ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಲೇಖನಿ ಮತ್ತು ಪುಸ್ತಕ ಆತ್ಮೀಯ ಗೆಳೆಯರು… ಇವನ್ನು ತಮ್ಮ ಗೆಳೆಯರಾಗಿಸಿಕೊಂಡು ತಮಗಾದ ಅನುಭವಗಳನ್ನು ಪುಸ್ತಕದೊಂದಿಗೆ ಹಂಚಿಕೊಳ್ಳುತ್ತಾ, ಸಾಲುಗಳನ್ನು ವರ್ಣಿಸುತ್ತಾ… ಇವುಗಳನ್ನೇ ಪೂಜಿಸುವ ಅದೆಷ್ಟೋ ಸಾಹಿತಿಗಳ ನಡುವೆ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಸಾಗುತ್ತಿರುವ ಯುವ ಸಾಹಿತಿ ಕೀರ್ತನ್ ಭಂಡಾರಿ ಇವರ ಬಗ್ಗೆ ಒಂದೆರಡು ನುಡಿಗಳು.
1996ರ ನವೆಂಬರ್ 20ರಂದು ಮಾಧವ ಭಂಡಾರಿ ಮತ್ತು ವತ್ಸಲ ದಂಪತಿಗಳ ಮಗನಾಗಿ ಜನಿಸಿದ ಇವರು, ಕಾವ್ಯ ಇವರ ಪ್ರೀತಿಯ ಅಕ್ಕ ಇವರ ಪ್ರೈಮರಿ ಶಿಕ್ಷಣವನ್ನು ವೆಂಕಟರಮಣ ಸ್ಕೂಲ್ ಇಲ್ಲಿ ಮುಗಿಸಿ, ಹೈಸ್ಕೂಲ್ ವಿದ್ಯೋದಯ ಸುರತ್ಕಲ್ ಮತ್ತು ಪಿಯುಸಿ ಗೋವಿಂದ ಸುರತ್ಕಲ್, ಡಿಗ್ರಿಯನ್ನು ರಾಮಕೃಷ್ಣ ಕಾಲೇಜು ಬಂಟ್ಸ್ ಹಾಸ್ಟೆಲ್’ನಲ್ಲಿ ಮುಗಿಸಿದರು.
ಇವರನ್ನು ಸಕಲಕಲಾ ವಲ್ಲಭ ಎಂದರೆ ತಪ್ಪಾಗಲಾರದು. ಸಾಹಿತ್ಯ ರಚನೆ, ನಿರೂಪಣೆ, ಸ್ಕ್ರಿಪ್ಟ್ ರೈಟಿಂಗ್, ನಟನೆ ಎಲ್ಲದರಲ್ಲೂ ಮುಂದು. ಹವ್ಯಾಸದಿಂದ ಬೀದಿ ನಾಟಕಗಳನ್ನು ಮಾಡುತ್ತಿದ್ದ ಭಂಡಾರಿ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಅಡಿಯಲ್ಲಿ ಸ್ಕ್ರಿಪ್ಟ್ ರೈಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಮೊದಲ ಬಾರಿಗೆ ಇವರು ರಚಿಸಿದ ನಾಟಕ ‘ಸಿರಿಮಂಗಲಾಂಬಿಕೆ’ಯಲ್ಲಿ ಇವರು ಬರೆದ ಡೈಲಾಗ್ ಮತ್ತು ಹಾಡುಗಳೇ ಇವರ ಸಾಹಿತ್ಯದ ಮೊದಲ ಹೆಜ್ಜೆಗಳು.
ನಂತರ ತನ್ನ 19ನೆಯ ವಯಸ್ಸಿನಲ್ಲಿ ಮೊದಲ ಬಾರಿಗೆ ತುಳು ಚಲನಚಿತ್ರ ದೊಂಬರಾಟ ಮತ್ತು ಒಂದು ಮೊಟ್ಟೆಯ ಕಥೆ ಎಂಬ ಕನ್ನಡ ಚಿತ್ರಕ್ಕೆ ಸಾಹಿತ್ಯವನ್ನು ರಚಿಸಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.
ನಂತರ ಸಾಲುಸಾಲಾಗಿ ತೊಟ್ಟಿಲು, ಉಮಿಲ್, ಕಟಪಾಡಿ ಕಟ್ಟಪ್ಪ, ಗಿರ್ ಗಿಟ್ ಮುಂತಾದವು, ಹಾಗೆ ಕನ್ನಡದಲ್ಲಿ ಅನುಕ್ತ, ಮಾಯಾಕನ್ನಡಿಗಳಿಗೂ ಸಹ ಕೆಲಸ ಮಾಡಿದ್ದಾರೆ.
ಗಿರ್ಗಿಟ್ ಎಂಬ ತುಳು ಚಿತ್ರಕ್ಕೆ ಇವರು ಬರೆದ ಬರಿ ಬರಿಟೆ ಉಂತುದೊಂಜಿ ಸೆಲ್ಫಿ ದೆಪ್ಪುಗ ಎಂಬ ಹಾಡು ಎಲ್ಲೆಡೆ ಪ್ರಸಿದ್ಧವಾಯಿತು. ಮಾಯೋದ ನಿರೆಲ್’ನ ಮಂತ್ರದ ಮೂರ್ತಿಯೆ ಈ ಹಾಡುಗಳು ಕೂಡ ಇವರಿಗೆ ಬಹಳಷ್ಟು ಯಶಸ್ಸನ್ನು ತಂದುಕೊಟ್ಟಿತು. ಅನುಕ್ತಾ ಚಿತ್ರದಲ್ಲಿ ಅವರು ಬರೆದ ಮಗ ಬಾರೋ ಎಂಬ ಹಾಡನ್ನು ಕನ್ನಡ ರಾಪರ್ ಚಂದನ್ ಶೆಟ್ಟಿ ಅವರು ಮತ್ತು ಈ ಸನಿಹ ಹಾಯಾಗಿದೆ ಎಂಬ ಹಾಡನ್ನು ವಾಸುಕಿ ವೈಭವ್ ಹಾಡಿದ್ದಾರೆ. ಈ ಹಾಡು ಕೂಡ ಬಹಳಷ್ಟು ಹೆಸರು ಮಾಡಿದೆ.
ಹಾಗೆ ಉಮಿಲ್ ತುಳು ಚಿತ್ರದಲ್ಲಿ ಪುನೀತ್ ರಾಜಕುಮಾರ್ ಹಾಡಿರುವ ರಾವೊಂದು ರಾವೊಂದು ಬತ್ತುಂಡು ಉಮಿಲ್ ನ ಸಾಹಿತಿ ಕೂಡ ಇವರೇ. ಇವರ ಊರೆಮುರುಕಡ್ ಎಂಬ ಗಿರ್ಗಿಟ್ ಚಿತ್ರದ ಹಾಡನ್ನು ಗುರುಕಿರಣ್ ಅವರು ಹಾಡಿದ್ದಾರೆ.
ಪೃಥ್ವಿ ಅಂಬರ್ ಅಭಿನಯದ ಡಿಕೆ ಬಾಸ್ ಎಂಬ ಚಿತ್ರದಲ್ಲಿ ನಾನು ಹುಡುಕುತ್ತಿರುವ ಹಾದಿ ಎಂಬ ಹಾಡನ್ನು ಸಂಜಿತ್ ಹೆಗಡೆ ಇವರು ಹಾಡಿದ್ದಾರೆ. ಇನ್ನೂ ಹಲವಾರು ಹೆಸರಾಂತ ಗಾಯಕರು ಇವರ ಸಾಹಿತ್ಯವನ್ನು ಹಾಡಿ ಹೊಗಳಿದ್ದು, ಜಯಂತ್ ಕಾಯ್ಕಿಣಿ,ರವಿ ಬಸ್ರೂರು ಅವರಂತಹ ಘಟಾನುಘಟಿಗಳು ಇವರ ಸಾಹಿತ್ಯವನ್ನು ಮೆಚ್ಚಿಕೊಂಡಿದ್ದಾರೆ. ವಿಶೇಷ ಎಂದರೆ ಇವರನ್ನು ಜೂನಿಯರ್ ಜಯಂತ್ ಕಾಯ್ಕಿಣಿ ಎಂದು ಕೂಡ ಕರೆಯುತ್ತಾರೆ.
ಇದುವರೆಗೂ ಸುಮಾರು ತುಳು ಹಾಗೂ ಕನ್ನಡದ 25 ಚಿತ್ರಗಳಿಗೆ ಸಾಹಿತ್ಯ ರಚಿಸಿರುವ ಭಂಡಾರಿ, ಹಲವಾರು ಜನ ದಿಗ್ಗಜರುಗಳಿಂದ ಶಹಬ್ಬಾಸ್ ಎನಿಸಿಕೊಂಡಿದ್ದಾರೆ.
ತನ್ನೆಲ್ಲಾ ಸಾಧನೆಗೆ ದೈವ-ದೇವರುಗಳ ಆಶೀರ್ವಾದ ತಂದೆ-ತಾಯಿಯರ ಹಾರೈಕೆ ಹಾಗೆ ಸ್ನೇಹಿತರಾದ ವಿನ್ಯಾಸ್ ಶ್ರೇಯಸ್ ಸೃಜನ್ ಇವರುಗಳ ಸಹಕಾರ ಎನ್ನುತ್ತಾರೆ ಕೀರ್ತನ್.
ಇನ್ನು ಇವರು ಸ್ಕ್ರೀನ್ ಪ್ಲೇ ಹೇಳಿರುವ ಲಾಸ್ಟ್ ಬೆಂಚ್ ಎಂಬ ಚಲನಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ. ಸಾಹಿತ್ಯ ರಚಿಸಿರುವ ಕೆಲವು ಚಿತ್ರಗಳು ಸದ್ಯದಲ್ಲೇ ತೆರೆ ಕಾಣಲಿದೆ. ಇದಕ್ಕೆಲ್ಲ ಶುಭ ಹಾರೈಸುತ್ತಾ ಇವರ ಮುಂದಿನ ಕಲಾ ಪ್ರಯಾಣ ಎಣಿಸಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನು ತಂದು ಕೊಡಲಿ ಎಂದು ಹಾರೈಸೋಣ.
Get in Touch With Us info@kalpa.news Whatsapp: 9481252093
Discussion about this post