ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ಲಾಕ್ ಡೌನ್ ಎಲ್ಲ ವರ್ಗವನ್ನೂ ಸಂಕಷ್ಟಕ್ಕೆ ದೂಡಿರುವಂತೆಯೇ ಕಲ್ಲಂಗಡಿ ಬೆಳೆದ ರೈತರೂ ಸಹ ತಾವು ಬೆಳೆದ ಹಣ್ಣನ್ನು ಮಾರಲಾಗದೇ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿತ್ತು. ಆದರೆ, ಈ ವಿಚಾರವನ್ನು ಅರಿತ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಕುಟುಂಬಸ್ಥರು ಈ ರೈತರ ನೆರವಿಗೆ ಧಾವಿಸಿರುವುದು ಈಗ ಇಡಿಯ ರಾಜ್ಯಕ್ಕೇ ಮಾದರಿ ಕಾರ್ಯವಾಗಿದೆ.
ಸಂಕಷ್ಟದಲ್ಲಿರುವ ರೈತರ ನೆರವಾಗುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ರೈತರು ಬೆಳೆದ ಸುಮಾರು 70 ಸಾವಿರ ಕಲ್ಲಂಗಡಿ ಹಣ್ಣುಗಳನ್ನು ಸಚಿವ ಈಶ್ವರಪ್ಪ ಹಾಗೂ ಅವರ ಕುಟುಂಬಸ್ಥರು ವೈಯಕ್ತಿಕವಾಗಿ ಖರೀದಿ ಮಾಡಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಉಚಿತವಾಗಿ ಹಂಚಿದ್ದಾರೆ.
ರೈತರಿಂದ ನ್ಯಾಯಯುತ ಬೆಲೆಯಲ್ಲಿ ಒಟ್ಟಾರೆ 70 ಸಾವಿರಕ್ಕೂ ಅಧಿಕ ಹಣ್ಣುಗಳನ್ನು ಖರೀದಿ ಮಾಡಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿರುವ 35 ವಾರ್ಡ್‌ಗಳ ಪೇಜ್ ಪ್ರಮುಖರ ಮೂಲಕ ಪ್ರತಿ ಮನೆ ಮನೆಗೂ ಸಹ ಹಣ್ಣಗಳನ್ನು ಉಚಿತವಾಗಿ ಹಂಚಿದ್ದಾರೆ.
ಇಂದು ಬೆಳಗ್ಗೆ ಸಾಂಕೇತಿಕವಾಗಿ ಕೆಲವು ಜನರಿಗೆ ಕಲ್ಲಂಗಡಿ ವಿತರಣೆ ಮಾಡಿದ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಅವರ ಪುತ್ರ ಜಿಲ್ಲಾ ಪಂಚಾಯತ್ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯ ಕೆ.ಈ. ಕಾಂತೇಶ್ ಅವರು ವಾಹನಗಳ ಮೂಲಕ ಪ್ರತಿ ವಾರ್ಡ್‌ಗೂ ಹಣ್ಣುಗಳನ್ನು ಕಳುಹಿಸಿಕೊಟ್ಟರು.
ಕೆ.ಎಸ್. ಈಶ್ವರಪ್ಪ, ಅವರ ಪುತ್ರ ಕೆ.ಈ. ಕಾಂತೇಶ್ ಹಾಗೂ ಕುಟುಂಬಸ್ಥರು ಈ ಕಾರ್ಯಕ್ಕೆ ಸಾಥ್ ನೀಡಿದ್ದು, ಇವರ ಈ ಕೆಲಸದಿಂದ ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಮಾತ್ರವಲ್ಲ, ಬೇಸಿಗೆಯ ಸೆಖೆಯ ವೇಳೆ ಪ್ರತಿ ಮನೆಗೂ ಉಚಿತ ಹಣ್ಣು ನೀಡಿರುವುದು ಸಾರ್ವಜನಿಕರೂ ಸಹ ಸಂತಸಗೊಂಡಿದ್ದಾರೆ.
ಶಿವಮೊಗ್ಗದ ಎಫ್.ಪಿ.ಯೆ ಆಸ್ಪತ್ರೆಯ ನರ್ಸ್ ಮತ್ತು ಆಶಾ ಕಾರ್ಯಕರ್ತೆಯ ಕುಟುಂಬಗಳಿಗೆ ಆಹಾರ ಪದಾರ್ಥ ಹಂಚಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post