೇವಲ ಟ್ರೋಫಿಯನ್ನು ಅನಾವರಣಗೊಳಿಸಲು ಮಾತ್ರವಲ್ಲ ಭಾರತೀಯ ಫುಟ್ ಬಾಲ್ ಪ್ರಯಾಣವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶತಮಾನದಷ್ಟು ಹಳೆಯದಾದ ಸಂಪ್ರದಾಯವನ್ನು ಆಚರಿಸಲು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post