ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಈ ಬಾರಿಯ ಎಸ್’ಎಸ್’ಎಲ್’ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು ನಗರದ ಹಲವು ವಿದ್ಯಾರ್ಥಿಗಳು 620ಕ್ಕೂ ಅಧಿಕ ಅಂಕ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ನಗರದ ಶ್ರೀರಾಮಕೃಷ್ಣ ವಿದ್ಯಾನಿಕೇತನ ಶಾಲೆ ಎನ್. ಸಿಂಚನ 625ಕ್ಕೆ 622 ಅಂಕ ಗಳಿಸಿದ್ದಾರೆ. ಕನ್ನಡ-98, ಇಂಗ್ಲೀಷ್-100, ಗಣಿತ-100, ವಿಜ್ಞಾನ-100, ಸಂಸ್ಕೃತ-125 ಹಾಗೂ ಸಮಾಜ-99 ಅಂಕ ಗಳಿಸಿದ್ದಾರೆ.
ಸಿಂಚನ ಅವರು ಬ್ಯಾಂಕ್ ಉದ್ಯೋಗಿಯಾಗಿರುವ ನಾಗರಾಜ್ ಹಾಗೂ ಜಯಲಕ್ಷ್ಮೀ ದಂಪತಿಗಳ ಪುತ್ರಿ. ಈ ವಿದ್ಯಾರ್ಥಿನಿ 1ನೆಯ ತರಗತಿಯಿಂದ 10ನೆಯ ತರಗತಿಯವರೆಗೂ ಶ್ರೀರಾಮಕೃಷ್ಣ ವಿದ್ಯಾನಿಕೇತನ ಶಾಲೆ ವಿದ್ಯಾಭ್ಯಾಸ ಮಾಡಿದ್ದು, ಶಾಲೆಗೆ ಕೀರ್ತಿ ತಂದ ಈ ಪ್ರತಿಭಾನ್ವಿತೆಯನ್ನು ಸಂಸ್ಥೆ ಮುಖ್ಯಸ್ಥರು, ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು ಅಭಿನಂದಿಸಿದ್ದಾರೆ.
ನಗರದ ಸಾಂದೀಪಿನಿ ಶಾಲೆಯ ವಿದ್ಯಾರ್ಥಿನಿ ರಿಯಾ ಡಿಸೋಜಾ 625ಕ್ಕೆ 621 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ರಿಯಾ ಶಿವಮೊಗ್ಗ ಟೈಮ್ಸ್ ಪತ್ರಿಕೆಯ ರಾಕೇಶ್ ಡಿಸೋಜಾ ಅವರ ಪುತ್ರಿ. ಈಕೆ, ಕನ್ನಡದಲ್ಲಿ 125, ಇಂಗ್ಲಿಷ್-100, ಹಿಂದಿ-100, ಗಣಿತ-99, ವಿಜ್ಞಾನ-97 ಹಾಗೂ ಸಮಾಜದಲ್ಲಿ 100 ಅಂಕ ಗಳಿಸಿದ್ದಾರೆ.
ಇನ್ನು, ಆದಿಚುಂಚನಗಿರಿ ಶಾಲೆಯ ತನುಶ್ರೀ ಎಂಬ ವಿದ್ಯಾರ್ಥಿನಿ 625ಕ್ಕೆ 621 ಅಂಕ ಗಳಿಸಿದ್ದಾರೆ. ಕನ್ನಡ-125, ಇಂಗ್ಲಿಷ್-100, ಹಿಂದಿ-100, ಗಣಿತ-100, ವಿಜ್ಞಾನ-96 ಹಾಗೂ ಸಮಾಜದಲ್ಲಿ 100 ಅಂಕಗಳನ್ನು ಈಕೆ ಗಳಿಸಿದ್ದಾರೆ.
ತನುಶ್ರೀ ಕಾರ್ ಮೆಕ್ಯಾನಿಕ್ ಶಂಕರ್ ಹಾಗೂ ಉಮಾಮಹೇಶ್ವರಿ ದಂಪತಿಗಳ ಪತ್ರಿ.
ತಮ್ಮ ಸಂತಸವನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಹಂಚಿಕೊಂಡ ತನುಶ್ರೀ, ನನ್ನ ಈ ಪುಟ್ಟ ಸಾಧನೆಗೆ ನನ್ನ ತಂದೆ-ತಾಯಿ, ಶಿಕ್ಷಕರು ಹಾಗೂ ಶಾಲೆಯ ಸಹಕಾರ ಮುಖ್ಯವಾದುದು. ಕೊರೋನಾ ಲಾಕ್ ಡೌನ್’ನಿಂದ ಶಾಲೆ ಇಲ್ಲದೇ ಇದ್ದದ್ದು ಪುನರಾವರ್ತನೆ ಮಾಡಲು ಹೆಚ್ಚಿನ ಸಮಯ ದೊರೆತಿದ್ದು ನನಗೆ ಸಹಕಾರಿಯಾಯಿತು. ಸರ್ಕಾರವೂ ಸಹ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸಿಕೊಟ್ಟಿತು ಎಂದರು.
ಭವಿಷ್ಯದಲ್ಲಿ ವಿಜ್ಞಾನಿಯಾಗುವ ಕನಸು ನನಗಿದ್ದು, ಇಸ್ರೋದಲ್ಲಿ ಸೇವೆ ಸಲ್ಲಿಸುವ ಅಭಿಲಾಶೆ ಹೊಂದಿದ್ದೇನೆ ಎನ್ನುತ್ತಾರೆ ತನುಶ್ರೀ.
ಇನ್ನು, ಪ್ರಿಯದರ್ಶನಿ ವಿದ್ಯಾಸಂಸ್ಥೆಯ ಕಾವ್ಯ 625ಕ್ಕೆ 620 ಅಂಗ ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಜಿಲ್ಲೆಗೆ ಕೀರ್ತಿ ತಂದ ಈ ವಿದ್ಯಾರ್ಥಿಗಳನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಭಿನಂದಿಸುತ್ತದೆ.
Get In Touch With Us info@kalpa.news Whatsapp: 9481252093

















