ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸಾಮಾನ್ಯವಾಗಿ ಜೀವಮಾನದಲ್ಲಿ ದಶಕಗಳ ಕಾಲ ಯಾವುದಾದರೊಂದು ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿದ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ #HonoraryDoctorate ನೀಡಿ ಗೌರವಿಸುವುದನ್ನು ನೀವು ಕಂಡಿರುತ್ತೀರಿ. ಆದರೆ, ಸಾಂಸ್ಕೃತಿಕ ನಗರಿಯ ಈ ವಿಶ್ವ ದಾಖಲೆಗಳ ಸರದಾರ, ಸಾಧನೆಗಳ ಗಣಿಯಾಗಿರುವ 7 ವರ್ಷದ ಪೋರನನ್ನು `ಗೌರವ ಡಾಕ್ಟರೇಟ್’ #WorldRecord ಅರಸಿಬಂದಿರುವುದು ಕರುನಾಡೇ ಹೆಮ್ಮೆ ಪಡುವಂತಹ ವಿಚಾರವಾಗಿದೆ.
ಹೌದು… 30 ನಿಮಿಷಗಳಲ್ಲಿ 150 ಶ್ಲೋಕಗಳನ್ನು ಪಠಿಸಿ, Elite World Record, Asia Records Academy ಹಾಗೂ India Records Academy ವಿಶ್ವ ದಾಖಲೆಯನ್ನು ನಿರ್ಮಿಸಿದ ಪೃಥು ಪಿ. ಅದ್ವೈತ್’ಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಯಾರು ಈ ಡಾ.ಪೃಥು ಪಿ. ಅದ್ವೈತ್?
ಚಾಮರಾಜನಗರದ #Chamarajanagar ಕೂಡ್ಲೂರು ಗ್ರಾಮದ ಸ್ಥಳ ಪುರೋಹಿತರಾಗಿದ್ದ ಕೂಡ್ಲೂರು ಗುಂಡಪ್ಪನವರ ಕುಟುಂಬಸ್ಥರಾದ ಪುನೀತ್ ಜಿ., ಪೂಜಾ ದಂಪತಿಯ ಪುತ್ರ ಪೃಥು.
2017ರ ಜನವರಿ 21ರಂದು ಮೈಸೂರಿನಲ್ಲಿ ಜನಿಸಿದ ಪೃಥು, ಸದ್ಯ ಸಾಂಸ್ಕೃತಿಕ ನಗರಿಯ ಪೂರ್ಣ ಚೇತನ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರುವ ಏಳು ವರ್ಷದ ಪೃಥು ಹಲವು ಪ್ರತಿಭೆಗಳ ಆಗರವಾಗಿದ್ದಾನೆ.
ಕೇವಲ ಧಾರ್ಮಿಕ ಆಸಕ್ತಿ ಮಾತ್ರವಲ್ಲದೆ ಶಿಕ್ಷಣದಲ್ಲೂ ಪೃಥು ಒಂದು ಮತ್ತು ಎರಡನೇ ತರಗತಿಯಲ್ಲಿ ಶೇ. 95 ರಷ್ಟು ಅಂಕಗಳನ್ನು ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ International Science Olympiad Foundation (SOF) ನ SOF ಪರೀಕ್ಷೆಗಳಲ್ಲಿ ಭಾಗಿಯಾಗಿ ಸತತ ಎರಡು ವರ್ಷದಿಂದ ಶಾಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.
ಇಷ್ಟು ಚಿಕ್ಕ ವಯಸ್ಸಿನಲ್ಲೇ ತಾನು ಕೂಡಿಟ್ಟ ಗೋಲಕದ ಹಣವನ್ನು ಅಯೋಧ್ಯಾ ಶ್ರೀ ರಾಮಮಂದಿರದ ನಿರ್ಮಾಣದ ಸಂದರ್ಭದಲ್ಲಿ ಶ್ರೀ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್’ಗೆ ಸ್ವಯಂ ಪ್ರೇರಣೆಯಿಂದ ಕಾಣಿಕೆಯಾಗಿ ನೀಡಿದ್ದಾರೆ.
ಪ್ರತಿ ವರ್ಷ ತನ್ನ ಹುಟ್ಟುಹಬ್ಬದಂದು ತನ್ನ ವಯಸ್ಸಿನಷ್ಟು ಗಿಡಗಳನ್ನು ನೆಟ್ಟು ಅದನ್ನು ಪೋಷಣೆ ಮಾಡುವುದು ಇವರ ಹುಟ್ಟುಹಬ್ಬ ಆಚರಿಸುವ ಪದ್ದತಿಯಾಗಿರುವುದು ಮಾದರಿಯಾಗಿದೆ.
ಈ ಬಾಲಕನ ಸಾಧನೆಗಳನ್ನು ಗುರುತಿಸಿ ಪೇಜಾವರ ಮಠದ ಪರಮಪೂಜ್ಯ ಶ್ರೀಶ್ರೀ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಮೈಸೂರಿನ ಆದರ್ಶ ಸೇವಾ ಸಂಘ, ಬೆಂಗಳೂರಿನ ವಿಶ್ವವಿಪ್ರತ್ರಯೀ ಪರಿಷತ್, ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ, ಶಾರದಾ ವಿಶ್ವಭಾವೈಕ್ಯ ಆಶ್ರಮ, ಮೈಸೂರಿನ ಮೂಕಾಂಬಿಕ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ, ಮೈಸೂರಿನ ವಿಶ್ವ ಹಿಂದೂ ಪರಿಷತ್, ಬೆಂಗಳೂರಿನ ಎಸ್’ಜಿಎಸ್ ವಸತಿ ಸಂಕೀರ್ಣ, ಬಾದಾಮಿಯ ಬನಶಂಕರಿ ದೇವಸ್ಥಾನ, ಮಂಡ್ಯದ ವ್ಯಾಸರಾಯಮಠದಲ್ಲಿ ಮಂಡ್ಯ ಜಿಲ್ಲಾ ಬ್ರಾಹ್ಮಣ ಸಂಘ, ಮೈಸೂರಿನ ಸಂಧ್ಯಾ ಸುರಕ್ಷ ಟ್ರಸ್ಟ್, ಬೆಂಗಳೂರಿನ ಪಾರಿಜಾತ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರಿ ಜನರಲ್ ಕೆ. ಅರವಿಂದ್ ಕಾಮತ್, ಶಾಸಕರಾದ ಜಿ.ಟಿ. ದೇವೇಗೌಡ, ಶಾಸಕ ಟಿ.ಎಸ್. ಶ್ರೀವತ್ಸ, ರಾಜ್ಯ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರದ ಜ.ಎನ್. ಕುಮಾರ್, ಚಲನಚಿತ್ರ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಸೇರಿದಂತೆ ಗಣ್ಯಾತಿಗಣ್ಯರು ಅಸಾಮಾನ್ಯ ಬಾಲಕ ಪೃಥು ಪಿ. ಅದ್ವೈತ್ ಅವರನ್ನು ಸನ್ಮಾನಿಸಿ, ಗೌರವಿಸಿದ್ದಾರೆ.
ಸಾಧನೆಗಳ ಸರದಾರ
- 30 ನಿಮಿಷದಲ್ಲಿ 150 ಶ್ಲೋಕಗಳನ್ನು ಪಠಿಸಿ Elite World Record, Asia Records Academy ಹಾಗೂ India Records Academy ವಿಶ್ವ ದಾಖಲೆ ನಿರ್ಮಾಣ.
- Most Shlokas Recited in 30 Minutes by an individual (Minor-Male)ಎಂಬ ದಾಖಲೆಯನ್ನು ವಿಶ್ವದಲ್ಲೇ ಪ್ರಥಮ ಬಾರಿಗೆ ನಿರ್ಮಿಸಿದ ಕೀರ್ತಿ ಪೃಥು ಪಿ. ಅದ್ವೈತ್ ಅವರಿಗೆ ಸಲ್ಲುತ್ತದೆ.
- 2023ರಲ್ಲಿ ಪರಮಪೂಜ್ಯ ಪೇಜಾವರ ಶ್ರೀಗಳು ಮೈಸೂರಿನಲ್ಲಿ ಚಾತುರ್ಮಾಸದಲ್ಲಿದ್ದ ಸಂದರ್ಭದಲ್ಲಿ ಅವರ ಬಳಿ ತಾನು ಕಲಿತ ಮಂತ್ರ ಹಾಗೂ ಸ್ತೋತ್ರಗಳನ್ನು ಹೇಳಿದ್ದನು. ಆಗ ಶ್ರೀಗಳು ಮತ್ತಷ್ಟು ಅಭ್ಯಾಸ ಮಾಡು ನಿನಗೆ ಯಶಸ್ಸು ಸಿಗುತ್ತದೆ ಎಂದು ಹೇಳಿದ್ದು ವಿಶೇಷ. ಅದರಿಂದ ಪ್ರೇರಣೆ ಪಡೆದ ಪೃಥು ನಿರಂತರ ಮಂತ್ರಪಠಣ ಮಾಡುತ್ತಿದ್ದ. ಪೃಥುರವರ ಆಸಕ್ತಿ ಗಮನಿಸಿ ಮೈಸೂರಿನ ಪೂರ್ಣಚೇತನ ಶಾಲೆ ವಿಶ್ವದಾಖಲೆ ಮಹೋತ್ಸವದಲ್ಲಿ ಭಾಗವಹಿಸಿಸಲು ಅವಕಾಶ ನೀಡಿತು. ಅವಕಾಶವನ್ನು ಸದುಪಯೋಗ ಪಡೆದುಕೊಂಡು ಮೂರು ವಿಶ್ವದಾಖಲೆ ನಿರ್ಮಿಸಿದ್ದಾನೆ. ವಿಶ್ವದಾಖಲೆ ನಿರ್ಮಿಸಿದ ನಂತರ ಸ್ವತಃ ಪರಮಪೂಜ್ಯ ಪೇಜಾವರ ಶ್ರೀಗಳು ದೂರವಾಣಿಯ ಮೂಲಕ ಪೃಥುವನ್ನು ಅಭಿನಂದಿಸಿರುವುದು ಮತ್ತೊಂದು ವಿಶೇಷ.
- ಪೃಥುವಿನ ವೇದಾಸಕ್ತಿ ಗಮನಿಸಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆದರ್ಶ ಸೇವಾ ಸಂಘ ಹಾಗೂ ವಿಶ್ವ ವಿಪ್ರತ್ರಯೀ ಪರಿಷತ್ ಪೃಥುವಿಗೆ 2023ರಲ್ಲಿ ಆದರ್ಶ ಬಾಲ ಪ್ರತಿಭಾರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
- 2024 ಆಗಸ್ಟ್ ತಿಂಗಳಲ್ಲಿ ಮೈಸೂರಿನ ಮೂಕಾಂಬಿಕ ಸಮೃದ್ಧಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿಯು ಬಾಲ ಸ್ತೋತ್ರ ಕಲಾರತ್ನ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
- Wiz Kids Carnival ಸಂಸ್ಥೆಯು ಜುಲೈ-2024ರ ಅಖಿಲ ಭಾರತ ಮಟ್ಟದ ಶ್ಲೋಕಪಠಣ ಸ್ಪರ್ಧೆಯಲ್ಲಿ ಭಾಗವಹಿಸಿ `ಶ್ಲೋಕ ಸ್ಕಾಲರ್’ ಎಂಬ ಪ್ರಶಸ್ತಿ ಪಡೆದಿದ್ದಾರೆ.
- ವಿಶ್ರಾಂತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಚಬ್ಬಿ ಅವರು Inspire Awards and Summit ನ Karnataka Glory Awards-2024 ರಲ್ಲಿ Rising Star, “Excellence in Best Talented Rising Star of Karnataka” ಎಂಬ ಬಿರುದು ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
- ಮೈಸೂರಿನ ಸಂಧ್ಯಾ ಸುರಕ್ಷಾ ಟ್ರಸ್ಟ್ ಹಾಗೂ ಬೆಂಗಳೂರಿನ ಪಾರಿಜಾತ ಟ್ರಸ್ಟ್ 2024ರ ನವೆಂಬರ್’ನಲ್ಲಿ ನಡೆಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಾಲ ಕರುನಾಡ ರತ್ನ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.
- ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ – 2024 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
- 2022ರಲ್ಲಿ Alpha International School ನಡೆದ Stylish Kids ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.
- ಮೈಸೂರಿನ ಸ್ಥಳೀಯ ಸುದ್ದಿವಾಹಿನಿಯ ನೃತ್ಯದ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ.
- ಇವರು ಶಿವರಾತ್ರಿ ದಿನ ತಮ್ಮ ಮನೆಯಲ್ಲಿ ಮಾಡಿದ ಶಿವನ ಅಭಿಷೇಕವು ಶಂಕರ ಟಿವಿಯಲ್ಲಿ ಪ್ರಸಾರವಾಗಿದೆ.
- ಇಷ್ಟು ಚಿಕ್ಕ ವಯಸ್ಸಿನಲ್ಲಿ ಹೀಗೆ ಸಾಲು ಸಾಲು ಸಾಧನೆಗಳ ಮೆಟ್ಟಿಲನ್ನು ಏರುತ್ತಿರುವ ಪೃಥುವನ್ನು World Culture and Environment protection commission approved by Govt of India, Doctorate in Child Youth Inspiration ದಿಂದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದು, 7ನೇ ವಯಸ್ಸಿನಲ್ಲಿಯೇ ಈ ಸಾಧನೆ ಮಾಡಿ ಮತ್ತೊಂದು ಗರಿಯನ್ನು ತನ್ನ ಮುಡಿಗೆ ಸೇರಿಸಿಕೊಂಡಿದ್ದಾನೆ ಈ ಪ್ರತಿಭೆ.
ಇಂತಹ ಬಾಲಪ್ರತಿಭೆಯನ್ನು ಇಂದು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ. ಇವರ ಜೀವನವು ಮತ್ತಷ್ಟು ಕೀರ್ತಿಗಳೊಂದಿಗೆ ಉಜ್ವಲಿಸಿ ಇವರ ಕೀರ್ತಿಯು ಬೆಳಗಲಿ ಇಂದು ಪ್ರಾರ್ಥಿಸುತ್ತೇವೆ.
ರಾಜ್ಯ, ದೇಶದ ಮಕ್ಕಳಿಗೆ ಮಾದರಿಯಾಗಿರುವ ಪೃಥು ಪಿ. ಅದ್ವೈತ್ ಅವರನ್ನು ಕಲ್ಪ ಮೀಡಿಯಾ ಹೌಸ್ ಮನದುಂಬಿ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post