ಕರ್ನಾಟಕ ರಾಜ್ಯ ಪ್ರತಿಭೆಗಳ ತವರು ಅದರಲ್ಲಿ ಕರಾವಳಿ ನೆಲ (ತುಳುನಾಡು)ದಿನದಿಂದ ದಿನಕ್ಕೆ ಕಲಾವಿದರಿಂದಲೇ ಕಂಗೊಳಿಸುತ್ತಿದೆ. ಇಲ್ಲಿನ ಬಾಲ ಪ್ರತಿಭೆಗಳು ಕಲೆ ಸಂಸ್ಕೃತಿಯತ್ತ ಆಸಕ್ತಿ ತೋರಿಸುತಿರುವುದು ನಿಜಕ್ಕೂ ಸಂತಸದ ವಿಚಾರ.
ಹಣದಿಂದ ನಿಜವಾದ ಕಲಾವಿದರ ಕಲೆಯನ್ನು ಕೊಲ್ಲಲು ಸಾಧ್ಯವಿಲ್ಲ. ಕಲೆಗೆ ಶ್ರೀಮಂತ ಬಡವ ಬೇದಭಾವವಿಲ್ಲ. ಆಸ್ತಕಿಯಿದ್ದರೆ ಸಾಮಾನ್ಯರು ಸಹ ಕಲಾಕ್ಷೇತ್ರದಲ್ಲಿ ಮಿಂಚಬಹುದೆಂಬುದನ್ನು ತಮ್ಮ ನೃತ್ಯದ ಮೂಲಕವಾಗಿ ತೋರಿಸಿಕೊಟ್ಟವಳೇ ಸೃಷ್ಟಿ ಕೊಯ್ಯೂರು.
ಮೂಲತಃ ಇವರು ಕೊಯ್ಯೂರು ಗ್ರಾಮದ, ಬೆಳ್ತಂಗಡಿ ತಾಲೂಕಿನ ಶ್ರೀ ಸೋಮಶೇಖರ್ ಹಾಗೂ ಶ್ರೀಮತಿ ವೇದಾ ದಂಪತಿಯ ಮುದ್ದಿನ ಮಗಳು.
ಈಗ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ ಉಜಿರೆಯಲ್ಲಿ 8ನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ತನ್ನ ಚಿಕ್ಕ ವಯಸ್ಸಿನಲ್ಲೇ ವೇದಿಕೆ ಪದಾರ್ಪಣೆ ಮಾಡಿದ ಮೊದಲ ಶೋ JCI ಫ್ಯಾಷನ್ ಶೋನಲ್ಲಿ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿರುವ ಈಕೆ ಓದಿನಲ್ಲಿ ಸದಾ ಮುಂದು.
ನೃತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸೃಷ್ಟಿ ಕೊಯ್ಯೂರ್ ಭರತನಾಟ್ಯ, ಹಿಪ್ ಹಾಪ್, ಬಾಲಿವುಡ್, ಫ್ರೀ ಸ್ಟೈಲ್, Contemporary, ರಷ್ಯನ್ ಕಲಿಂಕ ಹಾಗೂ ಜಾನಪದ ಮುಂತಾದ ಶೈಲಿಯ ನೃತ್ಯವನ್ನು ಬಹಳ ಚೆನ್ನಾಗಿ ಮಾಡುತ್ತಾಳೆ.
ಗುರುಗಳಾದ ಉದಯ ಕುಮಾರ್, ವಿನೋದ್, ಜಿತೇಶ್, ಅಮೃತಾ, ನಿತೀನ್, ಸಂತೋಷ್, ಪೃಥ್ವಿ, ಸುನೀಲ್, ಜಿಜಿನ್, ಪ್ರವೀಣ್, ಅವಿನಾಶರವರಿಂದ ನೃತ್ಯ ಅಭ್ಯಾಸವನ್ನು ಮಾಡಿ ಸುವರ್ಣ ಚಾನೆಲ್’ನ Dance dance junior ಮತ್ತು ಕಲರ್ಸ್ ಸೂಪರ್’ನಲ್ಲಿ Master Dancer ಮೆಗಾ ಆಡಿಷನ್ ಆಯ್ಕೆಯಾಗಿರುತ್ತಾಳೆ.
ಡೈಝಿ ವಲ್ಡರ್ ಚಾನೆಲ್ ನಲ್ಲಿ ನಡೆದ ಜೂನಿಯರ್ ಮಸ್ತಿ ರಿಯಾಲಿಟಿ ಶೋ ಪೈನಲಿಸ್ಟ್, ಆದ ಮೇಲೆ ನಮ್ಮ Master Dancer ಚಾನೆಲ್’ನಲ್ಲಿ ಡ್ಯಾನ್ಸ್ ಟು ಡ್ಯಾನ್ಸ್ ರಿಯಾಲಿಟಿ ಶೋ 4ನೆಯ ಸ್ಥಾನ ಪಡೆದ ಇವಳು ಇತ್ತೀಚೆಗೆ ಮೈಸೂರಿನಲ್ಲಿ ನಡೆದ National icon model hunt 2k19 Winner ಪ್ರಶಸ್ತಿ ಪಡೆದಿರುವ ಹೆಗ್ಗಳಿಕೆ ಈಕೆಯದ್ದು.
ಇಲ್ಲಿಯ ತನಕ 500ಕ್ಕೂ ಹೆಚ್ಚು ಶೋಗಳನ್ನು ಎಸ್.ಡಿ.ಎಂ. ಕಲಾ ವೈಭವ ತಂಡದೊಂದಿಗೆ ನೃತ್ಯ ಪ್ರದರ್ಶನ ನೀಡಿರುತ್ತಾಳೆ. ಐಸಿರಿ, ಆಮಂತ್ರಣ ಪರಿವಾರ, ಸಂಸ್ಕೃತ ಸಿರಿ ಈ ಮಹಾನುಭಾವರ ಸಹಕಾರದಿಂದ ರಾಜ್ಯದ ಹಲವು ಕಡೆ ವೇದಿಕೆಗಳು ಸಿಗುವಂತಾಯಿತು.
ಇದರೊಂದಿಗೆ ಹಲವಾರು ಹವ್ಯಾಸವನ್ನು ಬೆಳೆಸಿಕೊಂಡಿರುವ ಈ ಹುಡುಗಿ ಡ್ರಾಯಿಂಗ್, ಕ್ರಾಫ್ಟ್ ವರ್ಕ್, ಸಂಗೀತ, ರಂಗೋಲಿಯನ್ನು ಕರಗತ ಮಾಡಿಕೊಂಡಿದ್ದಾಳೆ.
ಸೃಷ್ಠಿ ಕೊಯ್ಯೂರುಗೆ ಹಲವಾರು ಸಂಘ ಸಂಸ್ಥೆಗಳಿಂದ ಪ್ರತಿಭಾ ಸನ್ಮಾನ, ಪುರಸ್ಕಾರಗಳು ಲಭಿಸಿದೆ.
ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವ ತಂದೆ-ತಾಯಿ, ಊರಿನ ಗುರು-ಹಿರಿಯರ ಹಾಗೂ ಸ್ನೇಹಿತರ ಪ್ರೋತ್ಸಾಹದಿಂದ ಇನ್ನಷ್ಟು ಅವಕಾಶಗಳು ಹುಡುಕಿ ಬರಲಿ ಎಂಬುದೆ ನಮ್ಮ ಆಶಯ.
ಲೇಖನ: ಪ್ರಕಾಶ್ ಐಸಿರಿ
ಮಾಹಿತಿ: ವಿದ್ಯಾ ಪ್ರಶಾಂತ್
ಚಿತ್ರಕೃಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post