ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದಕ್ಷಿಣ ಆಫ್ರಿಕಾದಲ್ಲಿ #SouthAfrica ಕೊರೋನಾ ನಂತರ ನೂತನ ವೈರಸ್ ಇನ್ನಿಲ್ಲದಂತೆ ಕಾಡುತ್ತಿದ್ದು, ಇದು ಬೇರೆ ದೇಶಗಳಿಗೂ ಸಹ ಹರಡುವ ಭೀತಿ ಎದುರಾಗಿದೆ.
ದಕ್ಷಿಣ ಆಫ್ರಿಕಾದ ಉಗಾಂಡಾದಲ್ಲಿ #Uganda ಈ ನೂತನ ಮಾರಕ ಕಾಯಿಲೆ ಬಾಧಿಸುತ್ತಿದ್ದು, ಇದರ ಹೆಸರು `ಡಿಂಗಾ ಡಿಂಗಾ’ #DingaDinga ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ವರದಿಗಳಂತೆ ದಕ್ಷಿಣ ಆಫ್ರಿಕಾದಲ್ಲಿ ಈ ಕಾಯಿಲೆಗೆ ಈವರೆಗೂ 300 ಜನರು ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆ ದೇಶದಲ್ಲಿ ಈ ಕಾಯಿಲೆಗೆ ಈಗಾಗಲೇ ಮದ್ದು ಕಂಡು ಹಿಡಿಯುವ ಪ್ರಕ್ರಿಯೆಗಳು ಆರಂಭವಾಗಿವೆ.

ಡಿಂಗಾ ಡಿಂಗಾ ಕಾಯಿಲೆಯ ಟಾರ್ಗೆಟ್ ಬಹುತೇಕ ಮಹಿಳೆಯರೇ ಆಗಿದ್ದಾರೆ.
ಹೌದು… ವರದಿಗಳ ಪ್ರಕಾರ ಈ ನಿಗೂಢ ಕಾಯಿಲೆಗೆ #MysteriousDisease ಬಂಡಿಬುಗ್ಯೋ ಜಿಲ್ಲೆಯಲ್ಲಿ ಬಹುತೇಕ ಮಹಿಳೆಯರು ಹಾಗೂ ಹುಡುಗಿಯರೇ ತುತ್ತಾಗುತ್ತಿದ್ದಾರೆ.
Also read: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ
ಡಿಂಗಾ ಡಿಂಗಾದ ಲಕ್ಷಣಗಳೇನು
ಡಿಂಗಾ ಡಿಂಗಾದಿಂದ ಬಳಲುತ್ತಿರುವ ಜನರು ಹಲವಾರು ರೋಗಲಕ್ಷಣಗಳನ್ನು ಹೊಂದಿರುತ್ತಾರೆ ಎಂದು ವರದಿಯಾಗಿದೆ.
ಪ್ರಮುಖವಾಗಿ, ದೇಹ ನಡುಗುವಂತೆ ಅಥವಾ ನೃತ್ಯ ಮಾಡುವಂತೆ ಅಲುಗಾಡುವುದು, ಜ್ವರ, ತೀವ್ರ ದೌರ್ಬಲ್ಯ, ಸುಸ್ತು, ಪಾರ್ಶ್ವವಾಯುವಿನ #paralysis ಸಂವೇದನೆಯಿಂದ ಬಳಲುತ್ತಾರೆ.
ಆರೋಗ್ಯ ಅಧಿಕಾರಿಗಳು ಹೇಳೋದೇನು?
ಆರೋಗ್ಯಾಧಿಕಾರಿಗಳು ಡಿಂಗಾ ಡಿಂಗಾಗೆ #DancingDisease ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ರೋಗಿಗಳ ಮಾದರಿಗಳನ್ನು ಸಂಪೂರ್ಣ ಪರೀಕ್ಷೆಗಾಗಿ ಉಗಾಂಡಾದ ಆರೋಗ್ಯ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ.
ಏತನ್ಮಧ್ಯೆ, ಡಾ. ಕ್ರಿಸ್ಟೋಫರ್ ಗಿಡಮೂಲಿಕೆ ಔಷಧಿಗಳನ್ನು ತೆಗೆದುಕೊಳ್ಳದಂತೆ ಸಲಹೆ ನೀಡುತ್ತಾರೆ. ಏಕೆಂದರೆ ಈ ವೈದ್ಯಕೀಯ ಸ್ಥಿತಿಗೆ ಅವು ಉಪಯುಕ್ತವೆಂದು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post