ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಹುತೇಕ ಅಂಬೇಡ್ಕರ್ ವಾದಿಗಳು ಅಂಬೇಡ್ಕರ್ ಅವರ ಅಮಲನ್ನೇರಿಸಿಕೊಂಡಿಸಿದ್ದಾರೆ. ಆದರೆ ಭಾರತದ ಸಮಕಾಲೀನ ಸಂದರ್ಭಕ್ಕೆ ಅಗತ್ಯವಾಗಿರುವುದು ಅಂಬೇಡ್ಕರ್ ಅರಿವು. ಭಾರತೀಯ ಸಂವಿಧಾನವನ್ನು ಅಂತರ್ಗತ ಮಾಡಿಕೊಳ್ಳುವುದೇ ಬಾಬಾ ಸಾಹೇಬರಿಗೆ ಸಲ್ಲಿಸಲಾಗುವ ನಿಜವಾದ ಗೌರವ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಕರ್ನಾಟಕ ರಾಜ್ಯ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಪ್ರಾರಂಭವಾದ “ಕನ್ನಡ ಸಂಸ್ಕೃತಿ ಮತ್ತು ಅಂಬೇಡ್ಕರ್ ಚಿಂತನೆಗಳು” ಕುರಿತ ಎರಡು ದಿನಹಾಲ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಭಾರತ ದೇಶವನ್ನು ತಿಳಿಯುವುದೆಂದರೆ, ದೇಶದ ಇತಿಹಾಸ, ಧರ್ಮ, ಜಾತಿಗಳು, ಆರ್ಥಿಕ- ಸಾಮಾಜಿಕ ಸಂಬಂಧಗಳು, ಮೌಲ್ಯಗಳು, ಸಂಸ್ಕೃತಿ, ಭಾಷೆಗಳನ್ನು ಅರ್ಥೈಸಿಕೊಳ್ಳುವುದು. ಇವೆಲ್ಲವುಗಳನ್ನು ಒಳಗೊಂಡ ಸಂವಿಧಾನದ ಅರಿವು ದೇಶದ ಪ್ರತಿಯೊಬ್ಬ ಪ್ರಜೆಗೂ ಅತ್ಯವಶ್ಯಕ ಎಂದರು.

ದೇಶದ ವಿವಿಧ ಸಮುದಾಯಗಳ ನಡುವೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಸಮಾನತೆ ಈಗಲೂ ಮುಂದುವರೆದಿದೆ. ಬುದ್ದನ ದಮ್ಮಮಾರ್ಗ, ಬಸವಣ್ಣನ ಸಮಾನತೆಯ ಮಾರ್ಗ, ಗಾಂಧೀಜಿ ಅವರ ಅಹಿಂಸಾ ಮಾರ್ಗ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಮಾರ್ಗ ಸಂವಿಧಾನದ ಮೂಲ ಪ್ರೇರಣೆಯಾಗಿವೆ ಎಂದು ಅಭಿಪ್ರಾಯಪಟ್ಟರು.

ಎರಡು ದಿನಗಳ ಕಾರ್ಯಾಗಾರದಲ್ಲಿ, ಡಾ. ಆರ್. ವಿ. ಚಂದ್ರಶೇಖರ್. ಅಕ್ಕೈ ಪದ್ಮಶಾಲಿ, ಡಾ. ರಾಜಪ್ಪ ದಳವಾಯಿ, ಡಾ. ಬಾಲಗುರುಮೂರ್ತಿ, ಅನಸೂಯ ಕಾಂಬಳೆ ಅಂಬೇಡ್ಕರ್ ಕುರಿತ ವಿವಿಧ ವಿಷಯಗಳ ಬಗ್ಗೆ ವಿಚಾರ ಮಂಡಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















Discussion about this post