ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಶಿವಮೊಗ್ಗ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಹಾಗೂ ತೀರ್ಥಹಳ್ಳಿಯಲ್ಲಿ ಸಿಆರ್’ಪಿಎಫ್ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಪಥಸಂಚಲನ ಮೂಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ದಾವಣಗೆರೆ ಪೂರ್ವವಲಯ ಉಪ ಪೊಲೀಸ್ ಮಹಾನಿರ್ದೇಶಕರಾದ ತ್ಯಾಗರಾಜನ್, ಎಸ್’ಪಿ ಜಿ.ಕೆ. ಮಿಥುನ್ ಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ ನಗರದಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.
ಎನ್.ಟಿ ರಸ್ತೆಯ ಅಂಬೇಡ್ಕರ್ ಹಾಸ್ಟೆಲ್’ನಿಂದ ಪ್ರಾರಂಭಿಸಿ ಎನ್’ಟಿ ರಸ್ತೆ ಮೂಲಕ ಸುಂದರಾಶ್ರಯ, ಓಟಿ ರಸ್ತೆ, ಎಎ ಸರ್ಕಲ್, ಎಸ್’ಎನ್ ಸರ್ಕಲ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಬಸವೇಶ್ವರ ದೇವಸ್ಥಾನ, ಸಿನಿಮಾ ರಸ್ತೆ, ತಿಮ್ಮಪ್ಪನ ಕೊಪ್ಪಲು, ಕೆಆರ್ ಪುರಂ ರಸ್ತೆ, ಕಿರಣ್ ಮೆಡಿಕಲ್ ಕ್ರಾಸ್, ವಿಜಯ ಗ್ಯಾರೇಜ್, ಲಕ್ಷ್ಮಿ ಟ್ರಾಕ್ಟರ್ ಶೋ ರೂಂ, ಜಿಎಸ್’ಕೆಎಂ ರಸ್ತೆ ಮುಖಾಂತರವಾಗಿ ಎನ್ ಟಿ ರಸ್ತೆಯ ಅಂಬೇಡ್ಕರ್ ಹಾಸ್ಟೆಲ್ ಬಳಿ ಮುಕ್ತಾಯವಾಯಿತು.
ರೂಟ್ ಮಾರ್ಚ್’ನಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭುಮರೆಡ್ಡಿ, ಐಪಿಎಸ್(ಪ್ರೊ) ಬಿಂದುಮಣಿ ಆರ್.ಎಸ್., ಪೊಲೀಸ್ ಉಪಾಧೀಕ್ಷಕ ಎಂ. ಸುರೇಶ್, ಶಿವಮೊಗ್ಗ – ಬಿ ಉಪ ವಿಭಾಗ, ಶಿವಮೊಗ್ಗ ನಗರದ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು, ಸಿಆರ್’ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ)ಯ ಅಧಿಕಾರಿ ಮತ್ತು ಸಿಬ್ಬಂಧಿಗಳು, ಕೆಎಸ್’ಆರ್’ಪಿ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ)ಯ ಅಧಿಕಾರಿ ಮತ್ತು ಸಿಬ್ಬಂದಿಗಳು, ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಸಿವಿಲ್ ಮತ್ತು ಡಿಎಆರ್’ನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ತೀರ್ಥಹಳ್ಳಿಯಲ್ಲೂ ರೂಟ್ ಮಾರ್ಚ್
ಪೊಲೀಸ್ ಉಪಾಧೀಕ್ಷಕ ಗಜಾನನ ವಾಮನ ಸುತರ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.
ತೀರ್ಥಹಳ್ಳಿ ಬಸ್ ನಿಲ್ದಾಣದಿಂದ ಪ್ರಾರಂಭಿಸಿ ಕೊಪ್ಪ ಸರ್ಕಲ್ ಮುಖಾಂತರ, ಗಾಂಧಿ ಚೌಕ್, ಬಾಳೆ ಬೈಲು, ಇಂದಿರಾನಗರ್, ಜಟ್ ಪಟ್ ನಗರ ಮಾರ್ಗವಾಗಿ ಬಂದು ಆಗುಂಬೆ ಮುಖ್ತ ರಸ್ತೆಯಲ್ಲಿ ಮುಕ್ತಾಯವಾಯಿತು.

ಸಿಆರ್’ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಶ್ರೀನಿವಾಸ್ ರಾವ್, ತೀರ್ಥಹಳ್ಳೀ ವಿಧಾನಸಭಾ ಕ್ಷೇತ್ರದ ಆರ್’ಒ ಮಲ್ಲಿಕಾರ್ಜುನ, ಮಾಳೂರು ವೃತ್ತ ಪೊಲೀಸ್ ವೃತ್ತ ನಿರೀಕ್ಷಕ ಪ್ರವೀಣ್ ನೀಲಮ್ಮನವರ್, ತೀರ್ಥಹಳ್ಳಿ ಪೊಲೀಸ್ ನಿರೀಕ್ಷಕ ಅಶ್ವಥ್ ಗೌಡ, ಕೇಂದ್ರ ಮೀಸಲು ಪೊಲೀಸ್ ಪಡೆಯ ಅಧಿಕಾರಿ, ಸಿಬ್ಬಂದಿಗಳು, ಉಪವಿಭಾಗದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















