ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಹುಂಚದಕಟ್ಟೆ ಸಮೀಪದ ಶ್ರೀ ಕ್ಷೇತ್ರ ರಾಮನಸರ ನಾಗದೇವತೆ, #Hunchadakatte Shri Kshetra Ramanasara Nagadevathe ಚೌಡೇಶ್ವರಿ ಹಾಗೂ ಪರಿವಾರ ದೇವತೆಗಳ ಸನ್ನಿಧಿಯಲ್ಲಿ ಜ.24ರ ಶನಿವಾರ 20ನೇ ವರ್ಷದ ಶ್ರೀ ನಾಗದೇವತೆ ವರ್ಧಂತಿ ಮಹೋತ್ಸವ ಜರುಗಲಿದೆ.
ಅಂದು ಬೆಳಿಗ್ಗೆ ಶ್ರೀ ನಾಗದೇವತೆಗೆ ಕಲಾ ಹೋಮ, 108 ಕಳಶ ಅಭಿಷೇಕ, ಪವಮಾನ ಅಭಿಷೇಕ ಹಾಗೂ ಪರಿವಾರ ದೇವತೆಗಳಿಗೆ ಮಹಾಪೂಜೆ ನೆರವೇರಲಿದೆ.
ಆಂಜನೇಯ ಸ್ವಾಮಿ ಪಲ್ಲಕ್ಕಿಯನ್ನು ವಿಶೇಷ ಹಣ್ಣಿನ ಮಂಟಪದಲ್ಲಿ ಕೂರಿಸಿ, ರಾಮತಾರಕ ಆಂಜನೇಯ ಮಂತ್ರಹೋಮ, ಹಾಗೂ 1001 ಬಾಳೆಹಣ್ಣು ಮತ್ತು ಜೇನುತುಪ್ಪ ಹೋಮ, ಮಹಾಮಂಗಳಾರತಿ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ, ಅಂದು ರಾತ್ರಿ ಆಶ್ಲೇಷ ಬಲಿ, ರಂಗಪೂಜೆ, ಮಹಾಮಂಗಳಾ ರತಿ ಪ್ರಸಾದ ವಿನಿಯೋಗ ಅನ್ನಸಂತರ್ಪಣೆ ನಡೆಯಲಿದೆ.
ದೇವಾಲಯ ಆವರಣ ವಿದ್ಯುತ್ ದೀಪಾಲಂಕಾರ, ವಿಶೇಷ ಹೂವಿನ ಅಲಂಕಾರದಲ್ಲಿ ಧಾರ್ಮಿಕ ಕಾರ್ಯಕ್ರಮ ಗಳು ಶ್ರೀ ಮುರಳೀಧರ ಕೆದ್ಲಾಯ, ಹೆಗ್ಡೆಕೆರೆ ಹಳ್ಳಾಡಿ ಹಾಗೂ ದೇವಾಲಯ ಪ್ರಧಾನ ಅರ್ಚಕ ಸುರೇಶ್ ಭಟ್ ಅವರ ನೇತೃತ್ವದಲ್ಲಿ ನಡೆಯಲಿವೆ.ಹೊನ್ನಾವರ ತಾಲೂಕು ಗೇರುಸೊಪ್ಪ ನಗರಬಸ್ತಿಕೇರಿ ಶ್ರೀ ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ ಇದೇ ವೇಳೆ ಜರುಗಲಿದೆ.
ರಾತ್ರಿ 9:30 ರಿಂದ ಬೆಳಿಗ್ಗೆ 6:30 ರ ವರೆಗೆ ಶ್ರೀ ಚೌಡಮ್ಮ ದೇವಿ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಸಿಗಂದೂರು ಇವರಿಂದ ನೂತನ ಪ್ರಸಂಗ ವಸಂತಗಾನ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿಯ ಸುನಂದಮ್ಮ, ನಾಗರಾಜ್ ಹುಂಚದಕಟ್ಟೆ ಹಾಗೂ ಪಾದ್ರಿ ಚಂದ್ರಶೇಖರ್ (ಪುಟ್ಟ) ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















