ಉತ್ತರಾಖಂಡ್: ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ದಿಗ್ವಿಜಯ ದಾಖಲಿಸಿರುವುದು ಇಡಿಯ ದೇಶ ಮಾತ್ರವಲ್ಲ, ವಿಶ್ವದಲ್ಲೇ ಸಂತಸ ಮೂಡಿಸಿದೆ.
ಈ ಯಶಸ್ಸಿನಿಂದ ಮೋದಿ ಅಭಿಮಾನಿಗಳ ಸಂಖ್ಯೆಯಲ್ಲಿ ಮೊದಲಿಗಿಂತಲೂ ಏರಿಕೆಯಾಗಿದೆ ಎಂಬುದು ನಿಶ್ಚಿತ. ಇಂತಹ ಅಭಿಮಾನಿಗಳಲ್ಲಿ ಓರ್ವ ತನ್ನದೇ ಆದ ವಿಶಿಷ್ಠ ರೀತಿಯಲ್ಲಿ ಅಭಿಮಾನ ಮೆರೆದಿದ್ದಾರೆ.
ಉತ್ತರಾಖಂಡ್ ರಾಜ್ಯದ ಹಲ್ದ್ವಾನಿ ನಗರದಲ್ಲಿ ಆಟೋ ರಿಕ್ಷಾ ಚಾಲನೆ ಮಾಡುವ ಜಮುನಾ ಪ್ರಸಾದ್ ಅವರು ಪ್ರಧಾನಿ ಮೋದಿಯವರ ಅಪ್ಪಟ ಅಭಿಮಾನಿ.
ಮೋದಿಯವರು ಮತ್ತೆ ಪ್ರಧಾನಿಯಾಗುತ್ತಿರುವುದನ್ನು ಅತ್ಯಂತ ವಿಭಿನ್ನ ರೀತಿಯಲ್ಲಿ ಸಂಭ್ರಮಿಸಲು ಮುಂದಾಗಿರುವ ಈ ವ್ಯಕ್ತಿ, ಮೋದಿಯವರು ಪ್ರಮಾಣವಚನ ಸ್ವೀಕರಿಸುವ ದಿನದವರೆಗೂ ತಮ್ಮ ಆಟೋದಲ್ಲಿ ಉಚಿತ್ರ ಪ್ರಯಾಣವನ್ನು ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಮಾತನಾಡಿರುವ ಪ್ರಸಾದ್ ಅವರು, ಮೋದಿಯವರು ಎರಡನೆಯ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ನನಗೆ ಅತೀವ ಸಂತಸ ಮೂಡಿಸಿದೆ. ಹೀಗಾಗಿ, ಅವರು ಪ್ರಮಾಣವಚನ ಸ್ವೀಕಾರ ಮಾಡುವ ದಿನದವರೆಗೂ ನನ್ನ ಆಟೋದಲ್ಲಿ ಎಲ್ಲರಿಗೂ ಉಚಿತ ಪ್ರಯಾಣ ಘೋಷಿಸಿದ್ದು, ಈ ಮೂಲಕ ದೇಶ ಸೇವೆಗೆ ನಿರ್ಧರಿಸಿದ್ದೇನೆ ಎನ್ನುತ್ತಾರೆ.
Discussion about this post