ಶಿವಮೊಗ್ಗ: ವ್ಯಾನ್ ಹೋಲ್ ನಲ್ಲಿ ಇಳಿದ ಇಬ್ಬರು ಹೊರ ಗುತ್ತಿಗೆ ಕಾರ್ಮಿಕರು ಮೇಲೇಳಲು ಸಾಧ್ಯವಾಗದೆ ಸಾವನ್ನಪ್ಪಿರುವ ಧಾರುಣ ಘಟನೆ ನಾಗರಹಳ್ಳಿ ಗ್ಯಾಸ್ ಏಜೆನ್ಸಿಯ ಹಿಂಭಾಗದಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಬೆಂಚ್ಚಿಕಟ್ಟೆ ಗ್ರಾಮದ ನಿವಾಸಿಗಳಾದ ಅಂಜನಿ (17) ಎಂಬಾತನನ್ನು ಸುಮಾರು 20 ಅಡಿ ಆಳದ ಯುಜಿಡಿಯಲ್ಲಿ ಸ್ವಚ್ಚತೆ ಕಾಮಗಾರಿಯ ಅಂತಿಮ ಪರೀಕ್ಷಾರ್ಥ ಕಾರ್ಯ ನಡೆಯುವ ವೇಳೆ ಇಂದು ಮಧ್ಯಾಹ್ನ 3:30 ಕ್ಕೆ ಕೆಳಗಿಳಿಸಲಾಗಿತ್ತು. ಈ ವೇಳೆ ಯುಜಿಡಿಯ ನೀರಿನಲ್ಲಿ ಅಂಜನಿ ಮುಳುಗಿದ್ದಾನೆ. ಅಂಜನಪ್ಪನನ್ನು ಬಚಾವ್ ಮಾಡಲು ಹೋಗಿ ವೆಂಕಟೇಶ್ ಸಹ ಸಾವನ್ನಪ್ಪಿದ್ದಾನೆ.
ಅಗ್ನಿ ಶಾಮಕ ದಳದ ತಂಡ ಬಳಸಿ ಇಬ್ಬರ ಮೃತದೇಹವನ್ನು ಹೊರ ತೆಗೆಯಲಾಗಿದೆ. ಜಲಮಂಡಳಿಯ ವತಿಯಿಂದ ನಡೆಯುತ್ತಿರುವ ಈ ಸ್ವಚ್ಚತಾ ಕಾರ್ಯದ ಗುತ್ತಿಗೆಯನ್ನು ತಿಪ್ಪೇಶಿ ಎನ್ನುವವರು ಗುತ್ತಿಗೆ ತೆಗೆದುಕೊಂಡಿದ್ದರು. ಈ ಇಬ್ಬರು ಕಾರ್ಮಿಕರು ತಿಪ್ಪೇಶಿ ಬಳಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು, ಈ ವೇಳೆ ಪ್ರತಿಭಟನೆ ನಡೆಸಿದ ಕಾರ್ಮಿಕರು ಗುತ್ತಿಗೆದಾರರು ಹಾಗೂ ಜಲ ಮಂಡಳಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.
Discussion about this post