No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
  • Advertise With Us
  • Grievances
  • About Us
  • Contact Us
Wednesday, September 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಅಪಾಯ ಕೋಟಿಗಳಿಗೆ ಉಪಾಯ ಒಂದೇ ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ

kalpa News by kalpa News
November 22, 2020
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
ಅಪಾಯ ಕೋಟಿಗಳಿಗೆ ಉಪಾಯ ಒಂದೇ ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ತಿರುಚ್ಚಿಯ ಶ್ರೀರಂಗನಾಥ ದೇವಸ್ಥಾನ , ಅಲ್ಲಿ ಬೆಳಗಿನ ಪೂಜೆ ಆದ ಬಳಿಕ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದವನ್ನು ನೆರೆದ ಭಕ್ತರಿಗೆ ಹಂಚುವುದು ವಾಡಿಕೆ .ಹಾಗೆ ಅದನ್ನು ಸ್ವಕರಿಸಲು ಭಕ್ತರೆಲ್ಲರೂ ಸರದಿಯ ಸಾಲಿನಲ್ಲಿ ಬಂದು ಭಕ್ತಿಯಿಂದ ಸ್ವೀಕರಿಸುತ್ತಿದ್ದಾಗ ಕಡು ಬಡವ ಹಿರಿಯರೊಬ್ಬರು ಸರದಿಯ ಸಾಲಿನಲ್ಲಿ ನಿಲ್ಲದೆ ಎಲ್ಲರನ್ನು ದೂಡಿ ಮುಂದೆಹೋಗಿ ನಿಲ್ಲುತ್ತಿದ್ದರು ಅಲ್ಲದೆ ಕೈಯಲ್ಲಿ ದೊಡ್ಡದೊಂದು ಪಾತ್ರೆಯನ್ನು ಹಿಡಿದು ಪ್ರಸಾದವನ್ನು ಕೇಳುತ್ತಿದ್ದರು. ನಾನು ಬಡವ ನನಗೆ 6 ಜನ ಮಕ್ಕಳಿದ್ದಾರೆ , ಇದು ಸಿಗದಿದ್ದರೆ ಅವರೆಲ್ಲ ನಿರಾಹಾರರಾಗ ಬೇಕಾಗುತ್ತದೆ ಎನ್ನುತ್ತಾ ಪ್ರಸಾದವನ್ನು ಕೇಳಿ ಪಡೆಯುತ್ತಿದ್ದರು. ಆದರೆ ಇದು ಪ್ರಸಾದ ಹಂಚುವ ದೇವಸ್ಥಾನದವರಿಗೆ ಮುಜುಗರ ತರುತ್ತಿತ್ತು, ಹಾಗಾಗಿ ಅವರು ನೇರವಾಗಿ ಶ್ರೀಪಾದ ರಾಮಾನುಜರ ಬಳಿ ದೂರು ಕೊಟ್ಟರು.

ಇದನ್ನು ಕೇಳಿದ ಶ್ರೀಪಾದ ರಾಮಾನುಜರು ಆ ಬಡವನನ್ನು ನೋಡಿ ವಿಚಾರ ತಿಳಿಯಲೆಂದು ಒಂದು ದಿನ ಪ್ರಸಾದ ಹಂಚುವಲ್ಲಿಗೆ ಬಂದು ಆ ಬಡವ ಹಿರಿಯರನ್ನು ಕಂಡು ಯಾಕೆ ಹೀಗೆ ಮಾಡುತ್ತೀರಿ ಎನ್ನಲು . ಆ ಬಡವ ಹಿರಿಯರು ಸ್ವಾಮಿ ನಾನು ಬಡವ ನನಗೆ 6 ಜನ ಸಣ್ಣಸಣ್ಣ ಮಕ್ಕಳಿದ್ದಾರೆ , ಹೊಟ್ಟೆಗೆ ಗತಿಯಿಲ್ಲ ಹಾಗಾಗಿ ನಾನು ಎಲ್ಲರನ್ನು ಹಿಂದೆಹಾಕಿ ಮುಂದೆನಿಂತು ಪಾತ್ರೆಯಲ್ಲಿ ಪ್ರಸಾದ ಕೇಳುತ್ತೇನೆ. ಸಾಲಿನಲ್ಲಿ ನಿಂತರೆ ಎಲ್ಲಿ ಪ್ರಸಾದ ಖಾಲಿಯಾಗುತ್ತದೆಯೋ ಅನ್ನುವ ತವಕ..

ವಿಚಾರ ತಿಳಿದ ಶ್ರೀಪಾದ ರಾಮಾನುಜರು ಆ ಹಿರಿಯರನ್ನು ನಿಮಗೆ ಶ್ರೀ ವಿಷ್ಣುಸಹಸ್ರನಾಮ ಹೇಳಲು ಬರುತ್ತದೆಯೋ ಅನ್ನಲು ಹಿರಿಯರು ನಾನು ಕಲಿತವನಲ್ಲ .. ಆದರೆ ಇಲ್ಲಿ ದೇವಸ್ಥಾನದಲ್ಲಿ ಅಲ್ಪ ಸ್ವಲ್ಪ ಕೇಳಿದ್ದೇನೆ.. ಶ್ರೀ ವಿಷ್ಣುಸಹಸ್ರನಾಮವನ್ನು…ಹಾಗಾದರೆ ನಿನಗೆ ಬರುವಷ್ಟು ಹೇಳು ಅನ್ನಲು ಆತ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |ಭೂತಕೃದ್ಭೂತಭೃದ್ಭಾವೋ … ಅನ್ನುತ್ತಲೇ ಶ್ರೀರಾಮಾನುಜರು ಅಂದರೆ ನಿನಗೆ ಶ್ರೀ ವಿಷ್ಣುವಿನ ಸಾವಿರ ಹೆಸರಿನಲ್ಲಿ ಆರು ಹೆಸರು ಮಾತ್ರ ಬರುತ್ತದೆ .. ಹೌದು ನಾನು ಕಲಿತವನಲ್ಲ… ಆಗ ಶ್ರೀಪಾದರು ಅದಕ್ಕೇನು ಬೇಸರವಿಲ್ಲ ಅದರಲ್ಲಿ ಬರುವ ಆರನೆಯ ಹೆಸರು ಭೂತ-ಭೃತ್: ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವವನು ಎಂದು , ನೀನು ಶ್ರದ್ದೆ ಮತ್ತು ಸಂಪೂರ್ಣ ಭಕ್ತಿಯಿಂದ ಆ ಆರನೆಯ ಹೆಸರನ್ನು ಜಪಮಾಡು ಅದರಿಂದ ನಿನ್ನ ಕಷ್ಟ ಪರಿಹಾರವಾಗುತ್ತದೆ ಎಂದು ಆತನಿಗೆ ಶ್ರೀ ಭೂತ-ಭೃತ್ಯಯೇ ನಮಃ ಅನ್ನುವಂತೆ ಉಪದೇಶಿಸಿದರು..

ಕೆಲದಿನಗಳ ಬಳಿಕ ಶ್ರೀಪಾದರು ಪ್ರಸಾದ ಹಂಚುವವರನ್ನು ಆ ಹಿರಿಯ ವಿಚಾರದಲ್ಲಿ ಕೇಳಿದಾಗ ಅವರು ಸ್ವಾಮಿ ಅವರು ಈಗ ಬರುತ್ತಿಲ್ಲ . ಏನಾಗಿದೆ ಅಂತ ಗೊತ್ತಿಲ್ಲ. ಬಹಳಷ್ಟು ಸಮಯ ವಾಯಿತು ಅವರನ್ನು ನೋಡದೆ.. ಆದರೆ ಒಂದು ವಿಚಾರ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದ ಪೂಜೆಯ ಬಳಿಕ ನೋಡಿದರೆ ಯಾರೋ ತೆಗೆದಂತೆ ಕಾಣುತ್ತದೆ . ಆ ಹಿರಿಯರು ಹೇಗೋ ಬಂದು ಅದನ್ನು ತೆಗೆಯುತ್ತಾರಾ ಏನೋ ಅನ್ನುವ ಸಂಶಯ ವ್ಯಕ್ತ ಪಡಿಸಿದರು. ಶ್ರೀಪಾದರು ಒಂದು ದಿನ ನೋಡಲು ಪ್ರಸಾದ ಪೂಜೆಯ ಬಳಿಕ ಕಮ್ಮಿಯಾದದ್ದನ್ನು ಕಂಡು…

ಶ್ರೀಪಾದರು ಆ ಹಿರಿಯರನ್ನು ಕಾಣಲು ನದಿಯನ್ನು ದಾಟಿ ಹಿರಿಯರಿದ್ದ ಸಣ್ಣ ಗುಡಿಸಲಿನತ್ತ ಹೋದಾಗ ಹಿರಿಯರು ಶ್ರೀಪಾದರ ಕಾಲಿಗೆ ನಮಸ್ಕರಿಸಿ ತಾವು ಮಹಾನ್ ಮಹಿಮರು ನಮ್ಮ ಕಷ್ಟಗಳೆಲ್ಲ ಪರಿಹಾರವಾಯಿತು. ಅಲ್ಲಿಗೆ ಪ್ರಸಾದಕ್ಕೆ ಬರಬೇಕಾಗಿಲ್ಲ ದಿನಾ ನೀವು ಕಳುಹಿಸಿದ ಹುಡುಗ ಬಂದು ನಮಗೆ ಬೇಕಾದಷ್ಟು ಪ್ರಸಾದವನ್ನು ಕೊಟ್ಟು ಹೋಗುತ್ತಿದ್ದಾನೆ . ನಿಮಗೆ ತುಂಬುದು ಹೃದಯದ ಧನ್ಯವಾದಗಳು ಅನ್ನುತ್ತಲೇ ಶ್ರೀಪಾದರಿಗೆ ಅರಿವಾಯಿತು ಇದೆಲ್ಲ ಶ್ರೀ ರಂಗನಾಥನ ಮಹಿಮೆ ….

ಭೂತ-ಭೃತ್: ಎಲ್ಲಾ ಜೀವಿಗಳನ್ನು ಪೋಷಿಸುವವನು ಅವನೇ ಹಾಗಿರುವಾಗ ಭಕ್ತಿಯಿಂದ ಪೂಜಿಸಿದ ಜಪಮಾಡಿದ ಹಿರಿಯರನ್ನು ಹೇಗೆಬಿಟ್ಟುಹೋಗುತ್ತಾನೆ ಎಂದು ಮನದಲ್ಲಿಯೇ ನೆನೆಸಿದರು. ಅಲ್ಲದೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಮಾತು ಮತ್ತೆ ನೆನಪಾಯಿತು. ನಚ ಮಸ್ತಾನಿ ಭೂತಾನಿ .. ಪಶ್ಯಾಮಿ ಯೋಗ ಮಸ್ವರಂ..

ಶ್ರೀ ವಿಷ್ಣುಸಹಸ್ರನಾಮದ ಪ್ರತಿಯೊಂದು ಹೆಸರು ಅದರದೇ ಆದ ಮಹತ್ವವನ್ನು ಹೊಂದಿದೆ ಅದನ್ನು ಅರಿತು ಪಠಿಸಿದರೆ ಒಳ್ಳೆಯದು…

ಮಂತ್ರಗಳ ರಾಜ ವಿಷ್ಣುಸಹಸ್ರನಾಮ
ಸಾಯುವ ಕೊನೆಯಕಾಲದಲ್ಲಿ ಹೇಳುವ ಮಾತನ್ನು ಹೇಗೆ ನ್ಯಾಯಲಯದಲ್ಲಿ ನ್ಯಾಯಾಧೀಶರು ಒಪ್ಪುತ್ತಾರೊ ಹಾಗೆ ಅಷ್ಟವಸುಗಳಳೊರ್ವ ಭರತ ವರ್ಷದ ಋಷಿ ಶ್ರೇಷ್ಠರಾದ ವಸಿಷ್ಠರು, ದೇವತೆಗಳಿಗೆ ಗುರುವಾಗಿರುವ ಬೃಹಸ್ಪತಿ, ಶುಕ್ರಾಚಾರ್ಯ, ಪರಶುರಾಮರಿಂದ ಶಿಕ್ಷಣ ಪಡೆದು ಆಚಾರ್ಯರೆಂದೆನಿಸಿದ ಭೀಷ್ಮಾಚಾರ್ಯರು ಶರಮಂಚದಲ್ಲಿ ಮಲಗಿ ತನ್ನ ಕೊನೆಯ ಕ್ಷಣದಲ್ಲಿ ಜಗದನ್ಯಾಯಧೀಶನಾದ ಭಗವಂತನ ಮಹಿಮೆಯನ್ನು ಈ ಮಹಿಯ ನ್ಯಾಯಲಯದ ಮುಂದೆ ವಿಷ್ಣುಸಹಸ್ರನಾಮದ ಮುಖೇನ ಭಿತ್ತರಿಸಿದರು.

ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್ | ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದಃ||ರೋಗ ಪೀಡಿತನು ರೋಗದಿಂದ ಮುಕ್ತನಾಗಿ ಆರೋಗ್ಯ ಪಡೆಯುತ್ತಾನೆ, ಸೆರೆಯಲ್ಲಿರುವವನು ಬಿಡುಗಡೆ ಪಡೆದಾನು. ಹೆದರಿಕೊಂಡವನು ಭಯದಿಂದ ಪಾರಾದನು, ತೊಂದರೆಗೊಳಗಾದವ ತೊಂದರೆಯಿಂದ ಪಾರಾದಾನು .

ಅಪಾಯ ಕೋಟಿಗಳಿಗೆ ಉಪಾಯ ಒಂದೇ – ಹರಿನಾಮ – ಶ್ರೀ ವಿಷ್ಣು ಸಹಸ್ರ ನಾಮ
(ಇಷ್ಟಾರ್ಥ ಸಿದ್ಧಿಗಾಗಿ ಮಂತ್ರಗಳು)

ಉದ್ಯೋಗ ಪ್ರಾಪ್ತಿಗಾಗಿ:
ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ | ಪರರ್ಧಿ: ಪರಮಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷಣಃ || (೪೨ನೇ ಶ್ಲೋಕ)

ದಾರಿದ್ರ್ಯನಾಶನ, ಧನಪ್ರಾಪ್ತಿಗೆ:
ವಿಸ್ತಾರಃ ಸ್ಥಾವರಃ ಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ | ಅರ್ಥೋನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ ||(೪೬ನೇ ಶ್ಲೋಕ)

ಐಶ್ವರ್ಯ ಪ್ರಾಪ್ತಿಗೆ:
ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ | ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ || (೬೫ನೇ ಶ್ಲೋಕ)

ವಿದ್ಯಾ ಪ್ರಾಪ್ತಿಗೆ:
ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃತ್ | ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ || (೮೦ನೇ ಶ್ಲೋಕ)

ಸಂತಾನ ಪ್ರಾಪ್ತಿಗೆ:
ಅಣುರ್ಬೃಹತ್ ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ | ಅಧೃತಃ ಸ್ವಧೃತಃ ಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ || (೯೦ನೇ ಶ್ಲೋಕ)

ಸರ್ವ ರೋಗ ನಿವಾರಣೆಗೆ:
ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ | ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮ ಮೃತ್ಯುಜರಾತಿಗಃ || (೧೦೩ನೇ ಶ್ಲೋಕ)

ಪಾಪ ನಾಶನಕ್ಕೆ:
ಆತ್ಮ ಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ | ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ || (೧೦೬ನೇ ಶ್ಲೋಕ)

ಸುಖ ಪ್ರಸವಕ್ಕೆ:
ಶಂಖಭೃನ್ನಂದಕೀ ಚಕ್ರೀ ಶಾಙ್ಗ೯ಧನ್ವಾ ಗದಾಧರಃ | ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ || (೧೦೭ನೇ ಶ್ಲೋಕ)

ಈ ಮೇಲಿನವು ಕೆಲವು ಉದಾಹರಣೆ ಮಾತ್ರ. ಇನ್ನು ಅನುಸಂಧಾನದಿಂದ ಪ್ರತಿನಿತ್ಯವೂ, ಸಂಸಾರದ ಎಲ್ಲರೂ ದಿನಕ್ಕೋಮ್ಮೆಯಾದರೂ ಒಟ್ಟಾಗಿ, ಶುಚಿರ್ಭೂತರಾಗಿ ದೇವರ ಮುಂದೆ ಕುಳಿತು ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರವನ್ನು ಪಠಣಮಾಡುವುದರಿಂದ ಬಹಳ ಒಳಿತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: DrGururajPoshettihalliKannada News WebsiteLatestNewsKannadaShri Vishnu Sahasranamamಆಧ್ಯಾತ್ಮಿಕ ಲೇಖನಡಾ_ಗುರುರಾಜಪೋಶೆಟ್ಟಿಹಳ್ಳಿಧಾರ್ಮಿಕ ಲೇಖನವಿಷ್ಣು ಸಹಸ್ರನಾಮ
Share219Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವಿಷ್ಣು ಸಹಸ್ರನಾಮದ ಪಠಿಸಿದರೆ ಮಾತ್ರವಲ್ಲ, ಕೇಳಿದರೂ ಸಹ ಎಂತಹ ಪ್ರಯೋಜವಿದೆ ಗೊತ್ತಾ?

Next Post

ಅನಾರೋಗ್ಯದಿಂದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸಾವು

kalpa News

kalpa News

Next Post
ಅನಾರೋಗ್ಯದಿಂದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸಾವು

ಅನಾರೋಗ್ಯದಿಂದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸಾವು

Leave a Reply Cancel reply

Your email address will not be published. Required fields are marked *

No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL