ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಲೋಕಸಭಾ ಚುನಾವಣೆಗೆ ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವ ಕೆ.ಎಸ್. ಈಶ್ವರಪ್ಪ ಅವರಿಗೆ ತೀರ್ಥಹಳ್ಳಿ ತಾಲೂಕು ಭೀಮನಕಟ್ಟೆಯ ಭೀಮಸೇತು ಮುನಿವೃಂದ ಮಠ #Bhimanakatte Bhimasethu Munivrunda Mutt ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ಬೆಂಬಲ ಸೂಚಿಸಿ, ನಾಮಪತ್ರ ಠೇವಣಿಗೆ ಒಂದು ಸಾವಿರ ರು.ಗಳನ್ನು ಆಶೀರ್ವಾದ ಪೂರ್ವಕವಾಗಿ ನೀಡಿದ್ಧಾರೆ.
ತೀರ್ಥಹಳ್ಳಿ ತಾಲೂಕು ಭೀಮನಕಟ್ಟೆಯ ಭೀಮಸೇತು ಮುನಿವೃಂದ ಮಠಕ್ಕೆ ಈಶ್ವರಪ್ಪ #Eshwarappa ಬೆಂಬಲಿಗರು ಭೇಟಿ ನೀಡಿದರು.

Also read: ದ್ವಿತೀಯ ಪಿಯು ಫಲಿತಾಂಶ | ಕ್ರೈಸ್ಟ್ ಕಿಂಗ್ ಅಭೂತಪೂರ್ವ ಸಾಧನೆ | ಎಂಟು ರ‍್ಯಾಂಕ್ ಮುಡಿಗೆ
ಯಾವ ಉದ್ದೇಶಕ್ಕಾಗಿ ಈಶ್ವರಪ್ಪ ಸ್ಪರ್ಧೆಗೆ ಮುಂದಾಗಿದ್ದಾರೆ ಎಂಬುದರ ಬಗ್ಗೆ ಬೆಂಬಲಿಗರು ಸಂಪೂರ್ಣ ಮಾಹಿತಿ ತಿಳಿಸಿದ ಬಳಿಕ ಸ್ವಾಮೀಜಿಯವರು ಈಶ್ವರಪ್ಪ ಅವರು ಸರಿಯಾದ ನಿರ್ಧಾರ ಕೈಗೊಂಡಿದ್ಧಾರೆ. ಈಶ್ವರಪ್ಪ ಹಿಂದುತ್ವ ಹಾಗೂ ಧರ್ಮದ ಪರವಾಗಿ ಹೋರಾಟ ಮಾಡಿದವರು. ಅಂತವರ ನಾಯಕತ್ವದ ಅಗತ್ಯತೆ ಇದೆ. ಅವರು ರಾಜಕಾರಣದಲ್ಲಿ ಇರಬೇಕು. ಅವರಿಗೆ ಅನ್ಯಾಯ ಆಗಬಾರದು ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post