ಸ್ನೇಹಿತರಾದ Nithin Talari ಅವರಿಂದ “ಅಮೇರಿಕಾ!ಅಮೇರಿಕಾ!!” ಚಿತ್ರದ ಕೆಲವು ದೃಶ್ಯಗಳನ್ನು Wattsapp ಮೂಲಕ ಕಳುಹಿಸಿಕೊಂಡು ವೀಕ್ಷಿಸಿದ್ದೆ….
ಚಿತ್ರದ ಆಳ ಅರಿಯದ ವಯಸ್ಸಿನಲ್ಲಿ ನಾ ಈ ಚಿತ್ರ ವೀಕ್ಷಿಸಿದ್ದೆನಾದರೂ, ಚಿತ್ರದ ಹಾಡುಗಳು ಟಿವಿಯಲ್ಲಿ ಬಂದಾಗೆಲ್ಲ ಸಂಗೀತ ರುಚಿಸಿದ್ದು ನೆನಪಿಗೆ ಬರುತ್ತಿತ್ತು. ಮತ್ತೊಮ್ಮೆ ಹೊಸದಾಗಿ ಚಿತ್ರ ಅವಲೋಕಿಸಬೇಕೆಂದು ಅಂದುಕೊಂಡಾಗೆಲ್ಲ ಕೆಲ ಕೆಲಸಗಳು ಮುಳ್ಳಾಗುತ್ತಿದ್ದವು. ಏನಾದರಾಗಲಿ ಅಂದುಕೊಂಡು ಇಂದು ಬಿಡುವು ಮಾಡಿಕೊಂಡು ಚಿತ್ರ ವೀಕ್ಷಿಸಿದಾಗ ಕಂಡದ್ದು “ಅಮೇರಿಕಾ” ಮಾತ್ರವಲ್ಲದೇ ಇನ್ನು ಅನೇಕ ಭಾವನಾತ್ಮಕ ಬಾಂಧವ್ಯಗಳು,ಸ್ನೇಹಿತರು ಹೇಳುತ್ತಿದ್ದದ್ದು.
ನೆನಪಿಗೆ ಬರುತ್ತಿತ್ತು “ಅಮೇರಿಕಾ!ಅಮೇರಿಕಾ!!” ಅಂದ್ರೆ ನೆನಪಾಗೋದೇ ‘ರಮೇಶ್ ಅರವಿಂದ್” ಸರ್ ನಟನೆ ಅಂತ ಇದು ಕಂಡಿತಾ ನೂರಕ್ಕೆ ಇನ್ನೂರು ಪಟ್ಟು ಸತ್ಯದ ಮಾತು ಪ್ರೀತಿಯನ್ನು ತ್ಯಾಗ ಮಾಡಿಯೂ ನಾಯಕನಾಗಿ ಗುರುತಿಸಿಕೊಂಡವರು ರಮೇಶ್ ಅರವಿಂದ್.
ಯಾವ ಮೋಹನ…ಹಾಡಿನ ಶುರುವಿನಲ್ಲಿ ನನ್ನ ಕಣ್ಣಂಚಲಿ ನೀರು ಜಿನುಗಿದ್ದನ್ನು ಗಮನಿಸಿದೆ, ಇದಕ್ಕೆ ಕಾರಣ ರಮೇಶ್ ಅರವಿಂದ್ ಅಭಿನಯ ಎಂದು ಹೊಸದಾಗಿ ಹೇಳಬೇಕಿಲ್ಲ, ಅಭಿನಯಕ್ಕೆ ಸಾತ್ ನೀಡಿದ್ದು ರಾಜು ಅನಂತ ಸ್ವಾಮಿಯವರ ಸಂಗೀತ…
ಅಭಿನಯಗಳಲ್ಲಿ ಹಲವು ಆಯಾಮಗಳಿರುವಂಥಹ ಮನೋಜ್ಜ್ಞ ನಟ ರಮೇಶ್ ಅರವಿಂದ್, ಇಂದಿನ ಪೀಳಿಗೆ “ನಾಗತಿಹಳ್ಳಿ ಚಂದ್ರಶೇಖರ್ “ರಂತಹ ಕ್ರಿಯಾಶೀಲ ನಿರ್ದೇಶಕರನ್ನು ಹಾಗು ರಮೇಶ್ ಅರವಿಂದ್ ರಂತಹ ಸಾತ್ವಿಕ ನಟರ ಸಿನಿಮಾಗಳನ್ನು miss ಮಾಡಿಕೊಳ್ಳುತ್ತಿರುವುದು ಅಪ್ರಿಯವಾದ ವಿಷಯ.
ಇಂದು unique concept ಎಂಬ ಹೇಳಿಕೆ ಅಡಿಯಲ್ಲಿ ಬರುತ್ತಿರುವ ಸಿನಿಮಾಗಳ ಹಾವಳಿ ನಡುವೆ ಕಳೆದು ಹೋಗಿರುವ ನಾವು- ನೀವು ಒಂದೊಳ್ಳೆ ಬಿಡುವಿಗಾಗಿ
ರಮೇಶ್ ಅರವಿಂದ್ರ ಸಿನಿಮಾಗಳನ್ನು ಪುನರಾವರ್ತಿಸಿಕೊಳ್ಳಬೇಕು ಎಂದು ನನ್ನ ಅಭಿಪ್ರಾಯ.
ಒಟ್ಟಿನಲ್ಲಿ “ಅಮೇರಿಕಾ! ಅಮೇರಿಕಾ!!”ನನ್ನ ಬದುಕಲ್ಲಿ ಒಂದು ಸಿನಿಮಾವಾಗಿ ಉಳಿಯದೆ ತರ್ಕಕ್ಕೆ ನಿಲುಕದ ಒಂದು ಭಾವನೆಗಳ ಗುಚ್ಛವಾಗಿಯೇ ಉಳಿದಿದೆ….
-ಸುಮುಖ
ಪತ್ರಿಕೋಧ್ಯಮ ವಿದ್ಯಾರ್ಥಿ,
ಶಿವಮೊಗ್ಗ







Discussion about this post