ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಕುರುವಳ್ಳಿ – ಬಾಳೇಬೈಲಿನ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ ನಿರ್ಮಿಸಿರುವ 56 ಕೋಟಿ ರೂ ವೆಚ್ಚದ ತುಂಗಾ ಸೇತುವೆಯ ಬೈಪಾಸ್ ರಸ್ತೆಯಲ್ಲಿ ಈಗ ಮತ್ತೊಮ್ಮೆ ಗುಡ್ಡ ಕುಸಿಯುತ್ತಿದೆ.
56 ಕೋಟಿ ವೆಚ್ಚದಲ್ಲಿ ಹೊಸ ತುಂಗಾ ಸೇತುವೆ ಹಾಗೂ ಬೈಪಾಸ್ ರಸ್ತೆ ನಿರ್ಮಿಸಲಾಗಿತ್ತು. ಈಗ ಅತಿಯಾದ ಮಳೆಯಿಂದ ಗುಡ್ಡ ಜರಿಯುತ್ತಿದ್ದ ಮುನ್ನೆಚ್ಚರಿಕೆಯಿಂದ ತೀರ್ಥಹಳ್ಳಿ ಪೊಲೀಸರು ಬ್ಯಾರಿಕೆಡ್ ಅಳವಡಿಕೆ ಮಾಡಿದ್ದಾರೆ.
ಈಗಾಗಲೇ ವಾಹನಗಳು ಸಂಚರಿಸುತ್ತಿದ್ದರು ಸಹ ತೀವ್ರ ಮಟ್ಟದಲ್ಲಿ ಗುಡ್ಡ ಕುಸಿದರೆ ಬೈಪಾಸ್ ರಸ್ತೆ ಮತ್ತೊಮ್ಮೆ ನಿರ್ಬಂಧಿಸಬೇಕಾಗುತ್ತದೆ. ಕಳೆದ ವರ್ಷ ಎರಡು ಬಾರಿ ರಸ್ತೆ ಬಂದ್ ಮಾಡಲಾಗಿತ್ತು.
ಕಳೆದ ವರ್ಷ ಉದ್ಘಾಟನೆಗೊಂಡು ಕೆಲವೇ ತಿಂಗಳ ಒಳಗಾಗಿ ತಡೆಗೋಡೆ ಕುಸಿದು ಬಿದ್ದಿತ್ತು. ನಂತರ ಎತ್ತರದಲ್ಲಿ ತಡೆಗೋಡೆ ನಿರ್ಮಾಣ ಮಾಡಿ ಗುಡ್ಡ ಜರಿಯಾದಂತೆ ಮಾಡಲಾಗಿತ್ತು. ಆದರೆ ಈಗ ಮತ್ತೆ ಜರಿಯುತ್ತಿದೆ. ಪ್ರತಿ ವರ್ಷ ಗುಡ್ಡ ಕುಸಿಯುತ್ತಿದ್ದರೆ ಇಂಜಿನಿಯರ್’ಗಳು ಹಾಗೂ ಗುತ್ತಿಗೆದಾರರು ಮಾಡಿದ ಕೆಲಸವಾದರೂ ಏನು? ಎಂಬುದೇ ಯಕ್ಷ ಪ್ರೆಶ್ನೆಯಾಗಿ ಉಳಿದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post