ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ತೀರ್ಥಹಳ್ಳಿ ಮಂಡಲ ಬಿಜೆಪಿ ಯುವಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ Prime Minister Narendra Modi ಅವರ ನೇತೃತ್ವದ ಕೇಂದ್ರ ಸರಕಾರಕ್ಕೆ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ ಯೋಜನೆಗಳನ್ನು ಜನತೆಗೆ ತಲುಪಿಸಬೇಕೆಂಬ ಆಶಯದೊಂದಿಗೆ ‘ವಿಕಾಸ ತೀರ್ಥ’ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು,
ಮಂಡಲದ ಒಟ್ಟು 5 ಮಹಾಶಕ್ತಿ ಕೇಂದ್ರಗಳ ಪಕ್ಷದ ಕಾರ್ಯಕರ್ತರು ಆಗುಂಬೆ, ಆರಗ, ಕುಪ್ಪಳ್ಳಿ, ಮಂಡಗದ್ದೆ, ತೀರ್ಥಹಳ್ಳಿ ಪಟ್ಟಣ ಮಹಾಶಕ್ತಿ ಕೇಂದ್ರಗಳಿಂದ ಹೊರಟು ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವಸ್ಥಾನಕ್ಕೆ ಬಂದು ತಲುಪಿ, ಶ್ರೀ ದೇವರಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ತೀರ್ಥಹಳ್ಳಿ ಪಟ್ಟಣದಾದ್ಯಂತ ಬೈಕ್ ರ್‍ಯಾಲಿ ನಡೆಸಿದರು.
Also read: ಮಂಡಘಟ್ಟ ಗ್ರಾಪಂಗೆ ಡಿ. ಎಸ್. ಅರುಣ್ ಭೇಟಿ : ವ್ಯವಸ್ಥೆಗಳ ಪರಿಶೀಲನೆ
ಗೃಹಸಚಿವ ಆರಗ ಜ್ಞಾನೇಂದ್ರ Home Minister Araga Gnanendra ಸ್ವತಃ ಬೈಕ್ ಏರಿ ರ಼್ಯಾಲಿಯ ನೇತೃತ್ವ ವಹಿಸಿದ್ದರು. ಶಿವಮೊಗ್ಗ ಜಿಲ್ಲಾಧ್ಯಕ್ಷ ಟಿ.ಡಿ. ಮೆಘರಾಜ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಎಂ.ಬಿ. ಹರಿಕೃಷ್ಣ , ಮಂಡಲ ಅಧ್ಯಕ್ಷ ಬಾಳೆಬೈಲು ರಾಘವೇಂದ್ರ, ಮುಖಂಡರಾದ ಮದನ್, ಮಂಡಲ ಯುವಮೋರ್ಚಾ ಅಧ್ಯಕ್ಷರೂ, ವಿಕಾಸ ತೀರ್ಥ ಬೈಕ್ ರ್‍ಯಾಲಿ ತಾಲೂಕು ಸಂಚಾಲಕರೂ ಆದ ಜಿ.ಕೆ. ಸಂದೀಪ್ ಭಟ್, ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ ಅಭಿಯಾನದ ಮಂಡಲ ಸಂಚಾಲಕ ಕುಕ್ಕೆ ಪ್ರಶಾಂತ್, ಸಹ ಸಂಚಾಲಕ ರಕ್ಷಿತ್ ಮೇಗರವಳ್ಳಿ ಸೇರಿದಂತೆ ತೀರ್ಥಹಳ್ಳಿ ಮಂಡಲದ ಎಲ್ಲಾ ಮಹಾಶಕ್ತಿಕೇಂದ್ರಗಳ ಪ್ರಮುಖರು, ಯುವಮೋರ್ಚಾ ಪದಾಧಿಕಾರಿಗಳು, ಹಿರಿಯ ಮುಖಂಡರು, ಕಾರ್ಯಕರ್ತರು ಬೈಕ್ ರ಼್ಯಾಲಿಯಲ್ಲಿ ಭಾಗಿಯಾದರು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಬೈಕ್ ಗಳು ಇಂದಿನ ರ಼್ಯಾಲಿಯಲ್ಲಿ ನೆರೆದಿದ್ದು, ಇಡೀ ಪಟ್ಟಣದಾದ್ಯಂತ ನಡೆದ ಬೃಹತ್ ರ್‍ಯಾಲಿಯಲ್ಲಿ ಮೋದಿಜೀ ಸರ್ಕಾರದ ಸೇವೆಯ ಬಗ್ಗೆ, ಜಯಘೋಷ ಮೊಳಗಿತು.
ನಂತರ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಅಂಕಣಕಾರರೂ , ಯುವ ವಾಗ್ಮಿಗಳೂ ಆದ ಕಾರ್ಕಳದ ಆದರ್ಶ ಗೋಖಲೆಯವರು ಯುವಕರನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರಕಾರ ಎಂಟು ವರ್ಷ ಪೂರೈಸಿದ ಸಂದರ್ಭದಲ್ಲಿ ಕೇಂದ್ರದ ಜನಪರ ಯೋಜನೆಗಳು ಹಾಗೂ ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಮೋದಿಯವರ ಆದರ್ಶ ಆಡಳಿತದ ಕುರಿತು, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಕರ ಪಾತ್ರದ ಕುರಿತು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post