ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರೈತ ದೇಶದ ಬೆನ್ನೆಲುಬು ಅಂತಾ ಹೇಳ್ತಾರೆ ಅದು ಸತ್ಯ! ಆದರೆ ಆತನ ಬೆನ್ನೆಲುಬಿಗೆ ಊನು ಮಾಡೋದು ಯಾಕೆ?
ಪ್ರತಿ ವರ್ಷ ಡಿ.23 ರಂದು ರೈತರ ದಿನಾಚರಣೆ ಆದರೆ ವಿಪರ್ಯಾಸವೆಂದರೆ ಅದು ಎಷ್ಟೋ ಜನಕ್ಕೆ ಗೊತ್ತಿಲ್ಲ ಅವನಿಗಾಗಿ ಒಂದು ದಿನ ಮೀಸಲಿದೆ ಅಂತ, ಆತ ನಿಸ್ವಾರ್ಥ ಸೇವೆಯ ಹೃದಯವಂತ ಬೆಳೆಗೆ ಜೀವ ಕೊಡುವ ಜನ್ಮದಾತ! ಏನೆಂದು ಬರೆದರು ಇದು ಬಿಳಿಯ ಹಾಳೆಯಾಗಿಗೆ ಉಳಿದವು. ಆತ ಅನ್ನ ಅನ್ನೊ ಅಮೃತ ಕೊಟ್ಟರು ಕೂಡಾ ಅವನಿಗೆ ಉಳಿದಿದ್ದು ಮಾತ್ರ ವಿಷ ದುಡಿಯುವ ರೈತನ ಯಾತನೆಯ ಕೇಳುವವರಿಲ್ಲ ಆತ ಅದೆಷ್ಟೇ ದುಡಿದರೂ ಅವನ ಕೈ ಬರಿಗೈ ಆಗಿಯೇ ಉಳಿಯುತ್ತದೆ.
ಕೊಳೆತ ಬೆಳೆಯ ಸಾಲದ ಶೂಲವಾವನ ಹೆಗಲಿಗೆ ಬೇತಾಳನ ಹಾಗೆ ಬೆನ್ನಿಗೆರುತ್ತಲೇ ಇರುತ್ತದೆ. ರೈತ ಗಂಭೀರವಾಗಿಯಾದರು ಇರಲಿ ನೋವಿನಿಂದ ನರಳುತ್ತಾ ಆದರು ಇರಲಿ ಆದರೆ ಇತನ ಬಗ್ಗೆ ಮಾತ್ರ ಯಾರೇ ಆಗಲಿ ಅಥವಾ ಯಾವುದೇ ರಾಜಕಾರಣಿಗಳು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆಲ್ಲಾ ಆತನ ನೆನಪಾಗೋದು ಮಾತ್ರ ಚುನಾವಣೆ ಮುಂದಿರುವಾಗ ಮತ ಸೆಳೆಯುವುದಕ್ಕೆ ಆತನಿಗೆ ಭರವಸೆಯ ಬುತ್ತಿ ಕಟ್ಟಿ ಅಂಧಕಾರದಲ್ಲಿ ಮುಳುಗಿಸಿ ತಾವು ಗೆದ್ದ ನಂತರ ಅಹಂಕಾರದ ಅಟ್ಟಕ್ಕೆ ಏರುತ್ತಾರೆ. ಆಗ ಯಾವುದೇ ರೈತ ಜನರು ನೆನಪಿನಲ್ಲಿ ಇರುವುದಿಲ್ಲ. ತಾವು ತಮ್ಮ ಕುಟುಂಬದ ಜನರು ಎಂಬ ಸ್ವಾರ್ಥ ಸಂತೆಯಲ್ಲಿ ತೇಲಾಡುತ್ತಿರುತ್ತಾರೆ.
ಜಗತ್ತು ಜೀವಂತವಾಗಿ ಇದೇ ಅಂದರೆ ಅದು ಆತನ ಶ್ರಮ ರೈತ ಹಾಕಿದ ಭಿಕ್ಷೆ. ನಿಮ್ಮದು ಅರಮನೆಯೇ ಇರಲಿ ಗುಡಿಸಲೇ ಇರಲಿ ಹಸಿವಾದಾಗ ನೀವು ತಿನ್ನೋದು ನಿಮ್ಮ ಹತ್ತಿರ ಇರೋ ರೊಕ್ಕ ಚಿನ್ನವನ್ನಲ್ಲ ಅನ್ನವನ್ನು..!
ಸಾಲಸೂಲ ಮಾಡಿ ಬೀಜ ಬಿತ್ತಿರುತ್ತಾನೆ. ಆದರೆ ಬೆಳೆ ಒಂದಿಷ್ಟು ತಕ್ಕ ಮಟ್ಟಿಗೆ ಬಂದಿರುವಷ್ಟರಲ್ಲಿ ಗೊಬ್ಬರದ ಸಮಸ್ಯೆ. ಅದಕ್ಕಾಗಿ ಅಲೆದು ಆತ ಹಾಕಿರೋ ಚಪ್ಪಲಿ ಸವಿತಾವ ಹೊರತು ಗೊಬ್ಬರ ಸಿಗಲ್ಲ ಇದರ ಬಗ್ಗೆ ಯಾವ ಸರ್ಕಾರ ಕೂಡಾ ತಲೆ ಕೆಡಿಸಿಕೊಳ್ಳುವುದಿಲ್ಲ ಯಾಕಂದ್ರೆ ಅದು ಅವರ ಮನೆಯಲ್ಲಿ ಆಗಿರೋ ತೊಂದರೆ ಅಲ್ವಲ್ಲ? ಕೊನೆಗೂ ಹೇಗೋ ಗೊಬ್ಬರ ಸಿಕ್ತು ಅಂದುಕೊಂಡು ಅದನ್ನು ಹಾಕಿ ಬೆಳೆನೇ ತೆಗಿಯೋ ಹಂತಕ್ಕೆ ಬಂದಿರುತ್ತಾನೆ. ಆದರೆ ಮಳೆ ವಿಪರೀತ ಆದರೆ ನಾಶ ಮುಂಗಾರು ಮಳೆ ಬಂದರೆ ಆತನ ಬೆಳೆ ಬಂಗಾರ ಅವನ ಮುಖದಲ್ಲಿ ಕಳೆ.
ಆತನ ಬೆಳೆ ಚೆನ್ನಾಗಿ ಬರುತ್ತಿದೆ ಕನಸುಗಳು ಕನವರಿಕೆಗಳು ಮತ್ತೆ ಚಿಗುರೊಡೆದು ಹಚ್ಚ ಹಸಿರಾಗಿರುತ್ತವೆ. ತನ್ನ ಮೈಮೇಲೆ ಹರಿದು ತ್ಯಾಪೆ ಹಚ್ಚಿದ ಬಟ್ಟೆಗಳೇ ಇರಲಿ ಮಗಳು ವಯಸ್ಸಿಗೆ ಬಂದಳು ಮಗಳಿಗೆ ಒಂದು ವರ ನೋಡಿ ಮುತ್ತಿನಂತ ಮನೆಗೆ ಕಳುಹಿಸಬೇಕೆನ್ನೋ ಆಸೆ ಆತನ ಮನದಲ್ಲಿ ಸುಗ್ಗಿಯ ಹಿಗ್ಗಲಿ ಮೈ ಮರೆತು ಮಾರುಕಟ್ಟೆಗೆ ಬಂದು ಬೀಳುವುದರೊಳಗಾಗಿ ಆತನ ಸಾಲ ಬೆಳೆದ ಬೆಳೆಗಿಂತ ಮುಗಿಲೆತ್ತರಕ್ಕೆ ಸಾಗುತ್ತಿರುತ್ತದೆ. ಆದರೆ ಆತನ ತಾಳ್ಮೆನೇ ಆತನ ಕಷ್ಟಕ್ಕೆ ಆಗ ಔಷಧೀಯ ರೂಪವಾಗಿರುತ್ತದೆ.
ಆತ ನಮ್ಮೆಲ್ಲರ ಹಸಿದ ಹೊಟ್ಟೆಗೆ ಅನ್ನ ಕೊಡೊ ಅನ್ನದಾತ (ದೇವರು) ಆತನು ಅಂಬಲಿ ಕುಡಿದು ಜೋಡೆತ್ತು ನೇಗಿಲು ಹಿಡಿದು ಬಿಸಿಲಿನ ವಿನಾಯ್ತಿ ಇರದೇ ಹಗಲು ರಾತ್ರಿಗಳ ಲೆಕ್ಕನೂ ಸಿಗದೇ ಬೆವರು ಹರಿಸಿ ಶ್ರಮ ಪಟ್ಟರೆ ಮಾತ್ರ ನಮಗೆಲ್ಲ ಮೃಷ್ಟಾನ್ನ ಇಲ್ಲದಿದ್ದರೆ ಮಣ್ಣು.
ನಮ್ಮ ಸರ್ಕಾರ ಬಂದರೇ ಸಾಲ ಮನ್ನಾ ಅಂತಾ ಘೋಷಣೆ ಕೂಗುವ ಪಕ್ಷಗಳು ಅವರು ಮನ್ನಾ ಮಾಡಿದ ಸಾಲ ಜೀತ ಪದ್ದತಿಯ ಸಾಲವಾಗಿರುತ್ತದೆ ಹೊರತು ಜೀತ ಮುಕ್ತವಲ್ಲ. ಎಲ್ಲರೂ ರೈತರಿಗೆ ಗೌರವ ಕೊಡಿ ಇದು ನನ್ನ ಕಳಕಳಿಯ ವಿನಂತಿ.
ನಾನು ಹೆಮ್ಮೆಯಿಂದ ತಲೆಯೆತ್ತಿ ಹೇಳುತ್ತೇನೆ ನಮ್ಮದು ರೈತ ಕುಟುಂಬ ನಾನು ರೈತನ ಮಗನೆಂದು…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post