ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ನಗರದ ವಿವಿಧ ಕಾಲೇಜಿನ ಫಲಿತಾಂಶಗಳ ಹೀಗಿವೆ.
ಎಸ್‌ಎವಿ ಕಾಂಪೋಸಿಟ್ ಪಿಯು ಕಾಲೇಜು(ವಿಜ್ಞಾನ)
ಪರೀಕ್ಷೆ ಬರೆದ 102 ವಿದ್ಯಾರ್ಥಿಗಳ ಪೈಕಿ 28 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ಶ್ರೇಣಿಯಲ್ಲಿ 61, ದ್ವೀತಿಯ ಶ್ರೇಣಿಯಲ್ಲಿ 12 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಗುಲಾಮಿ ಹುಸೇನ್-586, ಯಶಸ್ವಿನಿ-583, ಧ್ರುವ-580, ಮೈತ್ರಿ-565, ಭರತ್-553, ಈ ಐವರು ವಿದ್ಯಾರ್ಥಿಗಳು ಗರಿಷ್ಠ ಅಂಕಗಳನ್ನು ಗಳಿಸಿದ್ದಾರೆ.
ಗಣಿತದಲ್ಲಿ ನಾಲ್ವರು ವಿದ್ಯಾರ್ಥಿಗಳು ಬಯಾಲಜಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಶೇ.100 ಅಂಕವನ್ನು ಗಳಿಸಿರುತ್ತಾರೆ.
ಸಂಚಿಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಹಳೇನಗರ: ಶೇ.57.47 ಫಲಿತಾಂಶ
ವಿಜ್ಞಾನ ವಿಭಾಗ
ಪರೀಕ್ಷೆ ಬರೆದ 272 ವಿದ್ಯಾರ್ಥಿಗಳ ಪೈಕಿ 151 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 4 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ಶ್ರೇಣಿಯಲ್ಲಿ 90 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಸಿಂಚನ ಎಂಬ ವಿದ್ಯಾರ್ಥಿನಿ 577 ಅಂಕಗಳನ್ನು ಗಳಿಸಿದ್ದು ಭೌತಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಶೇ 100 ಅಂಕಗಳನ್ನು ಗಳಿಸಿರುತ್ತಾಳೆ.
ಕಲಾ ವಿಭಾಗ
ಕಲಾ ವಿಭಾಗದಲ್ಲಿ ಕಾವ್ಯಶ್ರೀ-454 ಅಂಕವನ್ನು ಕೀರ್ತನ-453, ಚಂದ್ರ-507, ಅಂಕಗಳನ್ನು ಗಳಿಸಿದ್ದಾರೆ.
ವಾಣಿಜ್ಯ ವಿಭಾಗ
ವಾಣಿಜ್ಯವಿಭಾಗ
ದಿವ್ಯ-500, ಸ್ನೇಹ-502, ಕವನ-506, ಅನುಷ-507, ಕುಸುಮ-509 ಅಂಕಗಳನ್ನು ಗಳಿಸಿದ್ದಾರೆ.
ಎವಿಎಸ್ ವಿಜ್ಞಾನ ಕಾಲೇಜು, ಹೊಸಮನೆ ಬಡಾವಣೆ
ಹೊಸಮನೆ ಬಡಾವಣೆಯಲ್ಲಿರುವ ಅಕ್ಕಮಹಾದೇವಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಮುಜೀದ್ ಬೇಗ್-555(92.5%), ಇಂದ್ರಜಿತ್ ಸೋಮಯ್ಯ-552(92%) ಅಂಕ ಗಳಿಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post