ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಕಾತರದಿಂದ ಕಾಯುತ್ತಿರುವ ಏಳನೆಯ ವೇತನ ಆಯೋಗದ ಶಿಫಾರಸ್ಸು ಇದೇ ಆಗಸ್ಟ್ 15ರಿಂದ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಸ್ವಾತಂತ್ರ್ಯ ದಿನದಂದು ಮೋದಿ ಸರ್ಕಾರ ಇದನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದ್ದು, ಇದೀಗ, ಮಹಾರಾಷ್ಟ್ರ ಸರ್ಕಾರ ಈಗ ದೀಪಾವಳಿಯ ಉಡುಗೊರೆಯಾಗಿ ಏಳನೇ ವೇತನ ಆಯೋಗದಿಂದ ರಾಜ್ಯ ನೌಕರರು ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಘೋಷಿಸಿದೆ.
ಇನ್ನು, ದೀಪಾವಳಿಯಿಂದ ರಾಜ್ಯ ನೌಕರರಿಗೆ ಏಳನೆಯ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲಾಗುವುದು ಎಂದು ಮಹಾರಾಷ್ಟ್ರದ ರಾಜ್ಯ ಹಣಕಾಸು ಸಚಿವ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ. ಇದು ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಅನುದಾನವನ್ನು ಹೆಚ್ಚಿಸುತ್ತದೆ. ಸರ್ಕಾರದ ಪರವಾಗಿ ಸರ್ಕಾರದ ನೌಕರರಿಗೆ ದೀಪಾವಳಿ ಉಡುಗೊರೆಯಾಗಿರುವುದಾಗಿ ಮುಂಗಂತಿವಾರ್ ಹೇಳಿದ್ದಾರೆ. ಈ ನಿರ್ಧಾರವು 19 ಲಕ್ಷ ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದರು.
Discussion about this post