ಹೊಡೆದು ಬಡಿದು, ಬುದ್ದಿ ಹೇಳಿ ಗೋ ಹತ್ಯೆಯನ್ನು, ಗೋ ಭಕ್ಷಣೆ ನಿಲ್ಲಿಸಲು ಸಾಧ್ಯವೇ ಇಲ್ಲ. ಅದಕ್ಕೆ ಇರುವ ದಾರಿ ಒಂದೆ. ಕಾನೂನಾತ್ಮಕವಾಗಿ ಗೋಹತ್ಯೆ ನಿಷೇಧ ಮಾಡಬೇಕು. ಅದು ಕೂಡಾ ಅಸಾಧ್ಯ. ನಮ್ಮ ಆಹಾರ ಎಂದು ಹಾಹಾಕಾರ ಹಾಕುವವರು ಅನೇಕರಿದ್ದಾರೆ.
ಮಾನಸಿಕ ಭಯ ಹುಟ್ಟಿಸಬಹುದಾ? ಅದೋ ಗೋ ಹತ್ಯೆಯ ಪರಿಣಾಮದಿಂದ ಪ್ರವಾಹ ವಿಕೋಪಗಳಾಯ್ತು, ನಿಮ್ಮ ಪೀಳಿಗೆಗೆ ತೊಂದರೆ ಇತ್ಯಾದಿ ಹೇಳಿದರೆ, ಈ ಗೋ ಮಾಂಸ ಪ್ರಿಯರು, ‘ಹೋಗಯ್ಯ, ದೊಡ್ಡ ವೇದಾಂತ ನಿನ್ನದು’ ಎಂದು ಜಗಳಕ್ಕೆ ನಿಂತಾರು. ಹಾಗಾಗಿ ಅದೂ ನಿಷ್ಪ್ರಯೋಜನ. ಹಾಗಾದರೆ ನಿಲ್ಲಿಸುವುದು ಸಾಧ್ಯ ಇಲ್ಲವೇ. ಯಾಕಿಲ್ಲ. ಮನಸ್ಸು ಮಾಡಿದರೆ ಬತ್ತಳಿಕೆಯಲ್ಲಿ ಒಂದು ಪ್ರಭಲಾಸ್ತ್ರವಿದೆ. ಯಾವುದದು?
ಏನದು ಉಪಾಯ?
ಬಹಳ ಸುಲಭ. ಗೋವನ್ನು ರಾಷ್ಟ್ರಪ್ರಾಣಿ ಎಂದು ಘೋಷಣೆ ಮಾಡಿದರಾಯ್ತು. ಕ್ರೂರ ಮೃಗ ಹುಲಿಯನ್ನು ರಾಷ್ಟ್ರ ಪ್ರಾಣಿ ಎಂದು ಘೋಷಿಸಬಹುದಾದರೆ, ಕ್ಷೀರ ನೀಡಿ ಸಲಹುವ ಗೋ ಮಾತೆಯನ್ನು ಯಾಕೆ ರಾಷ್ಟ್ರ ಪ್ರಾಣಿಯನ್ನಾಗಿ ಘೋಷಿಸಬಾರದು? ಈಗ ಹುಲಿ, ನವಿಲು ಕೊಂದರೆ ಏನಾಗುತ್ತೋ ಹಾಗೆಯೇ ಗೋವನ್ನು ಕೊಂದರೆ ಅಪರಾಧವಾಗಬೇಕು. ಈಗ ಗೋಹತ್ಯೆಯನ್ನು ನಿಲ್ಲಿಸಲು ಹೋದವರೇ ಪೆಟ್ಟು ತಿನ್ನುತ್ತಾರೆ. ರಾಷ್ಟ್ರ ಪ್ರಾಣಿಯೆಂದು ಘೋಷಿಸಿದರೆ ಒಬ್ಬ ಸಾಮಾನ್ಯ ವ್ಯಕ್ತಿಯೂ ಕೇವಲ ಒಂದು ಕರೆಯ ಮೂಲಕ ಗೋ ಹಂತಕರಿಗೆ ಶಿಕ್ಷೆ ವಿಧಿಸುವಂತೆ ಮಾಡಬಹುದು.
ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿ ನಮ್ಮದೇ ಸಂವಿಧಾನ ರಚನೆಯಾಗಿ ಅಸ್ಥಿತ್ವಕ್ಕೆ ಬಂದಾಗಲೇ ಇದನ್ನು ಮಾಡಬೇಕಿತ್ತು. ಕ್ರೂರ ಮೃಗವಾದ ಹುಲಿಯನ್ನೇ ಚಲಾವಣೆಯ ನೋಟಿನಲ್ಲಿ ಮುದ್ರಿಸಿದರು. ಅಂದರೆ ಧನ ತುಂಬಿದಾಗ ಹುಲಿಯಂತೆ ಕ್ರೂರರಾಗಿ ಎಂಬ ಅರ್ಥ. ಅದೂ ಅಲ್ಲದೆ ಹುಲಿಯು ಗೋವಿನ ಶತ್ರುವಾಗಿ ಗೋಭಕ್ಷನೂ ಆಗಿದೆ ಎಂಬುದು ಜನ ಜನಿತ. ಇಂತಹ ಗೋ ಭಕ್ಷಕ ಹುಲಿಯನ್ನು ರಾಷ್ಟ್ರ ಪ್ರಾಣಿಯನ್ನಾಗಿ ಮಾಡಿದ್ದು, ಗೋ ಭಕ್ಷಕರಿಗೆ ಬೆಂಬಲವೂ ಆಗುವುದಿಲ್ಲವೇ?
ಅದುವೇ ಗೋವನ್ನು ಮುದ್ರಿಸಿದರೆ?
ಗೋಭಕ್ಷಣೆಗೆ ಆಸ್ಪದವೂ ಇಲ್ಲ ಎಂಬ ಚಿಂತನೆಯೂ ಇರಬಹುದು ಎಂದು ಅನ್ನಿಸುವುದು ತಪ್ಪದೀತೇ? ಗೋವು ಬೇಧಭಾವ ಇಲ್ಲದೆ ಹಾಲುಣಿಸುವುದು ಎಲ್ಲರಿಗೂ ತಿಳಿದಿದೆ. ಗೋಭಕ್ಷಕನನ್ನೂ ಹಾಲು ನೀಡಿ ಪೋಷಿಸುತ್ತದೆ, ರಕ್ಷಕನನ್ನೂ ಪೋಷಿಸುವಂತಹ ಮುಗ್ದ ದೇವತೆ ಕಾಮಧೇನು. ಇಂತಹ ಉತ್ತಮ ಸಂದೇಶ ನೀಡುವ ಚಿನ್ಹೆಯು ರಾಷ್ಟ್ರದ ಲಾಂಛನದೊಳಿರಬೇಕಾದುದು ಧರ್ಮ. ಅದು ಗೋಭಕ್ಷಣಾಸಕ್ತರಿಗೆ ಇದು ಬಹುಷಃ ಬೇಕಿರಲಿಲ್ಲ ಎಂದು ಕಾಣುತ್ತದೆ.
ತಾಯಿಯನ್ನು ಒಂದು ಮಗು ಕಳೆದುಕೊಂಡರೆ ಮೊರೆ ಹೋಗುವುದು ಹುಲಿಯ ಹಾಲಿಗಲ್ಲ, ಹಸುವಿನ ಹಾಲಿಗೆ. ಇಷ್ಟು ತಿಳಿದರೂ ಗೋ ಹತ್ಯೆಗೆ ಬೆಂಬಲ ನೀಡುತ್ತಾರೆ ಎಂದರೆ ಇದಕ್ಕಿಂತ ಹೊಲಸು ಸ್ವಾತಂತ್ರ್ಯ ಇನ್ಯಾವುದಿದೆ?
ಗೋ ರಕ್ಷಣೆಗೆ, ಗೋವಿನ ಗೌರವಕ್ಕೆ ಇರುವ ಲಾಂಛನದ ಹೊಸ ಶಾಸನ ಬರುವಂತೆ ಮಾಡುವುದು ಪ್ರಜೆಗಳ ಕೈಯಲ್ಲೇ ಇದೆ. ಗೋ ಮಾತೆಗೆ ಆಗುವ ಹಿಂಸೆಯನ್ನು ತಡೆಯಲು ನಾವೆಲ್ಲರೂ 2019 ರ ಚುನಾವಣೆಯಲ್ಲಿ ಮೋದಿಯವರ ನೇತೃತ್ವದ ಭಾರತೀಯ ಜನತಾ ಪಕ್ಷವನ್ನು ಪರಿಪೂರ್ಣ ಶಾಸನವನ್ನು ಜಾರಿಗೆ ತರುವಂತಹ ಸಂಖ್ಯಾಬಲವನ್ನು ಏರಿಸಲು ಆಯ್ಕೆ ಮಾಡಿದರೆ ಗೋ ಹತ್ಯೆಗೆ ಕಡಿವಾಣವೂ, ಗೋ ಹಂತಕರ ನಿರ್ನಾಮವೂ ಆದೀತು. ಅದು ನಮ್ಮೆಲ್ಲರ ಕೈಯಲ್ಲಿದೆ.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post