ಚೆನ್ನೈ: ಅದು ಹಾಗೆಯೇ.. ಯಾವುದೇ ಉಮೇದು, ಪೂರ್ವಾಗ್ರಹ ಪೀಡಿತ ಕೆಟ್ಟ ದುರಾಲೋಚನೆಯ ಮನಃಸ್ಥಿತಿಯಿಂದ ಯಾವುದೇ ಧರ್ಮ ಅಥವಾ ನಂಬಿಕೆಯನ್ನು ಅಲ್ಲಾಡಿಸಲು ಯತ್ನಿಸಿದರೆ, ಅದು ತಿರುಗಿ ನೀಡುವ ಹೊಡೆಯ ಸರಿಯಾಗಿಯೇ ಇರುತ್ತದೆ.
ಕೋಟ್ಯಂತರ ಭಕ್ತರ ನಂಬಿಕೆಗೆ ಘಾಸಿ ಮಾಡಿ ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿದ್ದ ಹುಡುಗಿಯ ಪರಿಸ್ಥಿತಿ ಈಗ ಹಾಗೇ ಆಗಿದೆ.
ಹೌದು… ಕನಕದುರ್ಗ ಎಂಬ ಹುಡುಗಿ ಕಳೆದ ವರ್ಷ ಶಬರಿಮಲೆ ದೇವಾಲಯಕ್ಕೆ ಯತ್ನಿಸಿದ್ದರು. ಅಖಂಡ ಬ್ರಹ್ಮಚಾರಿ ಅಯ್ಯಪ್ಪನ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಸಾಂಪ್ರದಾಯಿಕವಾಗಿ ನಿಷಿದ್ಧವಾಗಿದ್ದರೂ ಕೋರ್ಟ್ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಪ್ರವೇಶಿಸಲು ಯತ್ನಿಸಿದ್ದರು.
ಆದರೆ, ಕೋಟ್ಯಂತರ ಭಕ್ತರು ಇದನ್ನು ವಿರೋಧಿಸಿದ್ದರು. ಇದನ್ನು ಲೆಕ್ಕಿಸದೇ ದೇವಾಲಯ ಪ್ರವೇಶಿಸಿದ ಕನಕದುರ್ಗ ಅದನ್ನೇ ಸಾಧನೆಯಂತೆ ಎಣಿಸಿದ್ದರು. ಆದರೆ, ಕೋಟ್ಯಂತರ ಭಕ್ತರ ನಂಬಿಕೆಯನ್ನು ಘಾಸಿಗೊಳಿಸಿದ ಈಕೆ ಈಗ ಅಕ್ಷರಶಃ ಕಣ್ಣೀರಿಡುತ್ತಿದ್ದಾರೆ. ಈ ಕುರಿತಂತೆ ಆಕೆ ಬಿಬಿಸಿ ಚಾನೆಲ್’ಗೆ ನೀಡಿರುವ ಸಂದರ್ಶನವೊಂದರಲ್ಲಿ ಕಣ್ಣೀರು ಹಾಕಿ ಮಾತನಾಡಿದ್ದು, ಅಂದು ಶಬರಿಮಲೆ ದೇವಾಲಯಕ್ಕೆ ಹೋಗಿದ್ದು ತನ್ನ ತಪ್ಪಾಯಿತು ಎಂದು ಕಣ್ಣೀರು ಸುರಿಸಿದ್ದಾರೆ.
ಕನಕದುರ್ಗ ಅವರನ್ನು ಪ್ರೇರೇಪಿಸಿ ಶಬರಿಮಲೆಗೆ ಕಳುಹಿಸಿದವರು ಇಂದು ತಮ್ಮ ಕುಟುಂಬಸ್ಥರೊಂದಿಗೆ ಸುಖವಾಗಿದ್ದರೆ, ಈಕೆ ಮಾತ್ರ ಕುಟುಂಬವರಿಂದ ದೂರ ಹಾಕಲ್ಪಟ್ಟಿದ್ದು, ಯಾರೂ ಇಲ್ಲದಂತೆ ಬದುಕುತ್ತಿದ್ದಾರೆ. ಇದರಿಂದ ಆಕೆಗೆ ಪಶ್ಚಾತ್ತಾಪವಾಗಿದ್ದು, ತನ್ನ ಕೆಲಸ ತಪ್ಪಾಗಿದೆ ಎಂದು ಕಣ್ಣೀರಿಡುತ್ತಾ ಕೂರುವಂತಾಗಿದೆ.
Discussion about this post