2019 ಲೋಕಸಭಾ ಚುನಾವಣೆಯಲ್ಲಿ ಕೋಟ್ಯಂತರ ಜನ ಮೋದಿಯ ನಿರೀಕ್ಷೆಯಲ್ಲೂ, ಇನ್ನೊಂದಡೆ ಯುಪಿಎ ಗೆಲುವಿನ ನಿರೀಕ್ಷಯಲ್ಲೂ ಇರುವುದು ಕಾಣುತ್ತದೆ. ಆದರೆ ಈ ವರ್ಷದ ವಿದ್ಯಾಮಾನ(ಗ್ರಹಸ್ಥಿತಿ ವಾತಾವರಣ) ದ ಪ್ರಕಾರ ಮೋದಿಯವರು ಮತ್ತೆ ಪ್ರಧಾನಿಯಾಗಿಯೇ ಆಗುತ್ತಾರೆ ಎಂದು ಹೇಳಬಹುದು. ಇದಕ್ಕೆ ಕಾರಣ ಅವರ ಜಾತಕ ಮತ್ತು ವರ್ಷ ಪಂಚಾಂಗ ಸ್ಥಿತಿಗಳು. ಆದರೆ ಯೋಗ ಇದ್ದವರೆಲ್ಲ ಪ್ರಧಾನಮಂತ್ರಿಯಾಗುವುದು ಅಸಾಧ್ಯ.
ಉದಾ: ಒಂದು ಉತ್ತಮ Trade Center ನಲ್ಲಿ ಅಂಗಡಿ ಹಾಕಿ ಮುಳುಗಿದವರೂ ಇದ್ದಾರೆ, ಬೆಳೆದವರೂ ಇದ್ದಾರೆ. ನನಗೆ ಲಾಭದಾಯಕ ದಶೆ, ಲಾಭದಾಯಕ ಗ್ರಹಸ್ಥಿತಿ ಎಂದು ಯಾವುದೇ ಕ್ರಿಯಾತ್ಮಕ, ಭಾವನಾತ್ಮಕ ಸ್ಪಂದನ ಇಲ್ಲದಿದ್ದರೆ ಉದ್ಧಾರ ಹೇಗಾಗಬೇಕು? ಅಂಗಡಿ ಹಾಕಿದವ ನನಗೆ ಲಾಭದ ದಶಾ ಭುಕ್ತಿ ಇದೆ ಎಂದು ಸಾರ್ವಜನಿಕರಿಗೆ(ವ್ಯಾಪಾರಕ್ಕೆ ಬರುವವರಿಗೆ) ಅವಶ್ಯಕತೆ ಇರುವ ಸಾಮಾನು(Commodities) ಇಡದೆ ಇದ್ದರೆ ಹೇಗಾದೀತು? ಅಥವಾ ಬೇಕಾದ ಸಾಮಾನುಗಳಿದ್ದು ದರ್ಪ ಅಹಂಕಾರದಿಂದ ಮಾತನಾಡಿದರೆ ಹೇಗಾದೀತು?.
ಗೆದ್ದೇಗೆಲ್ಲುವ ಆತ್ಮವಿಶ್ವಾಸ
ರಾಹುಲ್ ಗಾಂಧಿಯವರಲ್ಲಿ ಇರುವಷ್ಟು ಧನ ಸಂಪತ್ತು ಮೋದಿಯವರಲ್ಲೇನೂ ಇರಲಿಲ್ಲ. ಆದರೆ ವಾತಾವರಣಕ್ಕೆ ಹೊಂದಿಕೆ ಆಗುವಂತಹ ಕಾರ್ಯ ಚಟುವಟಿಕೆಯು ಮೋದಿಯವರನ್ನು ಇಷ್ಟು ಮೇಲೆ ತಂದಿದೆ. ಆದರೆ ಈ ಚಟುವಟಿಕೆಗೂ ವಿಪರೀತ ವಿರೋಧವೂ ಎದ್ದು ಕಾಣುತ್ತದೆ. ಆಗ ಮೋದಿಯವರನ್ನು ಇಷ್ಟ ಪಟ್ಟವರಿಗೆ ಒಮ್ಮೊಮ್ಮೆ ನಿರಾಶೆಯೂ ಆಗುತ್ತದೆ. ಅಟಲ್ ಜೀಯವರಂತೆ ಮತ್ತೆ ಬಾರದಿದ್ದರೆ? ಎಂಬ ಸಂಶಯವು ಮೋದಿ ಪ್ರಿಯರಿಗಿದ್ದರೆ, ಮೋದಿ ವಿರೋಧಿಗಳಿಗೆ ಅಟಲ್ ಜೀಯವರ ನಂತರದ ಬೆಳವಣಿಗೆ ಪುನರಾವರ್ತಿಸಬಹುದು ಎಂಬ ಆತ್ಮವಿಶ್ವಾಸ ಇದೆ. ಹಾಗಾಗಿಯೇ ನಾವು ಗೆದ್ದೇ ಗೆಲ್ಲುತ್ತೇವೆ, ರಾಹುಲ್ ಗಾಂಧಿ ಪ್ರಧಾನಮಂತ್ರಿ ಆಗಿಯೇ ಆಗುತ್ತಾರೆ ಎಂಬ ಆತ್ಮವಿಶ್ವಾಸ.
ಅಟಲ್ ಜೀ ದಕ್ಷ, ಪ್ರಾಮಾಣಿಕರಾದರೂ ಒಂದು ವಿಚಾರದಲ್ಲಿ ಹಿಂದೆ ಬಿದ್ದಿದ್ದರು. ಅಂದರೆ ಆಗ ಇಷ್ಟೊಂದು Media work ಇರಲಿಲ್ಲ. ಒಂದು ಹಗರಣವು ಸಾರ್ವಜನಿಕರಿಗೆ ತಡವಾಗಿ ತಿಳಿಯುತ್ತಿತ್ತು. ಒಂದು ಅಭಿವೃದ್ಧಿಯೂ ಅಷ್ಟೆ. ತಡವಾಗಿ ಸಾರ್ವಜನಿಕರಿಗೆ ತಿಳಿಯುತ್ತಿತ್ತು. ಆದರೆ ಈಗ ಹಾಗಲ್ಲ. ಸಾಕಷ್ಟು Mediaಗಳಿವೆ. ಒಂದು ಹಿನ್ನಡೆಯೋ, ಮುನ್ನಡೆಯೋ ಸಾಮಾಜಿಕ ಜಾಲತಾಣದಲ್ಲಿ ಕೇವಲ 1 ನಿಮಿಷದಲ್ಲಿ ಕೋಟ್ಯಂತರ ಜನರಿಗೆ ತಲುಪುವ ವ್ಯವಸ್ಥೆ ಇದೆ. ಇದು UPA- NDA ಎರಡಕ್ಕೂ ಮುನ್ನಡೆಯೂ ಆಗಬಹುದು, ಹಿನ್ನಡೆಯೂ ಆಗಬಹುದು.
ಮೋದಿಯವರಲ್ಲಿದೆ ಹಿಡನ್ ತಂತ್ರಗಾರಿಕೆ
ಮೋದಿಯವರಲ್ಲಿ ಒಂದು Hidden ತಂತ್ರಗಾರಿಕೆ ಇದೆ. ಅದು ಅವರಿಗೆ ಮಾತ್ರವೇ ಗೊತ್ತು. ಆ ತಂತ್ರಗಾರಿಕೆಯು ಎರಡು ವರ್ಷದ ಹಿಂದೆ ಒಂದು ಅದ್ಭುತ ಕೆಲಸ ಮಾಡಿತು. Demonetize, GST ಗಳೇ ಪ್ರಧಾನ. ಈ ಕೆಲಸವು ಕಪ್ಪುಹಣವಂತರನ್ನು ಬಾಯಿ ಮುಚ್ಚಿಸುವಂತೆ ಮಾಡಿತ್ತು. ನೆರೆಯ ಪಾಕಿಸ್ಥಾನವು ಆರ್ಥಿಕ ಸಂಕಷ್ಡಕ್ಕೆ ಒಳಗಾಗುವಂತೆಯೂ ಮಾಡಿತ್ತು. ಒಂದು ವೇಳೆ ಚುನಾವಣೆಗೆ ಕೇವಲ ಎರಡು ತಿಂಗಳ ಮುಂದೆ ಇದೇ ಸತ್ಕಾರ್ಯ ಮಾಡುತ್ತಿದ್ದರೆ ಮೋದಿಯವರು ಸೋಲಬಹುದಿತ್ತು. ಇದನ್ನು ಮನಗಂಡೇ ಈ ಕೆಲಸವನ್ನು ಎರಡು ವರ್ಷ ಹಿಂದೆಯೇ ಮಾಡಿದ್ದರು. ಈಗ ಜನರು ಅದಕ್ಕೆ ಹೊಂದಿಕೊಂಡಾಗಿದೆ ಮತ್ತು ಅದರ ಮಹತ್ವವನ್ನೂ ಅರಿತಾಗಿದೆ.
ಇದೊಂದು ಹೆಜ್ಜೆಯಾದರೆ ಇನ್ನೊಂದೆಡೆ ಸುಪ್ರೀಂ ಕೋರ್ಟ್ ತೀರ್ಮಾನಗಳು. ತ್ರಿತಲಾಕ್, ಇತ್ತೀಚೆಗಿನ ಮುಸ್ಲಿಂ ಹಿಂದೂ ಅಂತರ್ಜಾತಿಯ ವಿವಾಹಕ್ಕೆ ಪ್ರತಿಬಂಧಕ ಇತ್ಯಾದಿಗಳೂ ಬಹುಸಂಖ್ಯಾತರ ಒಲವನ್ನು ಪಡೆಯಲು ಕಾರಣವಾಗಿದೆ. ಕೇಂದ್ರ ಸರಕಾರದ ಆಧೀನದಲ್ಲಿ ಸುಪ್ರೀಂ ಕೋರ್ಟು ಕೆಲಸವೇನೂ ಮಾಡುತ್ತಿಲ್ಲ ಅಥವಾ ಮಾಡುವುದೂ ಇಲ್ಲ. ಆದರೆ Relevant ಪ್ರಸ್ತಾಪಗಳನ್ನು ಕೋರ್ಟಿಗೆ ತಲುಪಿಸುವ ಕೆಲಸವನ್ನು ಮೋದಿ ಸರಕಾರ ಮಾಡಿದೆ. ಹಿಂದಿನ ಸರಕಾರವು ಬೇಜವಾಬ್ದಾರಿಯಾಗಿದ್ದ ಪರಿಣಾಮವೇ ಮೋದಿ ಸರಕಾರಕ್ಕೆ ಲಾಭವೇ ಆಯ್ತು.
CHECK MATE CHECK MATE
ಇನ್ನೂ ಚುನಾವಣೆ ಘೋಷಣೆಗೆ ಮುಂಚೆ ಕೆಲವೊಂದು ಪ್ರಜಾಹಿತ ಕಾರ್ಯಗಳು ಆಗಲಿವೆ. ಹಾಗೆಯೇ ಕಪ್ಪು ಕುಳಗಳ ಮೇಲೆ ಇನ್ನಷ್ಟು ಕಲಂಕ ತರುವ ಕೆಲಸವೂ ಆಗಲಿದೆ. ಇದು ಮಾತ್ರ ಮೋದಿಯವರ ಗೆಲುವಿಗೆ 100% ಲಾಭ ತರಲಿದೆ. ಈಗಾಗಲೇ ಮೀಸಲಾತಿಯ 10% ಆರ್ಥಿಕ ದುರ್ಬಲರಿಗೆ ನೀಡಿದ್ದೂ ಗೆಲುವಿಗೆ ಪೂರಕ. ಅಂದರೆ ಇದನ್ನೆಲ್ಲ ಒಟ್ಟಿಗೆ CHECK MATE ಎನ್ನಬಹುದು. ಚಿತ್ರದಲ್ಲಿ ತೋರಿಸಿದಂತೆ ಚದುರಂಗದಾಟದಲ್ಲಿ ಗೆಲ್ಲುವ ಆಟಗಾರ ಮೊದಲೇ CHECK MATE ಕೊಡುವುದಿಲ್ಲ. ಅವನು ಆಟದ ಕೊನೆಗೆ ಎದುರಾಳಿಯನ್ನು ಪೂರ್ಣ CHECK MATE ಮಾಡಿಬಿಡುತ್ತಾನೆ. ಈ ಜಾಣ್ಮೆ ಮೋದಿಯವರಲ್ಲಿ ಇದೆ. ಕಾದು ನೋಡೋಣ.
CHECK MATE CHECK MATE
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post