ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಣಿಪಾಲ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಫದ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಗಳಿಗೆ ಉಸಿರಾಟದ ಸಮಸ್ಯೆಯೂ ಸಹ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತಂತೆ ಮಠದ ಮೂಲಗಳ ಮಾಹಿತಿ ನೀಡಿದ್ದು, ನ್ಯುಮೋನಿಯಾದ ಕಾರಣ ಗುರುಗಳ ಕೊಂಚ ಅಸ್ವಸ್ಥರಾಗಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಶತಮಾನ ಕಂಡ ಅಪರೂಪದ ಯತಿಗಳು ಸಂಪೂರ್ಣ ಆರೋಗ್ಯವಂತರಾಗಿ ನಮ್ಮ ನಿಮ್ಮನ್ನೆಲ್ಲಾ ಸದಾ ಹರಸುವ ಭಾಗ್ಯವನ್ನು ಶ್ರೀಹರಿ ವಾಯು ಗುರುಗಳು ಕರುಣಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
Get in Touch With Us info@kalpa.news Whatsapp: 9481252093
















