ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮಿಸ್ ಇಂಡಿಯಾ ವಿಜೇತರ ಪಟ್ಟಿಯಲ್ಲಿ ಒಬಿಸಿ ಅಥವಾ ಬುಡಕಟ್ಟು ಹಾಗೂ ದಲಿತ ಸಮುದಾಯದ ಮಹಿಳೆ ಇಲ್ಲ ಎಂಬ ನೀಡಿರುವ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಕೇಂದ್ರ ಸಚಿವ ಕಿರಣ್ ರಿಜಿಜು ಟಕ್ಕರ್ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿದ ರಿಜಿಜು, ರಾಹುಲ್ ಗಾಂಧಿ ಅವರು ಮಿಸ್ ಇಂಡಿಯಾ ಸ್ಪರ್ಧೆಗಳು, ಚಲನಚಿತ್ರಗಳು ಹಾಗೂ ಕ್ರೀಡೆಗಳಲ್ಲೂ ಸಹ ಮೀಸಲಾತಿ ಬಯಸಿದ್ದಾರೆ ಎಂದು ಕುಟುಕಿದ್ದಾರೆ.
ರಾಷ್ಟ್ರವ್ಯಾಪಿ ಜಾತಿಗಣತಿಗೆ ಸಂಬಂಧಿಸಿದಂತೆ ರಾಹುಲ್‌ಗಾಂಧಿ ಅವರು ತಮ್ಮ ಹೊಸ ಟೀಕೆಗಳೊಂದಿಗೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಸರ್ಕಾರಗಳು ಮಿಸ್ ಇಂಡಿಯಾ ಅಭ್ಯರ್ಥಿಗಳನ್ನು, ಒಲಿಂಪಿಕ್ಸ್’ಗೆ ಕ್ರೀಡಾಪಟುಗಳನ್ನು ಅಥವಾ ಚಲನಚಿತ್ರಗಳಿಗೆ ನಟರನ್ನು ಆಯ್ಕೆ ಮಾಡುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ಐಎಎಸ್, ಐಪಿಎಸ್, ಐಎಫ್’ಎಸ್ ಸೇರಿ ಎಲ್ಲಾ ಉನ್ನತ ಸೇವೆಗಳ ನೇಮಕಾತಿಯಲ್ಲಿ ಮೀಸಲಾತಿಯನ್ನು ಬದಲಾಯಿಸಲು ಸುಪ್ರೀಂಕೋರ್ಟ್’ಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟಪಡಿಸಿದ್ದಾರೆ.
Also read: ಶಿಮುಲ್ ಚುನಾವಣೆ | ಅಧ್ಯಕ್ಷರಾಗಿ ವಿದ್ಯಾಧರ್, ಉಪಾಧ್ಯಕ್ಷರಾಗಿ ಚೇತನ್ ಆಯ್ಕೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post