No Result
View All Result
South Western Railway, Mysuru Division Hosts Inter Department Drama Competition
English Articles

South Western Railway, Mysuru Division Hosts Inter Department Drama Competition

by ಕಲ್ಪ ನ್ಯೂಸ್
May 16, 2026
0

Kalpa Media House  |  Bengaluru  | The South Western Railway, Mysuru Division, successfully organized the much-awaited Inter Department Drama Competition,...

Read moreDetails
PCCF Kumar Pushkar Warns Human Intolerance Fueling Biodiversity Crisis

PCCF Kumar Pushkar Warns Human Intolerance Fueling Biodiversity Crisis

May 15, 2026
Annual Disaster Management Mock Drill Conducted at Harihar Railway Station

Annual Disaster Management Mock Drill Conducted at Harihar Railway Station

May 14, 2026
AESL Launches Victory Batch at Rs 99 to support students appearing for RE-NEET

AESL Launches Victory Batch at Rs 99 to support students appearing for RE-NEET

May 13, 2026
Why The Hell Did You Make Manya Surve a Hero?: Sanjay Gupta Opens Up on Underworld Threats

Why The Hell Did You Make Manya Surve a Hero?: Sanjay Gupta Opens Up on Underworld Threats

May 13, 2026
  • Advertise With Us
  • Grievances
  • About Us
  • Contact Us
Sunday, May 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆರೋಗ್ಯ - ಜೀವನ ಶೈಲಿ

ಇದು ವಿಶ್ವದಲ್ಲೇ ಪ್ರಥಮ | ನಾರಾಯಣ ಹೆಲ್ತ್’ನಿಂದ ಅತ್ಯಂತ ಕ್ಲಿಷ್ಟಕರ ಸರ್ಜರಿ ಯಶಸ್ವಿ

ತಂದೆಯಿಂದಲೇ ಮಗನಿಗೆ ಮೂತ್ರಪಿಂಡ ದಾನ | ಇಂತಹ ಸರ್ಜರಿಯಲ್ಲಿ ಇತಿಹಾಸ ಬರೆದ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 7, 2026
in ಆರೋಗ್ಯ - ಜೀವನ ಶೈಲಿ
0
ಇದು ವಿಶ್ವದಲ್ಲೇ ಪ್ರಥಮ | ನಾರಾಯಣ ಹೆಲ್ತ್’ನಿಂದ ಅತ್ಯಂತ ಕ್ಲಿಷ್ಟಕರ ಸರ್ಜರಿ ಯಶಸ್ವಿ
Share on FacebookShare on TwitterShare on WhatsApp

ಅತ್ಯಂತ ಅಪರೂಪದ ‘ಸಿವಿಯರ್ ಫ್ಯಾಕ್ಟರ್ VII ಡಿಫಿಷಿಯೆನ್ಸಿ’ ಹೊಂದಿರುವ ರೋಗಿಗೆ ವಿಶ್ವದಲ್ಲೇ ಮೊದಲ ಬಾರಿಗೆ ಯಶಸ್ವಿಯಾಗಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಿದ ಮುಕುಂದಪುರದ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್. ತಂದೆ, ಮಗ ಇಬ್ಬರೂ ಒಂದೇ ಅಪರೂಪದ ಆನುವಂಶಿಕ ತೊಂದರೆ ಹೊಂದಿದ್ದರೂ ತಂದೆಯೇ ತನ್ನ ಮಗನಿಗೆ ಮೂತ್ರಪಿಂಡ ದಾನ ಮಾಡಿದ್ದು, ನಿಜಕ್ಕೂ ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದೆ. ವಿಶ್ವದಲ್ಲೇ ಈ ರೀತಿಯ ಮೊದಲ ಶಸ್ತ್ರಚಿಕಿತ್ಸೆಯಾಗಿದೆ.

ಕಲ್ಪ ಮೀಡಿಯಾ ಹೌಸ್  |  ಕೋಲ್ಕತ್ತಾ  |

ಮುಕುಂದಪುರ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್ ನ ವೈದ್ಯರ ತಂಡವು ಅತ್ಯಂತ ಅಪರೂಪದ ಆನುವಂಶಿಕ ರಕ್ತಸ್ರಾವ ರೋಗವಾದ ‘ಸಿವಿಯರ್ ಫ್ಯಾಕ್ಟರ್ VII ಡಿಫಿಷಿಯೆನ್ಸಿ’ ಇದ್ದ ಭೂತಾನ್‌ನ ಯುವಕನೊಬ್ಬನಿಗೆ ಯಶಸ್ವಿಯಾಗಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಿ ದಾಖಲೆ ಮಾಡಿದೆ. ಇದೊಂದು ವಿಶ್ವದಲ್ಲೇ ಮೊದಲ ಬಾರಿಗೆ ನಡೆದ ಅತ್ಯಂತ ಅಪರೂಪದ ಶಸ್ತ್ರಚಿಕಿತ್ಸೆಯಾಗಿದೆ.

ಜಗತ್ತಿನಲ್ಲಿ ಕೇವಲ 50 ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಕಾಣಿಸುವ ಅತ್ಯಂತ ವಿರಳ ಸಮಸ್ಯೆಯಿಂದ ಆ ಯುವಕ ಬಳಲುತ್ತಿದ್ದ. ಇದುವರೆಗೆ ಜಗತ್ತಿನಲ್ಲಿ ಯಾವುದೇ ಆಸ್ಪತ್ರೆಯಲ್ಲಿ ಇಂತಹ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರಲಿಲ್ಲ. ಆದರೆ ನಾರಾಯಣ ಹೆಲ್ತ್ #NarayanaHealth ಸಂಸ್ಥೆ ಈ ಮಹಾ ಸಾಧನೆ ಮಾಡಿ ತೋರಿಸಿದ್ದು, ಸಂಕೀರ್ಣ ಮತ್ತು ಅಪಾಯಕಾರಿ ಪ್ರಕರಣಗಳನ್ನು ನಿರ್ವಹಿಸುವಲ್ಲಿ ತಾನು ವಿಶ್ವಮಟ್ಟದ ಪರಿಣತಿ ಹೊಂದಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ರೋಗಿಗೆ ತಂದೆಯ ಹೊರತು ಬೇರೆ ಯಾರೂ ದಾನಿ ಆಗಲು ಸಾಧ್ಯವಿರಲಿಲ್ಲ. ಆದರೆ ತಂದೆಯೂ ಇದೇ ಅಪರೂಪದ ಆನುವಂಶಿಕ ತೊಂದರೆ ಹೊಂದಿದ್ದರು. ಇದರಿಂದ ಈ ಪ್ರಕರಣವು ವೈದ್ಯಕೀಯವಾಗಿ ಮತ್ತು ನೈತಿಕವಾಗಿ ಅತ್ಯಂತ ಸಂಕೀರ್ಣವಾಗಿತ್ತು ಮತ್ತು ಸವಾಲಿನದಾಗಿತ್ತು.

ಬಹುವಿಭಾಗೀಯ ತಂಡದ ದೀರ್ಘ ಚರ್ಚೆ, ಅಪಾಯ ಮೌಲ್ಯಮಾಪನದ ನಂತರ ಅತ್ಯಂತ ನಿಖರತೆಯೊಂದಿಗೆ ಈ ಅಪರೂಪದ #Surgery ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ದಾನಿ ಮತ್ತು ಸ್ವೀಕರಿಸುವವರು ಇಬ್ಬರೂ ಒಂದೇ ಆನುವಂಶಿಕ ತೊಂದರೆ ಹೊಂದಿದ್ದು ನಡೆದ ಜಗತ್ತಿನ ಮೊದಲ ಮೂತ್ರಪಿಂಡ ಕಸಿ #KidneyTransplant ಶಸ್ತ್ರಚಿಕಿತ್ಸೆ ಎಂಬ ಗೌರವಕ್ಕೆ ಈ ಪ್ರಕರಣವು ಪಾತ್ರವಾಗಿದೆ. ವಿಶೇಷವಾಗಿ ವೈದ್ಯಕೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸಾಧನೆ ಎಂಬ ದಾಖಲೆ ಬರೆದಿದೆ.
ಈ ಪ್ರಕರಣದ ಸಂಕೀರ್ಣತೆಯ ಕುರಿತು ಮಾತನಾಡಿದ ಮುಕುಂದಪುರದ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್ ನ ಕನ್ಸಲ್ಟೆಂಟ್ ಮತ್ತು ಚೀಫ್ ನೆಫ್ರಾಲಜಿಸ್ಟ್ (ಮೂತ್ರಪಿಂಡ ಕಸಿ ಯೋಜನೆ) ಡಾ. ದೀಪಕ್ ಶಂಕರ್ ರೇ ಅವರು, “ಈ ಪ್ರಕರಣವು ನಮ್ಮ ವೈದ್ಯಕೀಯ ಸಮನ್ವಯತೆ ಮತ್ತು ಶಸ್ತ್ರಚಿಕಿತ್ಸಾ ಸಾಮರ್ಥ್ಯವನ್ನು ನಿಜವಾಗಿಯೂ ಪರೀಕ್ಷಿಸಿತು. ಚಿಕ್ಕ ರಕ್ತಸ್ರಾವದಿಂದಲೂ ಮರಣ ಹೊಂದಬಹುದಾಗಿದ್ದ ರೋಗಿಗೆ ನಾವು ಮೂತ್ರಪಿಂಡ ಕಸಿ ಮಾಡಬೇಕಾಗಿತ್ತು. ಅರಿವಳಿಕೆಯಿಂದ ಹಿಡಿದು ಹೊಲಿಗೆಯವರೆಗೆ ಪ್ರತಿ ಹಂತವೂ ಬಹಳ ಎಚ್ಚರಿಕೆಯಿಂದ ಮತ್ತು ಬಹಳ ಸಮನ್ವಯತೆಯಿಂದ ನಡೆಯಬೇಕಾಗಿತ್ತು. ಈ ಯಶಸ್ಸು ನಮ್ಮ ಟೀಮ್ ವರ್ಕ್ ಗೆ ಸಿಕ್ಕ ಗೆಲುವಾಗಿದ್ದು, ಅತ್ಯಂತ ಸೂಕ್ಷ್ಮ ಯೋಜನೆ ಮತ್ತು ಕುಟುಂಬದ ಅಚಲ ನಂಬಿಕೆಯ ಫಲಿತಾಂಶವಾಗಿದೆ. ಅತ್ಯಮೂಲ್ಯ ನೆರವನ್ನು ಒದಗಿಸಿ ಈ ಯುವಕನನ್ನು ಬದುಕಿಸಲು ಕಾರಣವಾದ, ಈ ಪ್ರಕರಣದ ಯಶಸ್ಸಿಗೆ ಬಹುಮುಖ್ಯ ಕಾರಣರಾದ ನಮ್ಮ ಬಹುವಿಭಾಗೀಯ ತಂಡದ ವೈದ್ಯರ ಅಪಾರ ಜ್ಞಾನ ಮತ್ತು ಪರಿಶ್ರಮಕ್ಕೆ ನಾವು ಕೃತಜ್ಞರಾಗಿದ್ದೇವೆ. ವಿಶೇಷವಾಗಿ ಶಸ್ತ್ರಚಿಕಿತ್ಸಾ ತಂಡದ ಡಾ. ತರ್ಷಿದ್ ಅಲಿ ಜಹಾಂಗೀರ್ ಮತ್ತು ಅರಿವಳಿಕೆ ತಂಡದ ಡಾ. ತಿತಿಸಾ ಸರ್ಕಾರ್ ಮಿತ್ರಾ ಅವರ ಕೊಡುಗೆಯನ್ನು ಗೌರವಪೂರ್ವಕವಾಗಿ ಸ್ಮರಿಸುತ್ತಿದ್ದೇವೆ” ಎಂದು ಹೇಳಿದರು.

ಈ ಅಪರೂಪದ ರಕ್ತಸ್ರಾವ ತೊಂದರೆಯ ಕುರಿತು ಮಾತನಾಡಿದ ಮುಕುಂದಪುರ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್ ನ ಹೆಮಟಾಲಜಿ ವಿಭಾಗದ ಕನ್ಸಲ್ಟೆಂಟ್ ಡಾ. ಶಿಶಿರ್ ಕುಮಾರ್ ಪಾತ್ರ ಅವರು, “ಸಿವಿಯರ್ ಫ್ಯಾಕ್ಟರ್ VII ಡಿಫಿಷಿಯೆನ್ಸಿ ಎಷ್ಟು ಅಪರೂಪ ಎಂದರೆ ಜಗತ್ತಿನಲ್ಲಿ ಸುಮಾರು 50 ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಬರುತ್ತದೆ. ಇಂತಹ ಪ್ರಕರಣ ನಿರ್ವಹಣೆ ಅತ್ಯಂತ ಸೂಕ್ಷ್ಮವಾಗಿದೆ. ಫ್ಯಾಕ್ಟರ್ VII ಕಡಿಮೆಯಾದರೆ ಅತಿಯಾದ ರಕ್ತಸ್ರಾವ ಉಂಟಾಗಬಹುದು, ಮತ್ತೂ ಕಡಿಮೆಯಾದರೆ ಅಪಾಯಕಾರಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಬುದು. ನಾವು ನಿಮಿಷ ನಿಮಿಷಕ್ಕೂ ಅತ್ಯಂತ ಸಣ್ಣ ವಿಚಾರದಲ್ಲಿಯೂ ಸುರಕ್ಷತೆ ನೋಡಿಕೊಳ್ಳಬೇಕಿತ್ತು. ಈಗ ರೋಗಿ ಮತ್ತು ಅವರ ತಂದೆ ಇಬ್ಬರೂ ಚೆನ್ನಾಗಿರುವುದು ನೋಡಿ ತುಂಬಾ ಸಂತೋಷವಾಗುತ್ತಿದೆ” ಎಂದು ಹೇಳಿದರು.

ಶಸ್ತ್ರಚಿಕಿತ್ಸೆಯ ನಂತರವೂ ಬಹಳಷ್ಟು ಸವಾಲುಗಳಿದ್ದುವು. ರೋಗಿಗೆ ಸಣ್ಣ ರಕ್ತ ಹೆಪ್ಪುಗಟ್ಟುವಿಕೆಯಿಂದ ತಾತ್ಕಾಲಿಕ ಪಾರ್ಶ್ವವಾಯು ಬಂದಿತ್ತು. ಆದರೆ ನೆಫ್ರಾಲಜಿ, ನ್ಯೂರಾಲಜಿ ಮತ್ತು ಹೆಮಟಾಲಜಿ ತಂಡಗಳ ಸಂಯುಕ್ತ ಆರೈಕೆಯಲ್ಲಿ ರೋಗಿ ಪೂರ್ಣ ಚೇತರಿಕೆ ಕಂಡಿದ್ದಾರೆ. ಈಗ ಅವರ ಕ್ರಿಯೇಟಿನಿನ್ ಮಟ್ಟ ಸ್ಥಿರವಾಗಿದೆ ಮತ್ತು ಅವರು ಆರೋಗ್ಯಕರವಾಗಿ ಬದುಕುತ್ತಿದ್ದಾರೆ.
-ಡಾ. ಶಿಶಿರ್ ಕುಮಾರ್ ಪಾತ್ರ

ಈ ಸಂದರ್ಭದಲ್ಲಿ ತಮ್ಮ ತಂಡದ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ನಾರಾಯಣ ಹೆಲ್ತ್ ಈಸ್ಟ್ ನ ಕೋಲ್ಕತ್ತಾ ಮತ್ತು ಕಾರ್ಪೊರೇಟ್ ಗ್ರೋತ್ ಇನಿಶಿಯೇಟಿವ್ ನ ನಿರ್ದೇಶಕ ಮತ್ತು ಕ್ಲಸ್ಟರ್ ಹೆಡ್ ಶ್ರೀ ಅಭಿಜಿತ್ ಸಿ.ಪಿ. ಅವರು, “ನಮ್ಮ ವೈದ್ಯರು ಕೇವಲ ಅಪರೂಪದ ಶಸ್ತ್ರಚಿಕಿತ್ಸೆ ಮಾತ್ರವೇ ಮಾಡಿಲ್ಲ, ಅತ್ಯಂತ ಅಪರೂಪದ ಮತ್ತು ತೀವ್ರತರವಾದ ಪ್ರಕರಣವನ್ನು ಯಶಸ್ವಿಗೊಳಿಸಿದ್ದಾರೆ. ಒಬ್ಬ ಯುವಕನಿಗೆ ಹೊಸ ಜೀವ ದಾನ ಮಾಡುವ ಜೊತೆಗೆ ರೋಗಿಯ ತಂದೆಯೂ ಸುರಕ್ಷಿತವಾಗಿ ಇರುವಂತೆ ನೋಡಿಕೊಂಡಿದ್ದಾರೆ. ಇಂತಹ ಸಾಧನೆಗಳು ವಿಶ್ವದ ಅತ್ಯುನ್ನತ ವೈದ್ಯಕೀಯ ಸೇವೆ ಹೊಂದಿರುವ ಪ್ರದೇಶಗಳ ಪಟ್ಟಿಯಲ್ಲಿ ಪೂರ್ವ ಭಾರತವನ್ನು ನೆಲೆಗೊಳಿಸುತ್ತದೆ” ಎಂದು ಹೇಳಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ನಾರಾಯಣ ಹೆಲ್ತ್ ನ ಗ್ರೂಪ್ ಸಿಓಓ ಶ್ರೀ ಆರ್. ವೆಂಕಟೇಶ್ ಅವರು, “ಅತ್ಯುನ್ನತ ನೈತಿಕ ಮಾನದಂಡಗಳನ್ನು ಕಾಪಾಡಿಕೊಳ್ಳುತ್ತಾ ವೈದ್ಯಕೀಯ ಸಾಮರ್ಥ್ಯದ ಗಡಿಯನ್ನು ಮೀರುವುದರ ಮೇಲೆ ನಾರಾಯಣ ಹೆಲ್ತ್‌ ನಂಬಿಕೆ ಇಟ್ಟಿದೆ. ಈ ಯಶಸ್ವಿ ಕಸಿ ಶಸ್ತ್ರಚಿಕಿತ್ಸೆಯು ನಮ್ಮ ಬಹುವಿಭಾಗೀಯ ಸಹಯೋಗ, ಅಂತಾರಾಷ್ಟ್ರೀಯ ಮಟ್ಟದ ಅತ್ಯುನ್ನತ ಪದ್ಧತಿಗಳು ಮತ್ತು ಅದ್ಭುತವಾದ ಚಿಕಿತ್ಸಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ನಮ್ಮ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ನಮ್ಮ ಮೇಲೆ ನಂಬಿಕೆ ಇಟ್ಟ ಕುಟುಂಬಕ್ಕೆ ಕೃತಜ್ಞತೆ” ಎಂದು ಹೇಳಿದರು.

ಈ ಪ್ರಕರಣವು ಈಗಾಗಲೇ ಭಾರತ ಮತ್ತು ವಿದೇಶಗಳ ವೈದ್ಯಕೀಯ ತಜ್ಞರ ಗಮನ ಸೆಳೆದಿರುವುದು ವಿಶೇಷವಾಗಿದೆ. ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್, ಮುಕುಂದಪುರ, ಕೋಲ್ಕತ್ತಾ ಕುರಿತು ಕೋಲ್ಕತ್ತಾದ ಪೂರ್ವ ಮೆಟ್ರೋಪಾಲಿಟನ್ ಬೈಪಾಸ್‌ನ ಮುಕುಂದಪುರದಲ್ಲಿರುವ 681 ಹಾಸಿಗೆಗಳ ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜೆಸಿಐ ಮತ್ತು ಎನ್.ಎ.ಬಿ.ಎಚ್ ಮಾನ್ಯತೆ ಪಡೆದಿದೆ. ಹೃದಯ ವಿಜ್ಞಾನ (ಹೃದಯ ಕಸಿ ಸಹಿತ), ಮೂತ್ರಪಿಂಡ ವಿಜ್ಞಾನ (ಮೂತ್ರಪಿಂಡ ಕಸಿ ಸಹಿತ), ಜೀರ್ಣಾಂಗ ವಿಜ್ಞಾನ (ಯಕೃತ್ತು ಕಸಿ ಸಹಿತ), ನರವಿಜ್ಞಾನ, ಸಮಗ್ರ ಕ್ಯಾನ್ಸರ್ ಆರೈಕೆ, ಆರ್ಥೋಪೆಡಿಕ್ಸ್ ಮತ್ತು ಇತರ ವಿಶೇಷತೆಗಳಲ್ಲಿ ಪೂರ್ವ ಭಾರತದ ಅತ್ಯಂತ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: Health NewsKannada News WebsiteKidneyKolkataLatest News KannadaNarayana HealthSevere Factor VII Deficiencyಕೋಲ್ಕತ್ತಾನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್ನಾರಾಯಣ ಹೆಲ್ತ್ಮುಕುಂದಪುರಮೂತ್ರಪಿಂಡಮೂತ್ರಪಿಂಡ ಕಸಿಶಸ್ತ್ರಚಿಕಿತ್ಸೆಸಿವಿಯರ್ ಫ್ಯಾಕ್ಟರ್ VII ಡಿಫಿಷಿಯೆನ್ಸಿ
Share196Tweet123Send
Previous Post

ಉಡುಪಿ | ಪ್ರಧಾನಿಯವರ ಕಾರ್ಯಕ್ರಮಕ್ಕೆ ಹೋಗ್ತೀರಾ? ಹಾಗಾದ್ರೆ ಜಿಲ್ಲಾಡಳಿತದ ಎಚ್ಚರಿಕೆ ಪಾಲಿಸಿ

Next Post

ಮೈಸೂರು-ಅಜ್ಮೀರ್, ಸಂತ್ರಾಗಾಚಿ-ಯಲಹಂಕ ಸ್ಪೆಷಲ್ ರೈಲು ಸೇವೆ ವಿಸ್ತರಣೆ | ಎಲ್ಲಿಯವರೆಗೂ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಮೈಸೂರು-ಅಜ್ಮೀರ್, ಸಂತ್ರಾಗಾಚಿ-ಯಲಹಂಕ ಸ್ಪೆಷಲ್ ರೈಲು ಸೇವೆ ವಿಸ್ತರಣೆ | ಎಲ್ಲಿಯವರೆಗೂ?

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ನನ್ನ ಬಿಪಿ ನಾರ್ಮಲ್ ಆಯ್ತು, ಹಾಗಾಗಿ ಮಾತ್ರೆ ನಿಲ್ಲಿಸಿದೆ | ಜೀವಕ್ಕೆ ಕುತ್ತು | ಅಪಾಯಕಾರಿ ತಪ್ಪು ಕಲ್ಪನೆಗಳು

ನನ್ನ ಬಿಪಿ ನಾರ್ಮಲ್ ಆಯ್ತು, ಹಾಗಾಗಿ ಮಾತ್ರೆ ನಿಲ್ಲಿಸಿದೆ | ಜೀವಕ್ಕೆ ಕುತ್ತು | ಅಪಾಯಕಾರಿ ತಪ್ಪು ಕಲ್ಪನೆಗಳು

May 17, 2026
ಭದ್ರಾ ಡ್ಯಾಂನಿಂದ ತುಂಗಭದ್ರಾ ನದಿಗೆ ನೀರು | ಎಷ್ಟು ದಿನ? ಕಾರಣವೇನು?

ಭದ್ರಾ ಡ್ಯಾಂನಿಂದ ನದಿಗೆ ನೀರು ಹರಿಸಲು ಡೇಟ್ ಫಿಕ್ಸ್ | ಯಾವತ್ತು? ಎಷ್ಟು ನೀರು? ಯಾರಿಗೆ ಪ್ರಯೋಜನ?

May 16, 2026
ಮಧ್ಯಪ್ರಾಚ್ಯದ ಉದ್ವಿಗ್ನತೆ | ಭಾರತದಲ್ಲಿ ಹಿಂಸಾಚಾರದ ಸಾಧ್ಯತೆ | ಎಲ್ಲ ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ ಪತ್ರ

ಕೇಂದ್ರ ಗೃಹ ಇಲಾಖೆ ಭರ್ಜರಿ ಬೇಟೆ | 182 ಕೋಟಿ ರೂ ಮೌಲ್ಯದ ಜಿಹಾದಿ ಡ್ರಗ್ಸ್ ಸೀಜ್

May 16, 2026
ದೇಶ ಮೊದಲು ಎಂದು ಹೇಳಿಕೊಟ್ಟ ಪಕ್ಷ ಬಿಜೆಪಿ: ಬಿ.ವೈ. ವಿಜಯೇಂದ್ರ

ದೇಶ ಮೊದಲು ಎಂದು ಹೇಳಿಕೊಟ್ಟ ಪಕ್ಷ ಬಿಜೆಪಿ: ಬಿ.ವೈ. ವಿಜಯೇಂದ್ರ

May 16, 2026
ಕೊಪ್ಪಳ | 10ನೇ ವರ್ಷದ ಮಾವು ಮೇಳಕ್ಕೆ ಜನಸಾಗರ

ಕೊಪ್ಪಳ | 10ನೇ ವರ್ಷದ ಮಾವು ಮೇಳಕ್ಕೆ ಜನಸಾಗರ

May 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL