ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸಪೇಟೆ: ಪ್ರತಿ ವರ್ಷದಂತೆ, ಈ ವರ್ಷವೂ ಸಹ ಹೊಸಪೇಟೆಯ ಅಮರಾವತಿ ಕಾಲೋನಿಯಲ್ಲಿರುವ ಕೆಎಫ್’ಐಎಲ್ ಆಫೀಸರ್ ಲೇಡಿಸ್ ಕ್ಲಬ್ ಆವರಣದಲ್ಲಿ ಸಂಕ್ರಾಂತಿ ಪ್ರಯುಕ್ತ ಹಳದಿ ಕುಂಕುಮ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಸದಸ್ಯರು ಒಟ್ಟಾಗಿ ಸೇರಿ ಹಳದಿ ಕುಂಕುಮ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸರ್ವ ಮಹಿಳಾ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಸಿರುಗುಪ್ಪದ ರಾಧಾ ಐರಣಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಈ ಸಂಧರ್ಭದಲ್ಲಿ ಮಹಿಳಾ ಸದಸ್ಯರುಗಳಿಗೆ ಅರಿಶಿನ ಕುಂಕುಮ ಮತ್ತು ಫಲ ತಾಂಬೂಲವನ್ನು ಲೇಡೀಸ್ ಕ್ಲಬ್ ವತಿಯಿಂದ ಹಂಚುವುದರ ಮೂಲಕ ಸಂಕ್ರಾಂತಿ ವಿಶೇಷ ಎಳ್ಳು ಬೆಲ್ಲವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳವುದರ ಮೂಲಕ ಸಂಕ್ರಾಂತಿಯನ್ನು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ರಾಧಾ ಐರಣಿ ಇವರು ಲಲಿತಾ ಸಹಸ್ರನಾಮದ ಮಹತ್ವ ಹಾಗೂ ಕುಂಕುಮಾರ್ಚನೆಯ ಮಹತ್ವದ ಬಗ್ಗೆ ಮಹಿಳಾ ಸದಸ್ಯರಿಗೆ ತಿಳಿಸಿಕೊಟ್ಟರು. ಶ್ರೀಮತಿ ಲಕ್ಷ್ಮೀನಾರಾಯಣ ರವರ ಮುಂದಾಳತ್ವದಲ್ಲಿ ಸಾಂಗವಾಗಿ ನೆರವೇರಿದರೆ,. ಸದಸ್ಯರಿಗೆ ಸಂಕ್ರಾಂತಿಯ ಶುಭಾಶಯಗಳನ್ನು ತಿಳಿಸುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯ ಮಾಡಲಾಯಿತು.
ಮಹಿಳಾ ಸದಸ್ಯರ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ನೀಲಾ ರಾಜೇಶ್, ಮಹೇಶ್ವರಿ ಕೋರಿ, ರಾಧಿಕಾ ರಮೇಶ್, ಶ್ರೀದೇವಿ ಚಂದ್ರಶೇಖರ್ ಜೋತಿ ಕೃಷ್ಣಮೂರ್ತಿ, ಸ್ವರ್ಣ ಚಕ್ರವರ್ತಿ, ಗೀತಾ ನಾಗರಾಜ್, ಶೈಲಜಾ ಗೋಣಿ, ಸರಿತಾ ಪರಶುರಾಮ್, ಸವಿತಾ ಜೋಷಿ , ದಿವ್ಯಾ ಗಿರೀಶ್, ಗೌರಿ ಜ್ಯೋಷಿ, ಭಾಗ್ಯ ಜಗದೀಶ್ ಇನ್ನಿತರ ಎಲ್ಲಾ ಸದಸ್ಯರುಗಳು ಭಾಗವಹಿಸಿದ್ದರು.
(ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ)
Get in Touch With Us info@kalpa.news Whatsapp: 9481252093
Discussion about this post