ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಇಂದು ವೈಶಾಖ ಮಾಸದ ಶುಕ್ಲ ದಶಮಿ-ಹರೇ ಶ್ರೀನಿವಾಸ- ಕಲಿಯುಗದಲ್ಲಿ ಕೋಟಿ ಕೋಟಿ ಭಕ್ತರ ಇಷ್ಟಾರ್ಥಗಳನ್ನು ಅನವರತ ಪೂರೈಸುತ್ತಿರುವ ಆಪತ್ಭಾಂದವ ತಿರುಪತಿಯ ಶ್ರೀನಿವಾಸ ಸ್ವಾಮಿ ಪದ್ಮಾವತಿ ದೇವಿಯೊಡನೆ ಕಲ್ಯಾಣವಾದ ಪುಣ್ಯದಿನ.
ಶ್ರೀನಿವಾಸ ದೇವರ ಅಪರಿಮಿತ ಭಕ್ತರಾದ ಬೆಂಗಳೂರಿನ ಫಣೀಂದ್ರ ಕೃಷ್ಣ ರಾವ್ ಅವರ ಮನೆಯಲ್ಲಿ ಲೋಕ ಕಲ್ಯಾಣಾರ್ಥಕ್ಕಾಗಿ ಕಾಷ್ಠದ ವಿಗ್ರಹ ಶ್ರೀನಿವಾಸ ಸ್ವಾಮಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಶ್ರೀನಿವಾಸನಿಗೆ ಬೆಳ್ಳಿ ಕಿರೀಟ ತೊಡಸಿ ವಿಶೇಷವಾದ ಹೂವಿನ ಅಲಂಕಾರ ಮಾಡಿ ಲೋಕ ಕಲ್ಯಾಣಾರ್ಥಕ್ಕಾಗಿ ಕಾಷ್ಠದ ವಿಗ್ರಹ ಶ್ರೀನಿವಾಸ ಸ್ವಾಮಿಗೆ ವಿಶೇಷ ಪೂಜೆ ನೆರವೇರಿತು.
ಕೃಷ್ಣರಾವ್ ಹಾಗೂ ಹೇಮಾ ದಂಪತಿಗಳಿಗೆ ಶ್ರೀನಿವಾಸನ ಆರಾಧನೆ-ಉಪಾಸನೆ ಎಂದರೆ ಬಹಳ ಪ್ರಿಯ!
ಬೆಂಗಳೂರಿನ ಶ್ರೀನಿವಾಸ ನಗರದ ಇವರ ಮನೆಯಲ್ಲಿ ಸುಮಾರು ನೂರಾ ಐವತ್ತು ವರ್ಷಗಳಿಂದ ಅರ್ಥತ್ ನಾಲ್ಕು ತಲೆಮಾರುಗಳಿಂದ ಪೂಜೆಗೊಳ್ಳುತ್ತಿರುವ ಶ್ರೀಶ್ರೀನಿವಾಸ ದೇವರು ನೆಲೆಸಿದ್ದಾನೆ.
ಅವರ ಹಿರಿಯರು ಎಂದರೆ ಅವರ ತಾತನವರ ತಾತಾ ಭೀಮಸೇನರಾವ್ ಮತ್ತು ಯಮುನಾಬಾಯಿ ಯವರು ಸುಮಾರು 1880 ನೆಯ ಇಸವಿ ಸುಮಾರಿನಲ್ಲಿ 12 ಬಾರಿ ತಿರುಪತಿಯ ಯಾತ್ರೆ ಕೈಗೊಂಡಿದ್ದರು.
12ನೆಯ ಬಾರಿ ತಿರುಪತಿಯ ಯಾತ್ರೆ ಮುಗಿಸಿ ಬರುವಾಗ ಅವರಿಗೆ ದಾರಿಯಲ್ಲಿ ಸಿಕ್ಕ ವಿಗ್ರಹ. ಅಂದಿನಿಂದ ಇಂದಿನವರೆಗೂ ನಂಬಿಕೆಯಿಂದ ಪೂಜೆ ಮಾಡಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಫಣೀಂದ್ರ ಕೃಷ್ಣ ರಾವ್.
ಭೀಮಸೇನ ರಾವ್ ಮತ್ತು ಯಮುನಾ ಬಾಯಿ ದಂಪತಿಗಳು 12 ಬಾರಿ ತಿರುಪತಿಯ ಯಾತ್ರೆಯನ್ನು ಮಾಡಿ ಶ್ರೀನಿವಾಸ ದೇವರ ಅನುಗ್ರಹದಿಂದ ಬೆಟ್ಟ ಹತ್ತಿ ದೇವರ ದರ್ಶನ ಮಾಡಿ ಪುನಃ ಹಿಂದಿರುವಾಗುವಾಗ ರಾತ್ರಿ ಆಗಿತ್ತು. ಅಲ್ಲಿ ಬೆಟ್ಟದಲ್ಲಿ ಸಹಸ್ರ ಸಂಖ್ಯೆಯಲ್ಲಿ ಇದ್ದ ಭಕ್ತರ ಜೊತೆ ಇವರು ಉಳಿದುಕೊಂಡು ತುಂಬಾ ದಣಿವಾದ ಕಾರಣ ನಿದ್ರೆಗೆ ಜಾರಿದಾಗ ಯಮುನಾಬಾಯಿಯವರಿಗೆ ನಿಮ್ಮ ಯಾತ್ರೆ ಪೂರ್ಣವಾಗಿದೆ ಎಂದು ಭಗವಂತನ ಸ್ವಪ್ನ ಸೂಚನೆ ಆಯಿತು.
ಮರುದಿನ ಬೆಳಗ್ಗೆ ಕಾಲ್ನಡಿಗೆಯಲ್ಲಿ ಅದನ್ನೇ ಯೋಚಿಸುತ್ತಾ ಹೊರಟ್ಟಿದ್ದ ಇವರಿಗೆ ದಟ್ಟ ಕಾಡಿನನಲ್ಲಿ ತಿಮ್ಮಪ್ಪನ ಕಾಷ್ಠದ ವಿಗ್ರಹ ಅವರಿಗೆ ದೊರಕುತ್ತದೆ. ಅಂದಿನಿಂದ ಇಂದಿನವರೆಗೂ ವಂಶಪಾರಂಪರ್ಯವಾಗಿ ಮನೆಯಲ್ಲಿಯೇ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.
ಶ್ರೀನಿವಾಸ ದೇವರ ಕಾಷ್ಠದ ವಿಗ್ರಹದ ಬಗ್ಗೆ
ಈ ವಿಗ್ರಹ ಕಾಷ್ಠದ ವಿಗ್ರಹ, ಕಪ್ಪು ಮರದ ವಿಗ್ರಹವಾಗಿದೆ. ಚತುರ್ಭುಜದ ಈ ಮೂರ್ತಿಯಲ್ಲಿ ಮೇಲಿನ ಕೈಯಲ್ಲಿ ಚಕ್ರ ಮತ್ತು ಶಂಖಗಳು ಮತ್ತು ಕೆಳಗಿನ ಕೈ ಒಂದು ಕಟಿಯಲ್ಲಿ ಇತ್ತೂ ಇನ್ನೊಂದು ಕೈಯಿಂದ ಅಭಯ ಕೊಡುವಂತೆ ಇದೆ. ಕಾಲುಗಳು ಮತ್ತು ದೇವರ ಉಂಗುಷ್ಟಗಳನ್ನು ನೋಡಬಹುದು. ಜೊತೆಗೆ ಆಭರಣಗಳ ರೀತಿ ಕಾಷ್ಠದ ವಿಗ್ರಹದಲ್ಲೇ ಕೊರಳಿಗೆ ಸರ, ಸೊಂಟದ ಪಟ್ಟಿ ಮತ್ತು ದೇವರಿಗೆ ಉಡಿಸಿದ ಪೀತಾಂಭರ ರೀತಿಯ ಕೆತ್ತನೆ ಕಾಣಬಹುದು. ಸುಮಾರು 8 ಇಂಚು ಅಥವಾ ಸುಮಾರು 20 ಸೆಮೀ ಎತ್ತರವಿದೆ.
ವೈಯುಕ್ತಿಕವಾಗಿ ಮತ್ತು ಬುದ್ದಿ ತಿಳಿದ ದಿನದಿಂದ ಶ್ರೀನಿವಾಸನ ವಿಗ್ರಹವನ್ನು ಹೆಚ್ಚು ಇಷ್ಟ ಪಟ್ಟು ನಿತ್ಯ ಪೂಜೆ ಮಾಡುತ್ತಿದ್ದೇನೆ ಎನ್ನುತ್ತಾರೆ ಫಣೀಂದ್ರ ಕೃಷ್ಣ ರಾವ್.
ನವರಾತ್ರಿಯಲ್ಲಿ ವಿಶೇಷ ಅಲಂಕಾರಗಳು
ಮನೆಯಲ್ಲಿ ನವರಾತ್ರಿಯ ಹತ್ತು ದಿನಗಳು ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ. ಅರಿಶಿನ, ಚಂದನ, ಗೆಜ್ಜೆ ವಸ್ತ್ರ, ನಾರಾಯಣ ಅಲಂಕಾರ, ಧನ್ವಂತರಿ ಅಲಂಕಾರ, ವಿಠಲ ಅಲಂಕಾರ ಎಲ್ಲವನ್ನು ಕಾಷ್ಠದ ವಿಗ್ರಹ ಶ್ರೀನಿವಾಸನಿಗೆ ಮಾಡುತ್ತಾರೆ.
ಎಲ್ಲಾ ವಿಷ್ಣುವಿನ ರೂಪದಲ್ಲಿ ಶ್ರೀನಿವಾಸನ ನೋಡಬೇಕೆಂಬ ಆಸೆಯಿಂದ ಮತ್ತು ಭಗವದ್ ಪ್ರೇರಣೆಯಿಂದ ಮಾಡುತ್ತಾ ಇದ್ದಾರೆ. ಶ್ರಾವಣ ಶನಿವಾರಗಳು ಮತ್ತು ವೈಶಾಖ ಮಾಸ, ನವರಾತ್ರಿಗಳಲ್ಲಿ ಶ್ರೀನಿವಾಸ ಕಲ್ಯಾಣ, ಪಾರಾಯಣ ನಡೆಯುತ್ತದೆ.
ಇವರಿಗೆ ವೈಯುಕ್ತಿಕವಾಗಿ ಆಧ್ಯಾತ್ಮದ ಹಾದಿಯಲ್ಲಿ ಆಸಕ್ತಿ ಇರುವುದರಿಂದ, ನಮ್ಮ ಸನಾತನ ಪವಿತ್ರ ಗ್ರಂಥಗಳಾದ ಶ್ರೀ ರಾಮಾಯಣ, ಮಹಾಭಾರತ ಮತ್ತು ಶ್ರೀ ಮದ್ಭಾಗವತಗಳನ್ನೂ ದಿನವು ಶ್ರವಣ ಮಾಡಬೇಕೆಂಬ ನಿಯಮವಿದೆ.
ಆದರೆ ಇಂದಿನ ಯಾಂತ್ರಿಕ ಜೀವನ ಮತ್ತು ವ್ಯಾವಹಾರಿಕ ಜೀವನದಿಂದ ಅವರಿಗೆ ಅಷ್ಟು ಸಮಯವಿಲ್ಲ, ಆದ ಕಾರಣ ಗುರುಗಳ ಅನುಗ್ರಹದಿಂದ ತಿಳಿದ ಮಟ್ಟಿಗೆ ಸರಳ ಭಾಷೆಯಲ್ಲಿ ಎರಡರಿಂದ ಮೂರು ನಿಮಿಷ ಓದುವ ಹಾಗೆ ಸಣ್ಣ ಲೇಖನಗಳನ್ನು ಬರೆಯುತ್ತಿದ್ದೇನೆ ಎನ್ನುತ್ತಾರೆ.
ಆಧ್ಯಾತ್ಮವೆಂಬುದು ಅಮೃತದ ಸಾಗರವಿದ್ದಂತೆ, ಆ ಸಾಗರವನ್ನು ನೋಡುತ್ತಿದ್ದೇವೆ ಮತ್ತು ಆ ಒಂದು ಹನಿ ಗಾಳಿಯಲ್ಲಿ ಸೋಕಿದ್ದರಿಂದ ಆ ಸವಿಯನ್ನು ಸ್ವೀಕರಿಸಬೇಕು ಮತ್ತು ಜ್ಞಾನರ್ಜನೆಯಿಂದ ಮಾತ್ರ ನಮ್ಮ ಉನ್ನತಿ ಮತ್ತು ಎಲ್ಲರ ಉನ್ನತಿ ಎಂಬುದು ನಂಬಿಕೆ.
ಭಗವಂತನಿಗೆ ಶ್ರೀಗಂಧ ಲೇಪನ ಬಗ್ಗೆ
ವೈಶಾಖ ಮಾಸ ಬಿಸಲಿನ ಜಳ ಹೆಚ್ಚಿರುತ್ತದೆ. ಭಗವಂತನಿಗೆ ನಿತ್ಯವೂ ಗಂಧ ಸಮರ್ಪಣೆ ಮಾಡಬೇಕು ಎಂಬ ಶಾಸ್ತ್ರದ ನಿಯಮ. ಆದರೂ ಈ ವೈಶಾಖ ಮಾಸದಲ್ಲಿ ಪ್ರತಿನಿತ್ಯ ಭಗವಂತನಿಗೂ, ಎಲ್ಲರಿಗೂ ಗಂಧ ಹಚ್ಚಬೇಕು ಮತ್ತು ಬೀಸಣಿಗೆಯಿಂದ ಬೀಸಿದರೆ ಅವರಲ್ಲಿರುವ ಪರಮಾತ್ಮ ತೃಪ್ತನಾಗುತ್ತಾನೆ ಎಂಬ ನಂಬಿಕೆ. ಆದ್ದರಿಂದ ಈ ಅಕ್ಷಯ ತೃತೀಯದ ಒಂದು ದಿನವಾದರೂ ಪರಮಾತ್ಮನಿಗೆ ಸಮರ್ಪಣೆ ಮಾಡಿದರೆ ಅಂದು ಅಕ್ಷಯ ಫಲ ಬರುತ್ತದೆ ಎಂಬ ನಂಬಿಕೆ. ಇದರಿಂದ ಎಲ್ಲರಿಗೂ ಒಳ್ಳೆಯ ನೆಮ್ಮದಿ ಮತ್ತು ಆರೋಗ್ಯ ದೊರಕಲಿ ಎಂಬ ಭಗವಂತನ ಪ್ರಾರ್ಥನೆಯಿಂದ ವಿಶೇಷವಾಗಿ ಗಂಧಲೇಪನ ಅಲಂಕಾರ ಮಾಡಿದ್ದು.
ಶ್ರೀನಿವಾಸನ ದರ್ಶನ – ಸತತ 24 ತಿಂಗಳು
ಭಗವದ್ ಅನುಗ್ರಹದಿಂದ ಒಂದು ಸಂಕಲ್ಪ ಮಾಡಿದ್ದೇನೆ, ಕೇಶಾವದಿ 24 ಚತುರ್ವಂಶತಿ ರೂಪಗಳನ್ನು ಶ್ರೀನಿವಾಸನಲ್ಲಿ ದರ್ಶನ ಮಾಡಬೇಕೆಂದು ಸಂಕಲ್ಪಿಸಿ, ಪ್ರತಿ ತಿಂಗಳು ತಿರುಪತಿಯ ಯಾತ್ರೆ ಮತ್ತು ಇದುವರೆಗೂ ದೇವರ ದಯೆಯಿಂದ 14 ತಿಂಗಳು ದರ್ಶನವಾಗಿದೆ.
ಈಗ ವಿಶ್ವ ವ್ಯಾಪಿ ಕೊರೋನಾ ಎಂಬ ಪೆಡಂಭೂತ ಕಾಡುತ್ತಿದ್ದು ಇನ್ನೂ 10 ತಿಂಗಳು ಶ್ರೀನಿವಾಸನ ದರ್ಶನಕ್ಕೆ ತಿರುಪತಿಗೆ ಹೋಗಿ ಬರಬೇಕು, ಕೊರೋನಾ ಎಂಬ ಕರಿ ಛಾಯೆ ದೇಶದಿಂದ ತೊಲಗಿದ ಮೇಲೆ ಮತ್ತೆ ಉಳಿದ 10 ತಿಂಗಳ ಸೇವೆಯನ್ನು ಪೂರೈಸಲು ಭಗವಂತ ಶಕ್ತಿ ನೀಡಬೇಕು ಎನ್ನುತ್ತಾರೆ ಫಣೀಂದ್ರ ಕೃಷ್ಣ ರಾವ್.
ಧಾರ್ಮಿಕ ನಂಬಿಕೆ ಮತ್ತು ಆಚರಣೆ ಬಗ್ಗೆ
ಮನೆಯಲ್ಲಿ ಸ್ವಲ್ಪ ಧಾರ್ಮಿಕ ವಾತಾವರಣವಿತ್ತು. ವೈಯುಕ್ತಿಕವಾಗಿ ಆಚರಣೆ ಪ್ರೀತಿ ಮತ್ತು ನಂಬಿಕೆ ಬಂದದ್ದು ಬಿಕಾಂ ಮುಗಿಸಿದ ಮೇಲೆ ಒಮ್ಮೆ ಭಾಗವತ ಪ್ರವಚನ ಕೇಳಿದ್ದು ಮತ್ತು ಮನೆಯಲ್ಲಿಯಿದ್ದ ಶ್ರೀಮದ್ಭಾಗವತ ಪುಸ್ತಕ ಓದಿದ ಮೇಲೆ ಒಂದು ರೀತಿಯ ದೈವಿಕ ಅನುಭವವಾಯಿತು. ಅಲ್ಲಿಂದ ಭಗವಂತನಲ್ಲಿ ಭಕ್ತಿ ಬರಲು ಪ್ರಾರಂಭವಾಯಿತು.
ಶ್ರೀನಿವಾಸನಲ್ಲಿ ವಿಶೇಷವಾಗಿ ಪ್ರೀತಿ ಹಾಗೂ ಅವನ ಆರಾಧನೆ ಏತಕ್ಕೆ
ನಮ್ಮ ಮನೆಯ ದೇವರು ಶ್ರೀಶ್ರೀನಿವಾಸದೇವರು ಮತ್ತು ನಮ್ಮ ಅಜ್ಜ ಮತ್ತು ಅಜ್ಜಿ ಶ್ರೀನಿವಾಸನ ಆರಾಧಕರು ಜೊತೆಗೆ ನಮ್ಮ ತಂದೆ ತಾಯಿಯರು ಶ್ರೀನಿವಾಸ ದೇವರ ಸ್ತೋತ್ರ ಮತ್ತು ಶ್ರೀನಿವಾಸ ಕಲ್ಯಾಣದ ಕಥೆಗಳನ್ನು ಚಿಕ್ಕಂದಿನಿಂದ ಹೇಳುತ್ತಿದ್ದರು. ಜೊತೆಗೆ ರಾಮಾಯಣ ಭಾರತ ಮತ್ತು ಭಾಗವತದ ನೀತಿಕಥೆಗಳನ್ನು ನಮ್ಮ ತಾಯಿಯವರು ಹೇಳುತ್ತಿದ್ದರು. ಇದೆಲ್ಲದರ ಪ್ರಭಾವದಿಂದ ಭಕ್ತಿ ಮೂಡಿತು. ಜೊತೆಗೆ ಪರಮಾತ್ಮನ ಆರಾಧನೆಯಿಂದ ಒಂದು ನೆಮ್ಮದಿ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ನಿಮಗೆ ಆಧ್ಯಾತ್ಮಿಕ ಕ್ಷೇತ್ರಕ್ಕೆ ಬರಲು ಪ್ರೇರಣೆ
ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರೇರಣೆ ಆದವರು ಕೆ.ಎಂ. ಶೇಷಗಿರಿ ಅವರು. ಅವರು ಮಾಡಿದ ಪಾಠ ಮತ್ತು ಆಶೀರ್ವಾದ ನನಗೆ ಈ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸ್ಪೂರ್ತಿಯಾಗಿ ಹೆಚ್ಚಿನ ಅಧ್ಯಯನಕ್ಕೆ ಆಸಕ್ತಿ ಬರಲು ಕಾರಣವಾಗಿದೆ. ಅವರು ಇರುವುದು ಸೀತಾ ಸರ್ಕಲ್ ಹತ್ತಿರ. ಅವರ ಮನೆಯಲ್ಲೇ ಆಸಕ್ತಿ ಇರುವವರಿಗೆ ಮಾತ್ರ ಪಾಠಗಳನ್ನೂ ಮಾಡುತ್ತಾರೆ.
Get in Touch With Us info@kalpa.news Whatsapp: 9481252093
Discussion about this post