ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಸೆಲ್ಪಿ ಫೋಟೋ ತೆಗೆಯಲು ಹೋಗಿ ತುಂಗಾ ನದಿಯಲ್ಲಿ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಡಿಗ್ರಿ ಕಾಲೇಜ್ ಹಿಂಭಾಗದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಉತ್ತರಪ್ರದೇಶ ಮೂಲದ ಅಬ್ದುಲ್ ಕರೀಂ (24) ಎಂದು ತಿಳಿದು ಬಂದಿದೆ.
ಈತ ತನ್ನ ಇಬ್ಬರು ಸ್ನೇಹಿತರೊಂದಿಗೆ ತುಂಗಾ ನದಿ ಬಳಿ ಫೋಟೋ ತೆಗೆದು ಕೊಳ್ಳಲು ಹೋದಾಗ ಅಕಸ್ಮಾತ್ ಕಾಲು ಜಾರಿ ಅಬ್ದುಲ್ ಕರೀಂ ಹೊಳೆಗೆ ಬಿದ್ದಿದ್ದಾನೆ. ಆತನನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಿದರೂ ಮೃತಪಟ್ಟಿದ್ದಾನೆ. ಈತ ಉತ್ತರ ಪ್ರದೇಶದ ಮೂಲದವನಾಗಿದ್ದು ಬಾಳೆಬೈಲಿನಲ್ಲಿ ಕೆಲಸ ಮಾಡಲು ಬಂದಿದ್ದ ಎಂದು ತಿಳಿದುಬಂದಿದೆ.
ಈತನ ಮರಣೋತ್ತರ ಪರೀಕ್ಷೆ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಬಳಿಕ ಆತನ ಶವವನ್ನು ಉತ್ತರ ಪ್ರದೇಶಕ್ಕೆ ತೆಗೆದುಕೊಂಡು ಹೋಗಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post