ಆಕೆ ದಕ್ಷಿಣ ಭಾರತದ ಗ್ಲಾಮರ್ ಕ್ವೀನ್.. ಕನ್ನಡದಲ್ಲಿ ಆಕೆ ನಟಿಸಿದ ಚಿತ್ರಗಳು ಬೆರಳೆಣಿಕೆಯಾದರೂ ಆಕೆ ಮನೆಮಾತಾಗಿರುವ ನಟಿ ಲಕ್ಷ್ಮೀ ರಾಯ್ ಈಗ ತಮ್ಮ ಹೊಸ ಪ್ರಾಜೆಕ್ಟ್ ಗಾಗಿ ಸಾಹಸವೊಂದಕ್ಕೆ ಕೈ ಹಾಕಲಿದ್ದಾರೆ.
ಹೌದು… ಗ್ಲಾಮರ್ ಕ್ವೀನ್, ಗ್ಲಾಮರ್ ಗೊಂಬೆ ಎಂದೇ ಫೇಮಸ್ ಆದ ಲಕ್ಷ್ಮೀ ರಾಯ್ ಈಗ ಫುಲ್ ಆಕ್ಷನ್ ಮೂವಿ ಝಾನ್ಸಿಗಾಗಿ ಸಿದ್ದವಾಗುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಆಕೆ, ನಾನು ಇದುವರೆಗೂ ಮಾಡಿರುವ ಚಿತ್ರಗಳಲ್ಲಿ ಸಣ್ಣ ಸಣ್ಣ ಆಕ್ಷನ್ ದೃಶ್ಯಗಳಿತ್ತು. ಆದರೆ, ಝಾನ್ಸಿ ಫುಲ್ ಆಕ್ಷನ್ ಮೂವಿ. ಹೀಗಾಗಿ, ಇದಕ್ಕೆ ಸಾಕಷ್ಟು ತಯಾರಿ ನಡೆಸಬೇಕಿದೆ. ಬೇಸಿಕ್ ಟ್ರೈನಿಂಗ್ ಗೋಸ್ಕರ ಮಾರ್ಷಲ್ ಆಟ್ರ್ಸ್ ಕಲಿಯಲಿದ್ದೇನೆ ಎಂದಿದ್ದಾರೆ.
ಜ್ಯೂಲಿ ಬಗ್ಗೆ ರಿಗ್ರೇಟ್ಸ್ ಇಲ್ಲ
ಜ್ಯೂಲಿ ಚಿತ್ರವನ್ನು ನಾನು ತುಂಬಾ ಆಸಕ್ತಿಯಿಂದ ಮಾಡಿದ್ದೇನೆ. ಚಿತ್ರ ನಿರೀಕ್ಷೆಯಷ್ಟು ಯಶಸ್ಸು ಕಾಣಲಿಲ್ಲ ಎಂದು ನನಗೇನು ರಿಗ್ರೇಟ್ಸ್ ಇಲ್ಲ. ಚಿತ್ರ ಇಷ್ಟವಾದರೆ ಜನ ಒಪ್ಪಿಕೊಳ್ಳುತ್ತಾರೆ, ಇಲ್ಲದೇ ಇದ್ದರೆ ಇಲ್ಲ. ಅದೂ ಸಹ ನನಗೆ ಒಂದು ಅನುಭವ. ನಾನು ಒಂದು ಅನುಭವಕ್ಕಾಗಿ ಆ ಚಿತ್ರ ಮಾಡಿದೆ. ನನಗೆ ಸಮಾಧಾನ ಕೊಟ್ಟಿದೆ ಎನ್ನುತ್ತಾರೆ ರಾಯ್.
ಗುಣಮಟ್ಟ ಮುಖ್ಯ, ಸಂಖ್ಯೆಯಲ್ಲ
ಬಾಲಿವುಡ್ ನಿಂದ ಸಾಕಷ್ಟು ಆಫರ್ ಬರುತ್ತಿದೆ. ಆದರೆ, ಅದರ ಕತೆ, ಚಿತ್ರಕತೆಗಳು ಒಂದೇ ರೀತಿಯಿವೆ. ವಿಭಿನ್ನ ಕತೆ ಹಾಗೂ ಚಿತ್ರಕತೆ ಇರುವ ಚಿತ್ರ ಮಾಡಬೇಕು ಎನ್ನುವುದು ನನ್ನ ಕನಸು. ಸರಿಯಾದ ಕತೆ ದೊರೆಯುವವರೆಗೂ ನಾನು ಮಾಡುವುದಿಲ್ಲ. ಚಿತ್ರಸಂಖ್ಯೆಗಿಂತಲೂ ಗುಣಮಟ್ಟ ಮುಖ್ಯ ಎಂದಿದ್ದಾರೆ ಲಕ್ಷ್ಮೀ.
ಸಾಕಷ್ಟು ಕಲಿಯಲಿದ್ದೇನೆ
ಚಿತ್ರರಂಗದಲ್ಲಿ 13 ವರ್ಷದ ಜರ್ನಿ ಮಾಡಿದ್ದೇನೆ. ನನ್ನೊಂದಿಗೆ ಇಂಡಸ್ಟ್ರಿಗೆ ಬಂದವರು ಇಂದು ಸಾಕಷ್ಟು ಮಂದಿ ಇಲ್ಲಿ ಇಲ್ಲ. ನಾನು ಆ ಲೆಕ್ಕಕ್ಕೆ ಪುಣ್ಯವಂತೆ. 13 ವರ್ಷದ ಜರ್ನಿ ಬಹಳಷ್ಟು ಅನುಭವ ನೀಡಿದ್ದು, ಖುಷಿಯಾಗಿದೆ. – ರಾಯ್
ರಾಯ್ ಮೆಚ್ಚುವ ಹುಡುಗ ಹೇಗಿರಬೇಕು ಗೊತ್ತಾ?
ತಮ್ಮ ವಿವಾಹದ ಕುರಿತು ಮಾತನಾಡಿರುವ ರಾಯ್, ಅದಕ್ಕಿನ್ನೂ ಕಾಲ ಬಂದಿಲ್ಲ. ಮದುವೆ ಆಗುವುದಾದರೆ ಮುಚ್ಚಿಟ್ಟು ಮದುವೆ ಆಗುವುದಿಲ್ಲ. ನಾನು ಮೆಚ್ಚುವ ಹುಡುಗ ಕೇರಿಂಗ್, ರೆಸ್ಪೆಕ್ಟೆಬಲ್ ಹಾಗೂ ಜಂಟಲ್ ಮ್ಯಾನ್ ಆಗಿದ್ದರೆ ಸಾಕು. ದುಡ್ಡು-ಹೆಸರು ಯಾರಿಗಾದರೂ ಬರುತ್ತದೆ. ಆದರೆ, ಅದಕ್ಕಿಂತಲೂ ಗುಣವಿರುವ ಹುಡುಗ ನನಗೆ ಇಷ್ಟ ಎಂದು ತಮ್ಮ ಕನಸಿನ ರಾಜಕುಮಾರನ ಕಲ್ಪನೆ ಬಗ್ಗೆ ಹಂಚಿಕೊಂಡಿದ್ದಾರೆ.
Discussion about this post