ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ತೀರ್ಥಹಳ್ಳಿ (Thirthahalli) ತಾಲೂಕಿನಾದ್ಯಂತ ಭಾರಿ ಮಳೆಯ ಅಬ್ಬರ ಮುಂದುವರಿದಿದ್ದು, ಕೇಳೂರು ಗ್ರಾಮದಲ್ಲಿ ವೃದ್ಧರೊಬ್ಬರು ನದಿಯಲ್ಲಿ ತೇಲಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಆಗುಂಬೆ ಸಮೀಪದ ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಳೂರು ಗ್ರಾಮದ ನಿವಾಸಿ ರಾಮಪ್ಪ (62) ಅವರು ನಿನ್ನೆ ಸಂಜೆ ತೋಟಕ್ಕೆ ತೆರಳಿದ್ದು, ನಂತರದಿಂದ ನಾಪತ್ತೆಯಾಗಿದ್ದಾರೆ.
Also Read>> ಆರ್‌ಆರ್ ನಗರ SPARSH ಆಸ್ಪತ್ರೆಯಿಂದ 5 ಪ್ಲಾಸ್ಟಿಕ್ ಸರ್ಜರಿ ಕ್ಲಿನಿಕ್‌ಗಳ ಆರಂಭ
ನಿರಂತರ ಮಳೆಯಿಂದ ನದಿ ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಅವರು ಪಕ್ಕದ ನದಿಯಲ್ಲಿ ತೇಲಿ ಹೋಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ನದಿ ತೀರದ ಬಳಿ ಅವರ ಚಪ್ಪಲಿ ಹಾಗೂ ಬಟ್ಟೆಗಳು ಪತ್ತೆಯಾಗಿವೆ.
ಸ್ಥಳದಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










