1950ರ ಕನ್ಯಾ ಮಾಸದ ಬಹುಳ ಷಷ್ಟಿ, ಆದಿತ್ಯವಾರ ಗುಜರಾತಿನ ಒಂದು ಮೂಲೆಯಲ್ಲಿ, ಬಡ ಕುಟುಂಬವೊಂದರಲ್ಲಿ ಒಂದು ಶಿಶು ಜನಿಸುತ್ತದೆ. ಬಹುಷಃ ಆಗ ಅಂತಹ ಜ್ಯೋತಿಷ್ಯರು ಈ ಮಗುವಿನ ಭವಿಷ್ಯ ಹೇಳಿದ್ದರೋ ಇಲ್ಲವೋ ಗೊತ್ತಿಲ್ಲ. ಏನೋ ಚಹಾ ಮಾರಿ ಜೀವನ ಸಾಗಿಸಬಹುದು ಎಂದು ಊರವರು ತಿಳಿದುಕೊಂಡಿದ್ದರೂ ಇರಬಹುದೆನ್ನಿ. ಆದರೆ ಭಗವತ್ಪೇರಣೆಯೇ ಬೇರೆ.
ಪುರಾಣಗಳಲ್ಲಿಯೂ ಇಂತಹದ್ದೇ ಶಿಶುಗಳು ಜನಿಸಿ ಜಗದ್ವಿಖ್ಯಾತಿ ಪಡೆದದ್ದಿದೆ. ಭಗವಾನ್ ಶ್ರೀಕೃಷ್ಣನು ಶ್ರೀಮಂತನಾದ ವಸುದೇವ ದೇವಕಿಯ ಮಗನಾದರೂ, ಜನನ ಕಾಲಕ್ಕೆ ಹಿಂಸೆ ಅನುಭವಿಸುತ್ತಿದ್ದ ಸೆರೆಮನೆ ವಾಸವಾಗಿದ್ದ ಬಡ ದಂಪತಿಗಳ ಮಗನಾಗಿ ಜನಿಸಿದ್ದ. ಆಗಲೂ ಊರಿನವರು ವಸುದೇವ ದೇವಕಿಯರನ್ನು ಪ್ರೀತಿಸಿದ್ದರೂ,’ ಅದು ಹೋದದ್ದೆ ’ ಎಂದಿರಬಹುದು.
ಸ್ವಾಮಿ ವಿವೇಕಾನಂದರೂ ಬಡ ಮಧ್ಯಮ ಕುಟುಂಬದಲ್ಲಿ ಜನಿಸಿದ್ದರು. ಶ್ರೀಮನ್ಮಧ್ವಾಚಾರ್ಯರು ಕೂಡಾ ಬಡ ಬ್ರಾಹ್ಮಣ ಕುಟುಂಬದಲ್ಲೇ ಬಡತನದಲ್ಲೇ ಜನಿಸಿದವರು. ರಾಘವೇಂದ್ರ ಸ್ವಾಮಿಗಳೂ ಇದೇ ತರಹ. ಯಾರು ಸಮಾಜದಲ್ಲಿ ಆರ್ಥಿಕತೆಯಲ್ಲಿ, ಜಾತಿ ವ್ಯವಸ್ಥೆಯಲ್ಲಿ ಶೋಷಿತರೋ ಅವರು ಮಹಾತ್ಮರಾಗುತ್ತಾರೆ ಎಂಬುದನ್ನು ತೋರಿಸಿಕೊಟ್ಟಪರಮ ಸತ್ಯವಿದು.
ಪ್ರಭು ಶ್ರೀರಾಮ ಚಂದ್ರ ಅತೀ ಶ್ರೀಮಂತ ರಾಜನಾದರೂ ಪಿತೃವಾಕ್ಯ ಪಾಲನೆಯಲ್ಲಿ ವನವಾಸದಲ್ಲಿ ಪಡಬಾರದ ಕಷ್ಟ ಅನುಭವಿಸಿದರು. ಇವರೆಲ್ಲರೂ ಸಾಮಾನ್ಯರ ಕಣ್ಣಿಗೆ ಅತೀ ಸಾಮಾನ್ಯರಾಗಿಯೇ ಕಂಡರು. ಆದರೆ ಪ್ರಾಜ್ಞರಿಗೆ ದೇವರಾಗಿ ಕಂಡದ್ದರಿಂದಲೇ ಇಂದು ಗುಡಿಯೊಳಗಿಟ್ಟು ಪೂಜಿಸುವಂತಾಯ್ತು.
ಈಗ ನಮ್ಮ ದೇಶದ ಪ್ರಧಾನ ಸೇವಕ ನರೇಂದ್ರ ಮೋದಿಯವರು ದುಷ್ಟರ ಕಣ್ಣಿಗೆ ಪಾಪಿಯಾಗಿ, ಸಜ್ಜನರಿಗೆ ದೇವರಾಗಿ, ಪ್ರಾಜ್ಞರಿಗೆ ದೈವತ್ವ ಪಡೆಯುವವರಾಗಿ ಕಾಣುತ್ತಿದ್ದಾರೆ.
ಪ್ರಧಾನ ಸೇವಕ:
ಪ್ರಧಾನ ಸೇವಕ ಎಂಬ ಪದವನ್ನು ಸೃಷ್ಟಿಸಿದ್ದು ಮೋದಿಯೇನಲ್ಲ. ಅದು ಮೊದಲೂ ಇತ್ತು. ಯಾಕೆ ಭಾರತದ ಹಿಂದಿನ ಪ್ರಧಾನಿಗಳು ಇದನ್ನು ಅನುಷ್ಟಾನಿಸಿಕೊಳ್ಳಲಿಲ್ಲ. ಹಾ.. ಅಟಲ್ ಜೀಗೆ ಗೊತ್ತಿರಲಿಲ್ಲವೇ ಎಂದು ಕೇಳಬಹುದು. ಅದಕ್ಕೆ ಉತ್ತರ ಇಲ್ಕಿದೆ. ಜೈ ಕಿಸಾನ್ ಜೈ ಜವಾನ್ ಎಂದು ಪಾಠ ಕಲಿಸಿದ ಹಿಂದೂ ರಾಷ್ಟ್ರ ನಿರ್ಮಾಣದ ಉದ್ದಿಶ್ಯದಲ್ಲಿ ಪ್ರಧಾನ ಸೇವಕನನ್ನು ತಯಾರು ಮಾಡಿದ ಗುರು ಅವರು. ಅವರ ಮಾರ್ಗದರ್ಶನದ ಫಲದಲ್ಲಿ ಮೋದಿಯವರೊಳಗೆ’ ಪ್ರಧಾನ ಮಂತ್ರಿಯಾದರೂ ನೀನು ಪ್ರಜೆಗಳ ಪ್ರಧಾನ ಸೇವಕ’ ಎಂದು ಹೇಳಿಸಿತು. ಒಂದು ಹಂತ ತಲುಪಲು ಅನೇಕ ಹಂತಗಳು ಬೇಕು ಎಂಬುದಕ್ಕಾಗಿಯೇ ಚರಿತ್ರೆಯ ಅವಲೋಕನ ಬೇಕು.
ಯಾಕೆ ಮನ್ಮೋಹನ ಸಿಂಗರಲ್ಲಿ ಈ ಶಬ್ದಗಳು ಮರುಕಳಿಸಲಿಲ್ಲ.? ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಇದನ್ನು ತಮ್ಮೊಳಗೆ ಅನುಷ್ಟಾನಿಸಿಕೊಳ್ಳಲಿಲ್ಲ? ಅವರೊಳಗಿನ ‘ಅಹಂ’ ಹಾಗೆ ಹೇಳಲು ಬಿಡಲಿಲ್ಲ. ಯಾಕೆಂದರೆ ಇಂತಹ ವಾಖ್ಯಗಳನ್ನು ತಿಳಿಸುವ ಗುರುಗಳು ಅವರಲ್ಲಿರಲಿಲ್ಲ. ವಿದೇಶೀ ಸಂಸ್ಕಾರಗಳನ್ನು ಪಡೆದವರು Hi, Hello ಬಿಟ್ಟರೆ ಇನ್ನೇನು ಹೇಳಬಹುದು? ಆದರೆ ಮೋದಿಯವರು ಬಾಲ್ಯದಿಂದಲೇ ಸಂಘದ ಕಚೇರಿಯಲ್ಲಿ ಪೊರಕೆ ಹಿಡಿದು ಕಸ ಹೊಡೆಯುವಾಗ ಇದನ್ನೆಲ್ಲ ಅರಿತುಕೊಂಡರು.
ಭಾರತದ ಅತ್ಯುನ್ನತ ಹುದ್ದೆ ನನ್ನ ವಂಶದ್ದೇ ಆಗಿದೆ, ಇದು ನನಗೇ ಸಲ್ಲುವಂತಹ ಪೀಠ ಎಂಬ ‘ಅಹಂ’ ಇದ್ದವರಿಗೆ ಇಂತಹ ಪ್ರಧಾನ ಸೇವಕನೆನ್ನುವ ಮಾತು ಬರುವುದಕ್ಕೆ ಸಾಧ್ಯವಿಲ್ಲ. ಮೋದಿಯವರು ಇಡೀ ದೇಶದ ಪ್ರಜೆಗಳೇ ನನ್ನ ವಂಶ. ಅವರೇ ನನ್ನನ್ನು ಈ ಪೀಠಕ್ಕೇರಿಸಿದವರು, ಪ್ರಜೆಗಳ ಪೀಠವಿದು. ನನ್ನದ್ದಲ್ಲ ಎಂಬ ಪಾಠ ಕೇಳಿಸಿಕೊಂಡದ್ದರಿಂದಲೇ ನಾನು ದೇಶದ ಪ್ರಧಾನ ಸೇವಕ ಎಂದರು.
ಸ್ವಚ್ಛತೆಯ ಬಗ್ಗೆ ಗಾಂಧಿಯವರ ಪಾಠ ಕೇಳಿಸಿಕೊಂಡ ವಿದೇಶೀ ಅನುಕರಣೆಯ ಜನರಿಗೆ ಸ್ವಚ್ಛತೆಯ ಬಗ್ಗೆ ಕಾಳಜಿ ಎಲ್ಲಿದೆ. ಬೀದಿಯ ಕಸ ಗುಡಿಸಿ ಸ್ವಚ್ಛತೆಯ ಪಾಠ ಹೇಳಿದ ಗಾಂಧೀಜಿಯ ಹೆಸರು ಬೇಕು. ಆದರೆ ಅನುಷ್ಠಾನ ಬೇಡ. ಈಗ ಈ ಪ್ರಧಾನ ಸೇವಕ ಬೀದಿಯ ಕಸ ಗುಡಿಸಿ ದೊಡ್ಡ ಅಭಿಯಾನಕ್ಕೆ ಚಾಲನೆ ನೀಡಿ ಸ್ವಚ್ಛ ಭಾರತದ ಕಲ್ಪನೆ ನೀಡಿದರು. ಆಳುಗಳು ಶ್ರದ್ಧೆಯಿಂದ ಕೆಲಸ ಮಾಡಬೇಕಾದರೆ ಯಜಮಾನನೂ ಅವರ ಜತೆ ಕೆಲಸಮಾಡಬೇಕಂತೆ. ಹಾಗೆಯೇ ಸೇವಕರಿಗೆ ಪ್ರಧಾನ ಸೇವಕನಾಗಿ ಸ್ವಚ್ಛಭಾರತದ ಸಂಕಲ್ಪಕ್ಕೆ ಮೋದಿ ಚಾಲನೆ ನೀಡಿದರು. ಇದಕ್ಕೆಲ್ಲ ದೈವಬಲವಿದ್ದಾಗ ದೈವಪ್ರೇರಣೆಯಾಗುತ್ತದೆ.
ನರೇಂದ್ರ ದಾಮೋದರ ದಾಸ್ ಮೋದಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಸ್ವಚ್ಛ ಭಾರತದ, ಧರ್ಮದ ಪುನರುತ್ಥಾನದ ಸಂಕಲ್ಪದ ಮೂಲ ಶುಭಕೋರೋಣ.
ಶತಸಂವತ್ಸರಂ ದೀರ್ಘಮಾಯುರಾರೋಗ್ಯಂ ಎಂದು ಪ್ರಾರ್ಥಿಸೋಣ.
-ಪ್ರಕಾಶ್ ಅಮ್ಮಣ್ಣಾಯ,
ಜ್ಯೋರ್ತಿವಿಜ್ಞಾನಂ
Discussion about this post